ರಾಜ್ಯ ಸರ್ಕಾರದ ಖಜಾನೆ ಖಾಲಿಯಾಗಿರುವ ಹಿನ್ನೆಲೆಯಲ್ಲಿ ಏಕಾಏಕಿ ಪೆಟ್ರೋಲ್-ಡೀಸೆಲ್, ತರಕಾರಿ ಬೆಲೆ ಏರಿಸಿ ಬಡವರ ಹೊಟ್ಟೆ ಮೇಲೆ ಹೊಡೆದ ರಾಜ್ಯ ಕಾಂಗ್ರೆಸ್ ಸರ್ಕಾರ, ಈಗ ಹಾಲಿನ ದರ ಕೂಡ ಹೆಚ್ಚಿಸಿದೆ.
ಕೊಟ್ಟು ಕಿತ್ತುಕೊಳ್ಳುವುದು ಎಂದರೆ ಇದೇ ಅನಿಸುತ್ತದೆ ಎಂದು ಜೆಡಿ ಎಸ್ ರಾಜ್ಯ ಉಪಾಧ್ಯಕ್ಷ ಹಾಗೂ ಕರ್ನಾಟಕ ವಿಧಾನ ಪರಿಷತ್ ಶಾಸಕರಾದ ಟಿ. ಎ.ಶರವಣ ಅವರು ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿ ಮಾತನಾಡಿದ ಅವರು, ರೈತರಿಗೆ ಕೊಡುತ್ತಿದ್ದ ನೆರವನ್ನೂ ರದ್ದು ಮಾಡಿ, ಇದೀಗ ಹಾಲಿನ ಸಬ್ಸಿಡಿಯನ್ನು ನಿಲ್ಲಿಸಿಕೊಂಡು, ದರವನ್ನು ಹೆಚ್ಚಿಸಿರುವ ಈ ಸರಕಾರ ಕೂಡಲೇ ತೊಲಗಬೇಕು.
ರಾಜ್ಯದ ಆರ್ಥಿಕ ಸ್ಥಿತಿ ಕುಸಿದು ಬಿದ್ದಿದ್ದು,ಚಿಲ್ಲರೆ ಹಣವನ್ನು ಬಡವರ ಜೇಬಿನಿಂದ ಕದಿಯಲು ಹೊರಟ ಸಿದ್ದರಾಮಯ್ಯ ಸರಕಾರ ಕಳ್ಳ ಸರಕಾರ ಎನ್ನುವುದನ್ನು ವಿಧಿಯಿಲ್ಲದೆ ಹೇಳಬೇಕಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.