ಮೈಸೂರು: ಸಂವಿಧಾನಕ್ಕೆ ತಿದ್ದುಪಡಿಗೆ ಅವಕಾಶವಿದೆ. ಆದರೆ ಸಂವಿಧಾನವನ್ನು ತಿರುಚಲು ಎಂದಿಗೂ ಅವಕಾಶವಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ(HC Mahadevappa) ತಿಳಿಸಿದ್ದಾರೆ. ಇಂದು ಜಿಲ್ಲಾ ಪತ್ರಕರ್ತರ ಸಂಘದಲ್ಲಿ ಪತ್ರಕರ್ತರೊಂದಿಗೆ ಸಂವಾದದಲ್ಲಿ ಮಾತನಾಡಿದ ಅವರು, ಸಂವಿಧಾನಕ್ಕೆ ತಿದ್ದುಪಡಿಗೆ ಅವಕಾಶವಿದೆ. ತಿರುಚಲು ಅವಕಾಶವಿಲ್ಲ. ಆಶ್ವಾಸನೆಗಳು ಸಂವಿಧಾನದ ಕಾನೂನುಗಳಲ್ಲ.
ಪಠ್ಯ ಪರಿಷ್ಕರಿಸಿದ ವೇಳೆ ಅನಗತ್ಯ ವಿಚಾರ ಹಾಕಿದರೆ ಅದನ್ನು ಅಭ್ಯಸಿಸುವ ಯುವ ಸಮೂಹ ದಾರಿ ತಪ್ಪಲಿದೆ ಎಂದು ಅವರು ತಿಳಿಸಿದರು. ಬಲವಂತದ ಮತಾಂತರಕ್ಕೆ ಸಂವಿಧಾನದಲ್ಲೂ ಅವಕಾಶವಿಲ್ಲ. ಆದರೆ ಸ್ವಯಂ ಪ್ರೇರಿತ ಮತಾಂತರ ಎಲ್ಲರೂ ಹಕ್ಕು ಎಂಬುದಾಗಿ ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ. ಗೋಹತ್ಯೆ ನಿಷೇಧ ವಿಚಾರವಾಗಿ ನಾನು ಸಿದ್ದರಾಮಯ್ಯ ದನ, ಎಮ್ಮೆಗಳ ಜತೆಗೆ ಬೆಳೆದಿದ್ದು, ಅದರ ಅರಿವು ನಮಗೂ ಹೆಚ್ಚಾಗಿ ಗೊತ್ತಿದೆ ಎಂದರು.