ಬೆಂಗಳೂರು:- ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಪಟಾಕಿ ಮಾರಾಟಗಾರರ ಸಭೆ ಜರುಗಿದೆ.
ಪಟಾಕಿ ಮಾರಾಟಗಾರರು ತಮ್ಮ ಕೆಲವು ಸಮಸ್ಯೆಗಳ ಕುರಿತಂತೆ ಹಿರಿಯ ಪೊಲೀಸ್ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.
ಅಲ್ಲದೇ ಈ ಬಾರಿ ಪಟಾಕಿ ಗ್ರಾಹಕರಿಗೆ ವರ್ತಕರು ಮಕ್ಕಳಿಗೆ ಪಟಾಕಿ ವೇಳೆ ಹಾನಿಯಾಗದಿರಲೆಂದು ಉಚಿತವಾಗಿ ಕನ್ನಡಕಗಳನ್ನು ವಿತರಿಸುವುದಾಗಿ ವರ್ತಕರು ಹೇಳಿದ್ದಾರೆ.
ಕಳೆದ ವರ್ಷ ಅತ್ತಿಬೆಲೆ ಪಟಾಕಿ ದುರಂತ ಪ್ರಕರಣ ಹಿನ್ನಲೆ ಮುನ್ನೆಚ್ಚರಿಕೆ ಕ್ರಮವಾಗಿ ನಗರ ಪೊಲೀಸ್ ಆಯುಕ್ತ ಬಿ.ದಯಾನಂದರಿಂದ ವರ್ತಕರ ಸಭೆ ಕರೆದಿದ್ದು, ನಗರದ ಎಲ್ಲಾ ವಿಭಾಗದ ಡಿಸಿಪಿಗಳು, ಅಗ್ನಿಶಾಮಕ, ಬಿಬಿಎಂಪಿ, ಬೆಸ್ಕಾಂ ಸೇರಿ ಪಟಾಕಿ ವರ್ತಕರ ಸಭೆಯಲ್ಲಿ ಭಾಗವಹಿಸಿದ್ದರು. ಪಟಾಕಿ ಮಳಿಗೆಗಳ ವ್ಯವಸ್ಥೆ, ಭದ್ರತಾ ಕ್ರಮಗಳು ಸೇರಿದಂತೆ ಲೈಸೆನ್ಸ್ ವಿಚಾರವಾಗಿ ಚರ್ಚೆ ನಡೆಸಲಾಯ್ತು. ಅನಧಿಕೃತ ಪಟಾಕಿಗಳ ಮಾರಾಟಕ್ಕೆ ಬ್ರೇಕ್, ಗ್ರೀನ್ ಪಟಾಕಿಗಳ ಮಾರಾಟಕ್ಕೆ ಮಾತ್ರ ಅನುಮತಿ ನೀಡುವುದಾಗಿ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಪಟಾಕಿ ವರ್ತಕರಿಗೆ ಸೂಚಿಸಿದ್ದಾರೆ
ಒಟ್ನಲ್ಲಿ ನಗರದಾದ್ಯಂತ 200ಕ್ಕೂ ಹೆಚ್ಚು ಪಟಾಕಿ ಮಳಿಗೆಗಳ ಸ್ಥಾಪನೆಗೆ ಸ್ಥಳ ಗುರುತಿಸಿದ್ದು ಮೈದಾನಗಳ ಪಟ್ಟಿ ಮಾಡಲಾಗಿದೆ. ಪೊಲೀಸ್ ಇಲಾಖೆ, ಅಗ್ನಿಶಾಮಕ, ಕಂದಾಯ ಇಲಾಖೆ, ಬಿಬಿಎಂಪಿ, ಬೆಸ್ಕಾಂ ಅನುಮತಿ ಪಡೆದುಕೊಂಡು ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಂಡು ಪಟಾಕಿ ಮಳಿಗೆ ತೆರೆಯುವಂತೆ ಖಡಕ್ ಸೂಚನೆ ನೀಡಲಾಗಿದೆ.