ಬೆಂಗಳೂರು:- ನ್ಯೂ ಇಯರ್ ಸೆಲೆಬ್ರೇಷನ್ ಗೆ ಕೌಂಟ್ ಡೌನ್ ಶುರುವಾಗಿದ್ದು, ನೂತನ ವರ್ಷ ಬರಮಾಡಿಕೊಳ್ಳಲು ಸಿಲಿಕಾನ್ ಸಿಟಿ ಮಂದಿ ಸಜ್ಜಾಗಿದ್ದಾರೆ.
ಸೆಲೆಬ್ರೇಷನ್ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಬೆಸ್ಕಾಂ ಅಲರ್ಟ್ ಆಗಿದೆ. ಸೆಲೆಬ್ರೇಷನ್ ನಡೆಯುವ ಸ್ಥಳಗಳಲ್ಲಿ ಬೆಸ್ಕಾಂ ಹೆಚ್ಚುವರಿ ಸಿಬ್ಬಂದಿಯ ನಿಯೋಜನೆ ಮಾಡಲಾಗಿದೆ. ಅವಘಡ ನಡೆಯದಂತೆ ಬೆಸ್ಕಾಂನಿಂದಲೂ ಮುಂಜಾಗೃತ ಕ್ರಮವಹಿಸಲಾಗಿಗೆ. ಬೆಸ್ಕಾಂ ಹಿರಿಯ ಅಧಿಕಾರಿಗಳು ಖುದ್ದು ಫಿಲ್ಡಿಗೆ ಇಳಿದಿದ್ದಾರೆ.
ಹೊಸ ವರ್ಷ ಆಚರಣೆಗೆ ಸಜ್ಜಾಗಿರುವ ನಗರದ ಮುಖ್ಯ ಪ್ರದೇಶಗಳಾಗಿರುವ ಎಂ ಜಿ ರಸ್ತೆ , ಬ್ರಿಗೇಡ್ ರಸ್ತೆ ಹಾಗೂ ಕೋರಮಂಗಲ 60 ಅಡಿ ರಸ್ತೆಯ ಎರಡೂ ಬದಿಗಳಲ್ಲಿರುವ ಬೆಸ್ಕಾಂ ವಿದ್ಯುತ್ ಕಂಬಗಳು ಹಾಗೂ ಟ್ರಾನ್ಸ್ ಫಾರ್ಮರ್ ಗಳ ಕಾರ್ಯದಕ್ಷತೆಯನ್ನು ಈಗಾಗಲೇ ಬೆಸ್ಕಾಂ ಹಿರಿಯ ಅಧಿಕಾರಿಗಳು ಪರಿಶೀಲನೆ ಮಾಡಿದ್ದಾರೆ.
ಜೋತು ಬಿದ್ದಿರುವ ವಿದ್ಯುತ್ ತಂತಿಗಳ ಸರಿ ಪಡಿಸಲಾಗಿದೆ. ಹೊಸ ವರ್ಷ ಆಚರಣೆ ನಡೆಯುವ ಪ್ರದೇಶಗಳಲ್ಲಿ ವಿದ್ಯುತ್ ಸಂಬಂಧಿತ ಅಹಿತಕರ ಘಟನೆ ಸಂಭವಿಸದಂತೆ ಈಗಾಗಲೇ ಬೆಸ್ಕಾಂ ಅಧಿಕಾರಿಗಳಿಂದ ಮುಂಜಾಗೃತ ಕ್ರಮ ವಹಿಸಲಾಗಿದೆ.