ದೇವದುರ್ಗ;– ತಾಲೂಕಿನಲ್ಲಿ ನರೇಗಾ ಕಾಮಗಾರಿಯಲ್ಲಿ ಭಾರೀ ಭ್ರಷ್ಟಾಚಾರ ನಡೆದ ಹಿನ್ನೆಲೆ ಕಳೆದ ಮೂರು ವರ್ಷಗಳಲ್ಲಿ ನಡೆದ ಕಾಮಗಾರಿ ಬಗ್ಗೆ ತನಿಖೆ ಆರಂಭವಾಗಿದೆ. 15ನೇ ಹಣಕಾಸಿನ ಯೋಜನೆ ಅಡಿ ಕಾಮಗಾರಿಗಳ ಬಗ್ಗೆ ತನಿಖೆ ಶುರುವಾಗಿದೆ.
2020ರಿಂದ 2023ರ ಮಾರ್ಚ್ ವರೆಗೆ ನಡೆದ ದೇವದುರ್ಗ ತಾ. 33 ಗ್ರಾ.ಪಂಗಳಲ್ಲಿ ಕಾಮಗಾರಿ ಬಗ್ಗೆ ತನಿಖೆ ಆರಂಭವಾಗಿದ್ದು, ತನಿಖೆ ವೇಳೆ 14-15ನೇ ಸಾಲಿನ ಹಣಕಾಸು ಯೋಜನೆ ಅಡಿ ಕೈಗೊಂಡ ಕಾಮಗಾರಿ ಬಗ್ಗೆ ಪರಿಶೀಲನೆ ಮಾಡಲಿದ್ದಾರೆ.
ಕಾಮಗಾರಿಗಳ ಸಾಮಾಗ್ರಿಗಳನ್ನು ಪೂರೈಸುವ ಸಂಸ್ಥೆಗೆ 65 ಕೋಟಿ ರೂ. ವರ್ಗಾವಣೆ ಮಾಡಲಾಗಿದ್ದು, ಒಂದೇ ಸಂಸ್ಥೆಗೆ 65ಕೋಟಿ ರೂ. ಪಾವತಿ ಬಗ್ಗೆ ತನಿಖೆ ನಡೆಸಲಾಗುತ್ತಿದೆ. 7 ಅಧಿಕಾರಿಗಳು ಒಳಗೊಂಡ 17 ತಂಡಗಳಿಂದ ತನಿಖೆ ಶುರುವಾಗಿದ್ದು, 28 ಗ್ರಾ.ಪಂ.ಗಳಿಗೆ ತನಿಖಾ ತಂಡ ಭೇಟಿ ನೀಡಿ ಕಾಮಗಾರಿಗಳ ಸ್ಥಳ ಪರಿಶೀಲನೆವ ಮಾಡಿದ್ದಾರೆ.
ಗ್ರಾ.ಪಂ.ಸಿಬ್ಬಂದಿ ಮತ್ತು ಅಧಿಕಾರಿಗಳ ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಖಾತೆಯ ಮಾಹಿತಿ ಸಂಗ್ರಹ ಮಾಡುತ್ತಿದ್ದು, ಸಾಮಾಜಿಕ ಲೆಕ್ಕ ಪರಿಶೋಧನಾ ನಿರ್ದೇಶನಾಲಯದಿಂದ ತನಿಖೆಗೆ ಆದೇಶಿಸಲಾಗಿದೆ.