ಚಾಮರಾಜನಗರ:- ಜಿಲ್ಲೆಯ ಬಿಳಿಗಿರಿರಂಗನಾಥ ಹುಲಿ ಸಂರಕ್ಷಿತ ಪ್ರದೇಶದ ಬೈಲೂರು ವನ್ಯಜೀವಿ ವಲಯದ ಪಿ.ಜಿ ಪಾಳ್ಯ ಬಳಿ 60 ವರ್ಷದ ಕಾಡಾನೆ ಮೃತ ದೇಹ ಪತ್ತೆಯಾಗಿದೆ.
ಚಾಮರಾಜನಗರ ಜಿಲ್ಲೆಯ ಬಿ.ಆರ್.ಟಿ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಹನೂರು ತಾಲೂಕಿನ ಬೈಲೂರು ವನ್ಯಜೀವಿ ವಲಯ, ಪಿ.ಜಿ.ಪಾಳ್ಯ ಶಾಖೆ, ಮಾವತ್ತೂರು ‘ಎ’ ಗಸ್ತಿನಲ್ಲಿ ಸಿಬ್ಬಂದಿಗಳಿಗೆ ಬಿದಿರು ಕೆರೆ ಅರಣ್ಯ ಪ್ರದೇಶದಲ್ಲಿ ಮೃತ ಆನೆ ಪತ್ತೆಯಾಗಿದೆ.
ಬಿ.ಆರ್.ಟಿ ಹುಲಿ ಸಂರಕ್ಷಿತ ಪ್ರದೇಶ, ಸಂರಕ್ಷಣಾಧಿಕಾರಿಗಳು ಮತ್ತು ನಿರ್ದೇಶಕರು,
ಮಾರ್ಗದರ್ಶನದ ಅನ್ವಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಕೆ. ಸುರೇಶ್, ವಲಯ ಅರಣ್ಯ ಅಧಿಕಾರಿ ಪ್ರಮೋದ್ ಎ.,ರವರ ಸಮಕ್ಷಮ ಹಾಗೂ ಸಿಬ್ಬಂದಿಯವರು ಹಾಜರಾತಿಯಲ್ಲಿ ನಿಯಮಾನುಸಾರ ಇಲಾಖಾ ಪಶುವೈದ್ಯಾಧಿಕಾರಿ ಡಾ| ವಾಸಿಂ ಮಿರ್ಜಾ ರವರು ಮೃತ ಆನೆಯ ಮರಣೋತ್ತರ ಶವ ಪರೀಕ್ಷೆ ನಡೆಸಿದರು.
ಒಂದೆರಡು ದಿನದ ಹಿಂದೆ ಸ್ವಾಭಾವಿಕವಾಗಿ ಮೃತಪಟ್ಟಿರುವುದೆಂದು ಖಚಿತಪಡಿಸಿಕೊಳ್ಳಲಾಯಿತು. ನಿಯಮಾನುಸಾರ ಅಂತ್ಯ ಕ್ರಿಯೆ ನಡೆಯಿತು.
ಇತ್ತೀಚೆಗೆ ಬಂಡೀಪುರ ಬಿಳಿಗಿರಿರಂಗನಬೆಟ್ಟ ಹುಲಿ ಸಂರಕ್ಚಿತ ಅರಣ್ಯ ಪ್ರದೇಶ ಹಾಗೂ ಮಲೆಮಹದೇಶ್ವರಬೆಟ್ಟ ಅರಣ್ಯಗಳಲ್ಲಿ ಆನೆಗಳು ಹಲವು ಕಾರಣಗಳಿಂ ಮೃತಪಟ್ತಾ ಇರೋದನ್ನು ನೋಡಿಪ್ರಾಣಿಯರು ಆತಂಕ ಪಡುವಂತಾಗಿದೆ.