ನವದೆಹಲಿ: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 12,591 ಹೊಸ ಕೋವಿಡ್-19 ಪ್ರಕರಣಗಳು ದಾಖಲಾಗಿವೆ. ಇದು ನಿನ್ನೆಗಿಂತ 20 ಶೇಕಡಾ ಹೆಚ್ಚಾಗಿದೆ. ಈ ಮಧ್ಯೆಯೇ ವೈದ್ಯಕೀಯ ತಜ್ಞರು Omicron ಉಪ-ವೇರಿಯಂಟ್ XBB.1.16 ಪ್ರಕರಣಗಳ ಉಲ್ಬಣವನ್ನು ಉಂಟುಮಾಡಬಹುದು ಎಂದು ಹೇಳಿದ್ದಾರೆ.
ಆದಾಗ್ಯೂ, ಭಯಪಡುವ ಅಗತ್ಯವಿಲ್ಲ ಮತ್ತು ಜನರು ಕೋವಿಡ್-ಸೂಕ್ತ ನಡವಳಿಕೆಯನ್ನು ಅನುಸರಿಸಬೇಕು ಮತ್ತು ಅವರ ಬೂಸ್ಟರ್ ಶಾಟ್ಸ್ಗಳನ್ನು ಪಡೆಯಬೇಕು ಎಂದು ಅವರು ತಿಳಿಸಿದ್ದಾರೆ. ನಿನ್ನೆ ದೇಶದಲ್ಲಿ 10,542 ಹೊಸ ಕರೋನ ವೈರಸ್ ಪ್ರಕರಣಗಳು ಹಾಗೂ 38 ಸಾವುಗಳು ದಾಖಲಾಗುವ ಮೂಲಕ ಸಕ್ರಿಯ ಪ್ರಕರಣಗಳು 63,562 ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳು ಬುಧವಾರ ತಿಳಿಸಿದೆ.