ವಿಜಯಪುರ : 45 ವರ್ಷಗಳ ಕಾಲ ಜೋಡೆತ್ತಿನಂತೆ ಬದುಕಿನ ಬಂಡಿ ಎಳೆದಿದ್ದ ಜೋಡಿ, ವಯೋವೃದ್ಧ ದಂಪತಿ ಇದೀಗ ಸಾವಿನಲ್ಲೂ ಜತೆಯಾಗಿದ್ದಾರೆ. ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲೂಕಿನ ಡೋಣೂರ ಗ್ರಾಮದಲ್ಲಿ ಈ ಅಪರೂಪದ ದಂಪತಿಯ ಸಾವು ಸಂಭವಿಸಿದೆ. ರಾಮಪ್ಪ ಟಕ್ಕಳಕಿ ಹಾಗೂ ಶಾಂತವ್ವ ಟಕ್ಕಳಕಿ ಸಾವಲ್ಲಿ ಒಂದಾದ ವೃದ್ಧ ದಂಪತಿ.ಅನಾರೋಗ್ಯದ ಕಾರಣ ಪತ್ನಿ ಶಾಂತವ್ವ ಭಾನುವಾರ ಬೆಳಗ್ಗೆ ಮೃತಪಟ್ಟಿದ್ದರು.
ಪತ್ನಿ ಶಾಂತವ್ವಳ ಸಾವಿನ ಸುದ್ದಿ ಕೇಳಿ ಆಘಾತಕ್ಕೊಳಗಾದ ರಾಮಪ್ಪ ಅವರಿಗೆ ಹೃದಯಾಘಾತ ಸಂಭವಿಸಿದ್ದು, ಅವರೂ ಮೃತಪಟ್ಟಿದ್ದಾರೆ. ಕುಟುಂಬದ ಹಿರಿಯ ಜೋಡಿಯ ಅಗಲಿಕೆಯಿಂದ ಕಂಗಾಲಾರುವ ಕುಟುಂಬ ಸದಸ್ಯರು, ಬಂಧುಗಳ ಆಕ್ರಂದನ ಮುಗಿಲು ಮುಟ್ಟಿದೆ. ವೃದ್ಧ ದಂಪತಿ ಅಂತ್ಯಸಂಸ್ಕಾರವನ್ನು ಒಂದೇ ಕಡೆ ನೆರವೇರಿಸಿದ್ದಾರೆ.