ಉಡುಪಿ: ಮುದಿ ಹಸುಗಳನ್ನ ಕೊಲ್ಲಬಾರದೇಕೆ? ಪಶುಸಂಗೋಪನ ಸಚಿವರ ಹೇಳಿಕೆ ವಿಚಾರವಾಗಿ ಮಾತನಾಡಿದ ಮಾಜಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ, ಪಶುಸಂಗೋಪನಾ ಸಚಿವರು ಗೋವುಗಳನ್ನ ಕಡಿದರೆ ಏನಾಗುತ್ತೆ ಅಂತ ಅಬ್ಬರದ ಮಾತನ್ನಾಡಿದ್ದಾರೆ. ಬಿಜೆಪಿ ಸರ್ಕಾರ ಎರಡೂ ಮನೆಗಳಲ್ಲಿ ಗೋ ಹತ್ಯೆ ನಿಷೇದ ಕಾನೂನು ಜಾರಿ ಮಾಡಿದೆ. ರೈತರು, ಸಾಧುಸಂತರು, ಮಹಾತ್ಮಗಾಂಧೀಜಿ ಅಭಿಪ್ರಾಯ ಗಮನದಲ್ಲಿಟ್ಟು ಈ ಕಾನೂನು ಜಾರಿ ಮಾಡಲಾಗಿದೆ. ಹಿಂದೂ ಧರ್ಮಕ್ಕೆ ಗೋವು ಪೂಜನೀಯ ಹಿನ್ನಲೆಯಲ್ಲಿ ಗೋ ಹತ್ಯೆ ನಿಷೇದ ಜಾರಿ ಮಾಡಲಾಗಿದೆ.
ಪಶುಸಂಗೋಪನಾ ಮಂತ್ರಿಗಳಾಗಿ ಯಾವುದೇ ಸರ್ಕಾರ ಇದ್ರೂ ಗೋ ಶಾಲೆ ತೆರೆದು ಗೋ ರಕ್ಷಣೆ ಮಾಡುವ ಕ್ರಮ ಇದೆ. ಗೋವಿನ ರಕ್ಷಣೆ, ಹಾಲಿನ ಗುಣಮಟ್ಟ ಉತ್ತೇಜನ, ಕ್ಷೀರಾಭಿವೃದ್ದಿ , ಗೋತಳಿಗಳ ಬಗ್ಗೆ ಯೋಚನೆ ಮಾಡಬೇಕು. ಇವೆಲ್ಲವನ್ನ ಬಿಟ್ಟು ಗೋವು ಕಡಿಯುತ್ತೇವೆ ಎಂಬ ಧ್ರಾಷ್ಟ್ಯದ ಮಾತು ಆಡಿರುವುದು ಆಶ್ಚರ್ಯ. ಸಿದ್ದರಾಮಯ್ಯನವರೇ ನಿಮ್ಮ ಮಂತ್ರಿಗಳಿಗೆ ಗೋ ಸಂರಕ್ಷಣೆ ಕಾಯಿದೆ ಹಾಗೂ ಜನಸಾಮಾನ್ಯರ ಭಾವನೆ ಅರ್ಥಮಾಡಿಸಿ. ಗೋ ಹತ್ಯೆ ನಿಷೇದ ತಿದ್ದಯಪಡಿ ಮಾಡಿ ಗೋವುಗಳ ಮಾರಣ ಹೋಮ ಆದರೆ ಬಿಜೆಪಿ ಸುಮ್ಮನಿರಲ್ಲ. ಸದನದ ಹೊರಗೂ ಹಾಗೂ ಒಳಗೂ ಪ್ರತಿಪಕ್ಷವಾಗಿ ಬಿಜೆಪಿ ಪ್ರತಿಭಟಿಸಲಿದೆ ಎಂದು ಎಚ್ಚರಿಕೆ ನೀಡಿದರು.