ನವದೆಹಲಿ : ಬಜರಂಗದಳ ಸಂಘಟನೆಯನ್ನು ಅಲ್ ಖೈದಾ ಸಂಘಟನೆಗೆ ಹೋಲಿಗೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ (Mallikarjuna Kharge)ಪಂಜಾಬ್ ಕೋರ್ಟ್ ಸಮನ್ಸ್ ನೀಡಿದೆ. ಬಜರಂಗದಳವನ್ನು ಅಲ್ ಖೈದಾಗೆ ಹೋಲಿಕೆ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ,
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪಂಜಾಬ್ ನ ಸಂಗ್ರೂರ್ ನ್ಯಾಯಾಲಯ ಸಮನ್ಸ್ ನೀಡಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದೆ. ಇನ್ನು ಕರ್ನಾಟಕ ವಿಧಾನಸಭೆ ಚುನಾವಣೆಗೆ ಕರ್ನಾಟಕ ಕಾಂಗ್ರೆಸ್ ಪಕ್ಷವು ತನ್ನ ಪ್ರಣಾಳಿಕೆಯಲ್ಲಿ ಸಂವಿಧಾನ ವಿರೋಧಿ ಕೆಲಸ ಮಾಡುವ ಬಜರಂಗದಳ ಹಾಗೂ ಪಿಎಫ್ ಸಂಘಟನೆಗಳನ್ನು ನಿಷೇಧ ಮಾಡುವುದಾಗಿ ಹೇಳಿತ್ತು.