ಯಾವ ಕ್ಷೇತ್ರದಲ್ಲಿ ಸ್ಪರ್ಧಿಸಿದರೂ ಸಿದ್ದರಾಮಯ್ಯ ಸೇಫ್: ಮಾಜಿ ಸಚಿವ ಹೆಚ್.ಸಿ. ಮಹದೇವಪ್ಪ

ರಾಜಕೀಯ

ಬೆಂಗಳೂರು: ಯಾವ ಕ್ಷೇತ್ರದಲ್ಲಿ ಸ್ಪರ್ಧಿಸಿದರೂ ಸಿದ್ದರಾಮಯ್ಯ ಸೇಫ್ ‘ ಎಂದು ಮಾಜಿ ಸಚಿವ ಹೆಚ್.ಸಿ. ಮಹದೇವಪ್ಪ ಹೇಳಿಕೆ ನೀಡಿದ್ದಾರೆ. ಈ ಸಂಬಂಧ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಕೋಲಾರದಲ್ಲಿ ನಿಂತರೆ ಗೆಲ್ಲುತ್ತಾರಾ’ ಎಂಬ ಪ್ರಶ್ನೆಗೆ ಉತ್ತರಿಸಿ, ‘ರಾಜ್ಯದಲ್ಲಿ‌ 51 ಮೀಸಲು ಕ್ಷೇತ್ರಗಳಿವೆ. ಈ ಕ್ಷೇತ್ರಗಳನ್ನು ಬಿಟ್ಟು ಎಲ್ಲೇ ನಿಂತರೂ ಸಿದ್ದರಾಮಯ್ಯ ಗೆಲ್ಲುತ್ತಾರೆ’ ಎಂದರು. ಇನ್ನೂ ಪಂಚರತ್ನ ರಥಯಾತ್ರೆಯಲ್ಲಿ ಕುಮಾರಸ್ವಾಮಿ ಸಿದ್ದರಾಮಯ್ಯರನ್ನ ಟಾರ್ಗೆಟ್ ಮಾಡುತ್ತಿದ್ದಾರೆ’ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ‘ಬಿಜೆಪಿ, ಜೆಡಿಎಸ್ ಗೆ ಕಾಂಗ್ರೆಸ್ ಅಧಿಕಾರಕ್ಕೆ ಬರಬಾರದು ಅಂತ ಇದೆ. ಕಾಂಗ್ರೆಸ್ ಅಧಿಕಾರಕ್ಕೆ ಬರಬಾರದು ಅಂದರೆ‌ ಮಾಸ್ ಲೀಡರ್ ಸಿದ್ದರಾಮಯ್ಯರವರನ್ನೇ ಟಾರ್ಗೆಟ್ ಮಾಡಬೇಕು.

ಅವರ ಮೇಲೆ ಅಟ್ಯಾಕ್ ಮಾಡಿದರೆ ಪಕ್ಷ ಸೋಲುತ್ತದೆ ಅಂತ ಅಂದುಕೊಂಡಿದ್ದಾರೆ, ಆದರೆ 2023 ರಲ್ಲಿ ಕಾಂಗ್ರೆಸ್ ಪಕ್ಷವೇ ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತದೆ’ ಎಂದರು. ಇನ್ನೂ ಬಿಜೆಪಿಯ ಎಸ್ ಟಿ ಸಮಾವೇಶ ಕುರಿತು ಕಿಡಿ ಕಾರಿ, ‘ಬಿಜೆಪಿಗೆ ಸಾಮಾಜಿಕ ನ್ಯಾಯ,ಸಮಾನತೆ, ಮೀಸಲಾತಿ, ಸಂವಿಧಾನದಲ್ಲಿ ನಂಬಿಕೆ ಇಲ್ಲ. ಇಂತಹ ಪಕ್ಷ ನೊಂದ ಸಮುದಾಯಗಳ ಸಮಾವೇಶ ಮಾಡುತ್ತೇವೆ ಅಂತ ಮೊಸಳೆ ಕಣ್ಣೀರು ಹಾಕುತ್ತದೆ. ಸಂವಿಧಾನದ ಅಶಯ ಜಾರಿ ಮಾಡೋಕೆ ಎಳ್ಳಷ್ಟು ಬಿಜೆಪಿಗೆ ಇಷ್ಟ ಇಲ್ಲ.ಅ ಆಶಯಗಳನ್ನ ಜಾರಿ‌ ಮಾಡೋದು ಕಾಂಗ್ರೆಸ್ ‌ಮಾತ್ರ’ ಎಂದು ಹೇಳಿದ್ದಾರೆ.