ಜಗತ್ತು ಎಂದೂ ಮರೆಯದ ಕೊರೊನಾ ಮಹಾಮಾರಿಯನ್ನ ಕಟ್ಟಿ ಹಾಕಿ ಖುಷಿಯಲ್ಲಿದ್ದ ಜನರಿಗೆ ಕೋವಿಶೀಲ್ಡ್ ಲಸಿಕೆ ದೊಡ್ಡ ಭೀತಿ ಸೃಷ್ಟಿಸಿತ್ತು.. ಇದರ ಬೆನ್ನಲ್ಲೇ ಈಗ ಕೋವ್ಯಾಕ್ಸಿನ್ನಲ್ಲೂ ಸೈಡ್ ಎಫೆಕ್ಟ್ ಆಗ್ತಿದೆ ಅನ್ನೋ ಭೀತಿ ಎದುರಾಗಿದೆ.
ಕೋವಿಶೀಲ್ಡ್ ಲಸಿಕೆಯ ಸೈಡ್ ಎಫೆಕ್ಟ್ ಆತಂಕ ಸೃಷ್ಟಿಸಿರುವಾಗಲೇ ಭಾರತದ ಮೊದಲ ಸ್ಥಳೀಯ ಕೋವಿಡ್-19 ಲಿಸಿಕೆಯಾದ ಕೋವ್ಯಾಕ್ಸಿನ್ ಅಲ್ಲೂ ಸೈಡ್ ಎಫೆಕ್ಟ್ ಇರೋದು ದೃಢವಾಗಿದೆ. ಭಾರತ್ ಬಯೋಟೆಕ್ ಕಂಪನಿಯ ಸಂಶೋಧನೆಯಲ್ಲಿ ಕೋವ್ಯಾಕ್ಸಿನ್ ಲಸಿಕೆ ಪಡೆದ ಮೂರನೇ ಒಂದರಷ್ಟು ಜನರಲ್ಲಿ ಸೈಡ್ ಎಫೆಕ್ಟ್ ಇರುತ್ತದೆ ಎನ್ನುವ ಅಂಶ ಬಯಲಾಗಿದೆ. ಕೋವ್ಯಾಕ್ಸಿನ್ ಪಡೆದ ಮೂರನೇ ಒಂದು ಭಾಗದಷ್ಟು ಜನರಲ್ಲಿ ವರ್ಷದ ಬಳಿಕ ಅಡ್ಡ ಪರಿಣಾಮ ಕಂಡುಬಂದಿದೆ ಎಂದು ಬನಾರಸ್ ಹಿಂದೂ ವಿಶ್ವವಿದ್ಯಾಲಯ ಸಂಶೋಧಕರ ತಂಡ ನಡೆಸಿದ ಅಧ್ಯಯನದ ವರದಿಯಿಂದ ತಿಳಿದುಬಂದಿದ್ದು, ಜನರಲ್ಲಿ ಮತ್ತೊಂದು ಭೀತಿ ಎದುರಾಗಿದೆ
- ಅಧ್ಯಯನಕ್ಕೊಳಪಡಿಸಿದ್ದ 926 ಪೈಕಿ ಶೇ.50 ರಷ್ಟು ಜನರಲ್ಲಿ ಸೋಂಕು
- ಸೋಂಕು, ಗಂಟಲು ಕೆರೆತ, ಮೂಗು ಸೋರುವಿಕೆ, ಕೆಮ್ಮು ಸಮಸ್ಯೆ ದೃಢ
- ಶೇ.1 ಕೇಸ್ಗಳಲ್ಲಿ ಪಾರ್ಶ್ವವಾಯು, ನರ ಸಂಬಂಧಿತ ಆರೋಗ್ಯ ಸಮಸ್ಯೆ
- ಸ್ಟ್ರಿಂಜರ್ ನೇಚರ್ ಜರ್ನಲ್ ತನ್ನ ಅಧ್ಯಯನದ ವರದಿಯಲ್ಲಿ ಪ್ರಕಟ
- ಚರ್ಮ ಸಮಸ್ಯೆ, ನರ ಸಂಬಂಧಿ ಸಮಸ್ಯೆ, ಸಾಮಾನ್ಯ ಅಸ್ವಸ್ಥತೆ ಪತ್ತೆ
- 2022ರ ಜನವರಿಯಿಂದ 2023ರ ಆಗಸ್ಟ್ವರೆಗೆ ನಡೆದಿತ್ತು ಅಧ್ಯಯನ
- 635 ಮಂದಿ ಯುವಕರು, 291 ಮಂದಿ ವಯಸ್ಕರು ಅಧ್ಯಯನದಲ್ಲಿದ್ದರು
ತಮ್ಮ ಸಂಸ್ಥೆ ಸಿದ್ಧಪಡಿಸಿರುವ ಕೋವಿಶೀಲ್ಡ್ ಲಸಿಕೆಯು ಅತ್ಯಂತ ವಿರಳ ಪ್ರಕರಣಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಮತ್ತು ಪ್ಲೇಟ್ಲೆಟ್ ಕಡಿಮೆಯಾಗುವಂತಹ ಅಡ್ಡ ಪರಿಣಾಮ ಸೃಷ್ಟಿಸುತ್ತದೆ ಎಂದು ಬ್ರಿಟನ್ ಮೂಲದ ಅಸ್ಟ್ರಾಜೆನಿಕಾ ಕಂಪನಿ ಒಪ್ಪಿಕೊಂಡಿತ್ತು. ಇದರ ಬೆನ್ನಲ್ಲೇ ಕೊರೊನಾ ಕಾಲದಲ್ಲಿ ಹೈದರಾಬಾದ್ ಮೂಲದ ಭಾರತ್ ಬಯೋಟಿಕ್ ಕಂಪನಿ ಉತ್ಪಾದಿಸಿದ್ದ ಕೋವ್ಯಾಕ್ಸಿನ್ ಲಸಿಕೆಯನ್ನ ಭಾರತದಲ್ಲಿ ಹೆಚ್ಚು ಜನರಿಗೆ ನೀಡಲಾಗಿದೆ. ಕೋವ್ಯಾಕ್ಸಿನ್ ಲಸಿಕೆಗೆ ಅತ್ಯುತ್ತಮವಾದ ಸುರಕ್ಷತೆಯ ಟ್ರ್ಯಾಕ್ ರೆಕಾರ್ಡ್ ಇದೆ. ಈ ಬಗ್ಗೆ ಸಾಕಷ್ಟು ಅಧ್ಯಯನಗಳು ನಡೆದಿವೆ ಅಂತಾ ಭಾರತ್ ಬಯೋಟಿಕ್ ಹೇಳಿತ್ತು. ಆದರೆ ಇದೀಗ ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಸಂಶೋಧಕರು ನಡೆಸಿದ ಅಧ್ಯಯನದ ವರದಿ ಬೆಚ್ಚಿಬೀಳಿಸಿದೆ.