ಬೆಂಗಳೂರು: ಹೊಸ ವರ್ಷಚಾರಣೆ ಪಾರ್ಟಿಯಲ್ಲಿ ಅಮಲೇರಿಸಿಕೊಂಡು ಅಸ್ವಸ್ಥರಾಗುವ ಗ್ರಾಹಕರನ್ನು ಮನೆಗೆ ತಲುಪಿಸಲು ಬೆಂಗಳೂರಿನ ಕ್ಲಬ್, ಪಬ್, ರೆಸ್ಟೋರೆಂಟ್ಗಳು ಹೊಸ ಯೋಜನೆ ಹಮ್ಮಿಕೊಂಡಿವೆ! ಆ ಕುರಿತ ವಿವರ ಇಲ್ಲಿದೆ. ನೂತನ ವರ್ಷಚಾರಣೆ ಸಂಭ್ರಮಕ್ಕೆ ಬೆಂಗಳೂರು ರಂಗೇರುತ್ತಿದೆ. ಕ್ಲಬ್, ಪಬ್, ರೆಸ್ಟೋರೆಂಟ್ಗಳು ಈಗಾಗಲೇ ಜಗಮಗಿಸುತ್ತಿವೆ. ಜೊತೆಗೆ ಗ್ರಾಹಕರಿಗೆ ಬಗೆ ಬಗೆಯ ಆಫರ್ ನೀಡುತ್ತಿವೆ. ಈ ಬಾರಿ ಗ್ರಾಹಕರ ಸುರಕ್ಷತೆಗೆ ಒತ್ತು ನೀಡಲಾಗಿದ್ದು,
ಆಧಾರ್ ಕಾರ್ಡ್ ಸಂಗ್ರಹಿಸಿ ಪಾಸ್ ನೀಡಿ, ಸಂಭ್ರಮಾಚರಣೆಗೆ ಅವಕಾಶ ಮಾಡಿಕೊಡುತ್ತಿದೆ. ಇದಕ್ಕೆ ಕಾರಣವಿದೆ. ಕ್ಲಬ್, ಪಬ್, ರೆಸ್ಟೋರೆಂಟ್ಗಳು ಹೊಸ ವರ್ಷದ ಪಾರ್ಟಿಗೆ ಬರುವ ಗ್ರಾಹಕರ ಆಧಾರ್ ಕಾರ್ಡ್, ಅಡ್ರೆಸ್ ಫ್ರೂಫ್ ಪಡೆದು ಪಾಸ್ ನೀಡಲಿವೆ. ಪಾರ್ಟಿಯಲ್ಲಿ ಅಮಲೇರಿಸಿಕೊಂಡು ಅಸ್ವಸ್ಥರಾಗುವ ಗ್ರಾಹಕರನ್ನು ಮನೆಗೆ ತಲುಪಿಸಲು ಈ ಯೋಜನೆ ಹಮ್ಮಿಕೊಳ್ಳಲಾಗಿದೆ.ತಡರಾತ್ರಿ 1 ಗಂಟೆವರೆಗೂ ನ್ಯೂ ಇಯರ್ ಸೆಲೆಬ್ರೆಷನ್ಗೆ ಅವಕಾಶ ನೀಡಲಾಗಿದೆ.