ಬೆಂಗಳೂರು: ಬೊಮ್ಮಾಯಿ ಸರ್ಕಾರವು ಭ್ರಷ್ಟಾಸುರ ಸರ್ಕಾರ ಎಂದು ರಂದೀಪ್ ಸಿಂಗ್ ಸುರ್ಜೇವಾಲಾ ಟೀಕೆ ಮಾಡಿದ್ದಾರೆ. ಈ ಸಂಬಂಧ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಇದನ್ನು ಬೊಮ್ಮಾಯಿ ಸರ್ಕಾರ ಎನ್ನುವುದಕ್ಕಿಂತ ಭ್ರಷ್ಟಾಸುರ ಸರ್ಕಾರ ಎನ್ನಬೇಕು.
ಬೊಮ್ಮಾಯಿ ಸರ್ಕಾರ ಅಪರಾಧಿಗಳ ಜೊತೆಗೆ ಶಾಮೀಲಾಗಿದೆ. ಬಿಜೆಪಿ ಶಾಸಕನ ಮನೆಯಲ್ಲಿ ಸಿಕ್ಕ 8 ಕೋಟಿ ಹಣ ಮೇಲೆ ಹೋಗುತ್ತಿತ್ತು. ಹೀಗಾಗಿ ಶಾಸಕರನ್ನು ಅರೆಸ್ಟ್ ಮಾಡಲಿಲ್ಲ ಎಂದು ದೂರಿದರು. ಬಿಜೆಪಿಯವರು 40% ಸರ್ಕಾರ ಎಂಬ ಆರೋಪಕ್ಕೆ ಸಾಕ್ಷಿ ತಗೊಂಡು ಬನ್ನಿ ಅಂತ ಹೇಳುತ್ತಿದ್ದರು.
ಈಗ 8 ಕೋಟಿ ಸಿಕ್ಕು ನಾಲ್ಕು ದಿನ ಕಳೆಸಿದೆ. ಆದರೂ ವಿರೂಪಾಕ್ಷಪ್ಪ ಅವರನ್ನು ಬಂಧಿಸಿಲ್ಲ. ವಿರೂಪಾಕ್ಷಪ್ಪ ಅವರನ್ನು ಯಾವಾಗ ಬಂಧಿಸುತ್ತಿರಿ ಎಂದು ಬಿಜೆಪಿ ಸರ್ಕಾರಕ್ಕೆ ಚಾಟಿ ಬೀಸಿದರು. ಜನರಿಗೆ ನಾವು ಹಲವು ಭರವಸೆಗಳನ್ನು ನೀಡಿದ್ದೇವೆ. ಇಂದು ಆ ಭರವಸೆಗಳಿಗೆ ಗ್ಯಾರಂಟಿ ಕಾರ್ಡ್ ನೀಡುತ್ತಿದ್ದೇವೆ. ಜಾತಿ, ಧರ್ಮದ ಬಂಧನ, ಬೇಧ ಭಾವ ಇಲ್ಲದೇ ಮಹಿಳಾ ಯಜಮಾನಿಗೆ 2000 ರೂಪಾಯಿ ಸಹಾಯ ಧನ, 200 ಯುನಿಟ್ ವಿದ್ಯುತ್ ಫ್ರೀ, 10 ಕೆಜಿ ಅಕ್ಕಿ ಕೊಡಲು ನಿರ್ಧರಿಸಿದ್ದೇವೆ ಎಂದು ಹೇಳಿದರು.