ವಿಜಯಪುರ: ವೋಟಿಂಗ್ ಬೆನ್ನಲ್ಲೆ ಮತ ಎಣಿಕೆಗೆ ಕೌಂಟ್ಡೌನ್ ಶುರುವಾಗಿದ್ದು, ದೇವರಹಿಪ್ಪರಗಿ ಮತಕ್ಷೇತ್ರದಲ್ಲಿ ಬೆಟ್ಟಿಂಗ್ ಹವಾ ಜೋರಾಗಿದೆ.
‘ಈ ಸಲ ಕಪ್ ನಮ್ಮದೆ’ ಎಂದು ಮೂರು ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು, ಅಭಿಮಾನಿಗಳು ತಮ್ಮ ತಮ್ಮ ನಾಯಕರ ಪರವಾಗಿ ಬೆಟ್ಟಿಂಗ್ ಕಟ್ಟುತ್ತಿದ್ದಾರೆ. ಚುನಾವಣಾ ಸಮೀಕ್ಷೆಗಳು ಏನೇ ಹೇಳಿದರೂ ನಂಬದ ಸ್ಥಿತಿಯಲ್ಲಿರದೆ ಗೆಲುವು ಪಕ್ಕಾ ಎಂದು ಒಳಗೊಳಗೆ ಗುಲಾಲ್ಗಾಗಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಬೆಟ್ಟಿಂಗ್ ಸಾಮರ್ಥ್ಯಗಳ ಮೇಲೆ ಅವಲಂಬಿತವಾಗಿದ್ದು, ಚಿನ್ನ, ಬೆಲೆಬಾಳುವ ವಸ್ತುಗಳು, ಬೈಕ್ಗಳು ಬೆಟ್ಟಿಂಗ್ನಲ್ಲಿ ಪ್ರಮುಖವಾಗಿವೆ. ಮೂರು ಪಕ್ಷಗಳ ಅಭಿಮಾನಿಗಳಿಗೂ ತಮ್ಮ ನಾಯಕ ಗೆಲುವು ಸಾಧಿಸಲಿದ್ದಾನೆ ಎಂದು ಬೆಟ್ಟಿಂಗ್ನಲ್ಲಿ ತೊಡಗಿದ್ದು, ಮೇ 13ರಂದು ಇದಕ್ಕೆ ತೆರೆ ಬೀಳಲಿದೆ. ನಗರ ಪ್ರದೇಶಕ್ಕಿಂತ ಗ್ರಾಮೀಣ ಭಾಗದಲ್ಲಿ ಸ್ವಾಭಿಮಾನದಿಂದ ಬೆಟ್ಟಿಂಗ್ ನಡೆಸುತ್ತಿದ್ದು, ಜಾತಿವಾರು ಲೆಕ್ಕಾಚಾರ ಮೂಲಕ ಗೆಲುವಿನ ನಗೆ ಬೀರುವ ಧಾವಂತದಲ್ಲಿದ್ದಾರೆ.
ಸೋಲು–ಗೆಲುವಿನ ಲೆಕ್ಕಾಚಾರ
ತೀವ್ರ ಕುತೂಹಲ ಕೆರಳಿಸಿದ್ದ ಅಸೆಂಬ್ಲಿಅಖಾಡದ ಫಲಿತಾಂಶ ಮಾತ್ರ ಬಾಕಿ ಉಳಿದಿದ್ದು, ಎಲ್ಲರ ಚಿತ್ತ ಮೇ 13ರತ್ತ ನೆಟ್ಟಿದೆ. ಕಳೆದ ಹಲವಾರು ತಿಂಗಳಿನಿಂದ ಮೂರು ಪಕ್ಷಗಳು ಭರ್ಜರಿ ಪ್ರಚಾರ ನಡೆಸಿ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಕ್ಷೇತ್ರ ಸಂಚಾರ ಮಾಡಿ, ಮತದಾರ ಮನವೊಲಿಕೆಗೆ ಮುಂದಾಗಿದ್ದವು. ಅಂತೂ ಇಂತೂ ಮತದಾನ ಮುಗಿದಿದ್ದು, ಫಲಿತಾಂಶಕ್ಕಾಗಿ ಚಾತಕಪಕ್ಷಿಯಂತೆ ಕಾಯುವಂತಾಗಿದೆ.
ವಿವಿಧ ರೀತಿಯ ತಂತ್ರ, ಪ್ರತಿತಂತ್ರ ರೂಪಿಸುತ್ತ ಚುನಾವಣೆ ಎದುರಿಸಿರುವ ಅಭ್ಯರ್ಥಿಗಳು, ಅಭಿಮಾನಿಗಳು ಗೆಲುವಿನ ಲೆಕ್ಕಾಚಾರದಲ್ಲಿಮುಳಗಿ ಹೋಗಿದ್ದಾರೆ. ಇಷ್ಟು ದಿನ ಚುನಾವಣೆ ಚಿಂತೆಯಾದರೆ, ಈಗ ಫಲಿತಾಂಶದ ಚಿಂತೆ ಪ್ರಾರಂಭವಾಗಿದೆ. ಮತದಾನದ ಪ್ರಮಾಣ ಯಾವ ಬೂತ್ನಲ್ಲಿಎಷ್ಟು ಮತ ಬರಬಹುದೆಂಬ ಲೆಕ್ಕಾಚಾರದಲ್ಲಿ ಕದನ ಕಲಿಗಳು ತಮ್ಮ ಬೆಂಬಲಿಗರೊಂದಿಗೆ ಭರ್ಜರಿ ಚರ್ಚೆ ನಡೆಸುತ್ತಿದ್ದಾರೆ.
ಮನೆಯಲ್ಲಿ ಕಾಲ ಕಳೆದ ಸಾಸನೂರ
ಬಿಜೆಪಿ ಅಭ್ಯರ್ಥಿ, ಶಾಸಕ ಸೋಮನಗೌಡ ಪಾಟೀಲ ಸಾಸನೂರ ಬೆಳಗ್ಗೆ ಕ್ಷೇತ್ರದ ವಿವಿಧ ಭಾಗಗಳಿಂದ ಆಗಮಿಸಿದ್ದ ಕಾರ್ಯಕರ್ತರು, ಅಭಿಮಾನಿಗಳನ್ನು ಭೇಟಿಯಾಗಿ ಚುನಾವಣೆ ಕುರಿತು ಚರ್ಚಿಸಿದರು. ಮಧ್ಯಾಹ್ನದಿಂದ ಕುಟುಂಬದವರೊಂದಿಗೆ ಜಾಲಿ ಮೂಡ್ನಲ್ಲಿದ್ದಾರೆ. ಹಲವಾರು ತಿಂಗಳಿನಿಂದ ಬಿಡುವಿಲ್ಲದೆ ಸಂಚರಿಸಿ ದಣಿದ ದೇಹಕ್ಕೆ ರೆಸ್ಟ್ ನೀಡಿದಂತಾಗಿದ್ದು, ಮನೆಯಲ್ಲಿ ಕಾಲ ಕಳೆಯುತ್ತಿದ್ದಾರೆ.
ಕ್ಷೇತ್ರದಲ್ಲಿ ಶೇ.69.35 ರಷ್ಟು ಮತದಾನ
ದೇವರಹಿಪ್ಪರಗಿ ಮತಕ್ಷೇತ್ರಾದ್ಯಂತ ಉತ್ತಮ ಮತದಾನವಾಗಿದ್ದು, ಒಟ್ಟು 252 ಬೂತ್ಗಳಲ್ಲಿ ಪ್ರತಿಶತ 69.35 ರಷ್ಟು ಮತದಾನ ದಾಖಲಾಗಿದೆ. ಕ್ಷೇತ್ರದಲ್ಲಿ ಯಾವುದೇ ಅಡೆತಡೆಯಿಲ್ಲದೆ ಶಾಂತಿಯುತ ಮತದಾನವಾಗಿದೆ.
1,12,709 ಪುರುಷ, 1,06,402 ಮಹಿಳೆ, ಇತರೆ 20 ಮತದಾರರು ಸೇರಿ ಒಟ್ಟು 2,19,131 ಮತದಾರರಲ್ಲಿ77,638 ಪುರುಷರು, 72,802 ಮಹಿಳೆಯರು, ಇತರೆ 2 ಮತದಾರರು ಸೇರಿದಂತೆ 1,50,442 ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಕಳೆದ ಸಲಕ್ಕಿಂತ ಈ ಸಲ ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿಮತದಾನವಾಗಿದ್ದು, ಅಭ್ಯರ್ಥಿಗಳ ಗೆಲುವಿನ