ಭೋಪಾಲ್: ಜನಸಂಖ್ಯಾ ನಿಯಂತ್ರಣದ ಕುರಿತು ಮಾತನಾಡುವ ವೇಳೆ ಮಹಿಳೆಯರ ಕುರಿತು ವಿವಾದಾತ್ಮಕ ಹೇಳಿಕೆ ನೀಡಿರುವ ಬಿಹಾರ ಸಿಎಂ ನಿತೀಶ್ ಕುಮಾರ್ (Nitish Kumar) ವಿರುದ್ಧ ಪ್ರಧಾನಿ ನರೇಂದ್ರ ಮೋದಿ (Narendra Modi) ಗುಡುಗಿದ್ದಾರೆ. ಮಧ್ಯಪ್ರದೇಶ (Madhya Pradesh) ಗುಣ ಎಂಬಲ್ಲಿ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಪ್ರಧಾನಿ, ಮಹಿಳೆಯರ ವಿರುದ್ಧ ನೀಡುವ ಹೇಳಿಕೆಗಳು ದೇಶವನ್ನೇ ಅವಮಾನಿಸುವಂತಿದೆ ಎಂದು ಕಿಡಿಕಾರಿದ್ದಾರೆ. ಭಾರತೀಯ ಮೈತ್ರಿಕೂಟದ ದೊಡ್ಡ ನಾಯಕರೊಬ್ಬರು ಬಿಹಾರ ವಿಧಾನಸಭೆಯೊಳಗೆ ಮಹಿಳೆಯರಿಗೆ ಅವಾಚ್ಯ ಶಬ್ದಗಳನ್ನು ಬಳಸಿದ್ದಾರೆ.
ಇಂಡಿಯಾ ಒಕ್ಕೂಟದ ಯಾವೊಬ್ಬ ನಾಯಕನೂ ಇದರ ವಿರುದ್ಧ ಒಂದೇ ಒಂದು ಮಾತನ್ನೂ ಆಡಲಿಲ್ಲ. ಅವರಿಗೆ ನಾಚಿಕೆಯಾಗಬೇಕು. ಮಹಿಳೆಯರ ಬಗ್ಗೆ ಈ ರೀತಿ ಯೋಚಿಸುವರು ನಿಮಗೆ ಏನಾದರೂ ಒಳ್ಳೆಯದನ್ನು ಮಾಡುವುದು ಸಾಧ್ಯವೇ ಎಂದು ಪ್ರಧಾನಿ ಮೋದಿ ಪ್ರಶ್ನಿಸಿದರು. ತಾಯಂದಿರು ಮತ್ತು ಸಹೋದರಿಯರ ಬಗ್ಗೆ ಕೆಟ್ಟ ಮನೋಭಾವವನ್ನು ಹೊಂದಿರುವವರು ಇಂದು ನಮ್ಮ ದೇಶವನ್ನು ಅವಮಾನಿಸುತ್ತಿದ್ದಾರೆ. ಇದರಿಂದಲೇ ಗೊತ್ತಾಗುತ್ತೇ ನೀವು ಎಷ್ಟು ಕೆಳಮಟ್ಟಕ್ಕೆ ಇಳಿದಿದ್ದೀರಿ ಎಂದು ಅವರು ಹೇಳಿದರು.