ಬೆಂಗಳೂರು: ಬೆಸ್ಕಾಂ ಡಿಜಿಟಲ್ ಮೀಟರ್ ಗಳು ಗ್ರಾಹಕರಿಗೆ ತಪ್ಪದ ತಲೆನೋವಾಗಿ ಪರಿಣಮಿಸಿದೆ. ನೂತನ ಡಿಜಿಟಲ್ ಮೀಟರ್ ಗಳಿಂದ ತಾವು ಬಳಕೆ ಮಾಡಿದ್ದಕ್ಕಿಂತ 30 ರಿಂದ 50% ಹೆಚ್ಚಿನ ಬಿಲ್ ತೆರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬೆಸ್ಕಾಂ ಅಧಿಕಾರಿಗಳ ವಿರುದ್ಧ ಗ್ರಾಹಕರು ಆಕ್ರೋಶ ಹೊರ ಹಾಕಿದ್ದಾರೆ.
ಬೆಸ್ಕಾಂ ಕಳ್ಳಾಟದಿಂದ ಸಾವಿರ ಸಾವಿರ ದೂರು ದಾಖಾಲಾದ್ರೂ ಅಧಿಕಾರಿಗಳು ಮಾತ್ರ ಬುದ್ದಿ ಕಲಿತಿಲ್ಲ. ಹಳೆಯ ಬಿಲ್ ಗಿಂತಲೂ ಡಬಲ್ ಬಿಲ್ ಬರುತ್ತಿದ್ದು, ಈ ಸಂಬಂಧ ಗ್ರಾಹಕರು ಸಾವಿರ ಸಾವಿರ ದೂರು ದಾಖಾಲಿಸಿದರು,
ಅಧಿಕಾರಿಗಳು ಮಾತ್ರ ತಲೆ ಕೆಡಿಸಿಕೊಳ್ಳುತ್ತಿಲ್ಲ. ಅದರ ಭಾಗವಾಗಿ, ಗೋರಿ ಪಾಳ್ಯದ ನಿವಾಸಿ ಲಲಿತಮ್ಮ ಮನೆಗೆ ಏಕಾಏಕಿ ಕರೆಂಟ್ ಬಿಲ್ ಏರಿಕೆ ಆಗಿದ್ದು, ಜನವರಿ ತಿಂಗಳಲ್ಲಿ 89 ಯುನಿಟ್ ಗೆ 645ರೂ ಬಿಲ್ ಮಾಡಿದ್ದ ಬೆಸ್ಕಾಂ, ಫೆಬ್ರವರಿಯಲ್ಲಿ 74 ಯುನಿಟ್ ಕೆರೆಂಟ್ ಬಳಕೆಗೆ 552 ರೂ ಎಂದು ಬಿಲ್ ಮಾಡಿದೆ. ಫೆಬ್ರವರಿ ತಿಂಗಳ ಬಿಲ್ ನಲ್ಲಿ ಬಾಕಿ ಮತ್ತು ಒಟ್ಟು ಮೊತ್ತ 2404 ರೂ ಎಂದು ಹೇಳಿದೆ. ಇದರಿಂದ ಏಕಾಏಕಿ 70% ಏರಿಕೆ ಮಾಡಿರುವ ಬಿಲ್ ಕಂಡು ಲಲತಿಮ್ಮ ಶಾಕ್ ಆಗಿದ್ದು, ಇದೀಗ ಮಾರ್ಚ್ ತಿಂಗಳ ಕರೆಂಟ್ ನ 2852 ರೂ ಬಿಲ್ ಕಂಡು ಕಂಗಾಲಾಗಿದ್ದಾರೆ. ನಾವು ಬಡವರು ಸಾರ್.. ಏಕಾ ಏಕಿ ಇಷ್ಟೊಂದು ಕೆರೆಂಟ್ ಬಿಲ್ ಬಂದ್ರೆ ಹೇಗೆ ಕಟ್ಟೋದು ಎಂದು ತಮ್ಮ ದುಖಃ ತೋಡಿಕೊಂಡಿದ್ದಾರೆ