ಬೆಂಗಳೂರು;- ನಾಡ ದೇವಿ ಭುವನೇಶ್ವರಿ ದೇವಿಯ ಹೆಸರಿನಲ್ಲಿ ಭವನವನ್ನು ನಿರ್ಮಿಸುತ್ತೇವೆ ಎಂದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಸಂಬಂಧ ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡಿ, 68 ಜನ ಸಾಧಕರಿಗೆ ಪ್ರಶಸ್ತಿಗಳನ್ನು ನೀಡಿದ್ದೇವೆ. 10 ಸಂಘ ಸಂಸ್ಥೆಗಳಿಗೂ ಪ್ರಶಸ್ತಿ ನೀಡಿದ್ದೇವೆ. ಕರ್ನಾಟಕ ಎಂದು ಮರುನಾಮಕರಣವಾಗಿ 50 ವರ್ಷ ಪೂರೈಸಿದೆ. ಹೀಗಾಗಿ ಸಂಘ ಸಂಸ್ಥೆಗಳಿಗೆ ಪ್ರಶಸ್ತಿ ನೀಡಿದ್ದೇವೆ. ಕರ್ನಾಟಕ ರಾಜ್ಯ 1956 ನವೆಂಬರ್ ಏಕೀಕರಣ ಆಯ್ತು. ಆ ಸಂದರ್ಭದಲ್ಲಿ ಮೈಸೂರು ರಾಜ್ಯ ಅಂತ ಹೆಸರುವಾಸಿಯಾಯಿತು. ದೇವರಾಜ್ ಅರಸ್ ಅವರು ಮೈಸೂರು ರಾಜ್ಯದ ಬದಲಿಗೆ, ಕರ್ನಾಟಕ ರಾಜ್ಯ ಎಂದು ಮರುನಾಮಕರಣ ಮಾಡಿದ್ದಾರೆ ಎಂದರು.
ಭಾಷೆ, ನೆಲ, ಜಲ, ಪರಂಪರೆ, ಅಭಿವೃದ್ಧಿ, ವಿಚಾರಧಾರೆಯನ್ನು ರೂಪಿಸುವಂತಹ ಕೆಲಸವನ್ನು ಈ ತಿಂಗಳು ಮಾಡುತ್ತೇವೆ. ಹಂಪಿಯಿಂದ ಈ ಕಾರ್ಯಕ್ರಮ ಆರಂಭವಾಗಲಿದೆ. ಕರ್ನಾಟಕ ಸಂಭ್ರಮ 50 ಎನ್ನುವ ಹೆಸರಿನಲ್ಲಿ ಕಾರ್ಯಕ್ರಮ ಮಾಡಲಾಗುತ್ತದೆ. ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಎನ್ನುವ ಘೋಷಾವಾಕ್ಯದೊಂದಿದೆ ಈ ತಿಂಗಳು ಕಾರ್ಯಕ್ರಮ ನಡೆಯಲಿದೆ. 95% ಆಯ್ಕೆಯ ಸಮಿತಿಯವರು ಶಿಫಾರಸ್ಸು ಮಾಡಿದ ಹೆಸರುಗಳನ್ನೆ, ಇಂದು ಪ್ರಶಸ್ತಿಗೆ ಆಯ್ಕೆ ಮಾಡಿಕೊಂಡಿದ್ದೇವೆ. ನಾಡ ದೇವಿ ಭುವನೇಶ್ವರಿ ದೇವಿಯ ಹೆಸರಿನಲ್ಲಿ ಭವನವನ್ನು ನಿರ್ಮಿಸುತ್ತೇವೆ ಎಂದು ತಿಳಿಸಿದರು.
ಬಸವಣ್ಣನನ್ನು ರಾಜ್ಯದ ಸಾಂಸ್ಕೃತಿಕ ನಾಯಕನ್ನಾಗಿ ಘೋಷಣೆ ಕುರಿತು ಚರ್ಚೆ: ಹನ್ನರಡನೇ ಶತಮಾನದಲ್ಲಿ ಸಮಾನತೆಗಾಗಿ ಶ್ರಮಿಸಿದ ಬಸವೇಶ್ವರರನ್ನು ರಾಜ್ಯದ ಸಾಂಸ್ಕೃತಿಕ ನಾಯಕನ್ನಾಗಿ ಘೋಷಣೆ ಮಾಡುವುದು ಹಾಗೂ ಶಾಲಾ – ಕಾಲೇಜುಗಳಲ್ಲಿ ವಚನ ಸಂಸ್ಕೃತಿ ಜಾರಿ ಮಾಡುವ ಸಂಬಂಧ ಸರ್ಕಾರ ಗಂಭೀರವಾಗಿ ಚರ್ಚೆ ನಡೆಸಿದೆ ಎಂದು ಹೇಳಿದರು.