ಕ್ರೇಜಿ ಸ್ಟಾರ್- ಸೆಂಚುರಿ ಸ್ಟಾರ್ ಒಟ್ಟಿಗೆ ಒಂದು ಕಡೆ ಸೇರಿದ್ರೆ ಮಾತಿಗೆ-ಮನರಂಜನೆಗೆ-ಸ್ನೇಹಕ್ಕೆ ಮಿತಿ ಇರಲ್ಲ. ಈ ಇಬ್ಬರು ಸ್ಟಾರ್ಗಳು ಹುಟ್ಟಿದರೆ ಕನ್ನಡನಾಡಲ್ಲಿ ಹುಟ್ಟ ಬೇಕು ಅಂತ ಒಂದೇ ಹಾಡಿಗೆ ಹೆಜ್ಜೆ ಹಾಕಿದ್ರೆ ಅದ್ರ ಕಿಕ್ಕೆ ಬೇರೆ. ಜಗಮಗಿಸುವ ವೇದಿಕೆಯಲ್ಲಿ ತಮ್ಮ 40 ವರ್ಷದ ಸ್ನೇಹದ ಬಗ್ಗೆ ಮಾತನಾಡಿದ್ದಾರೆ ರವಿ ಮತ್ತು ಶಿವು. ಬಾಲ್ಯದಿಂದ ಇಲ್ಲಿವರೆಗೆ ನಡೆದು ಬಂದ ಹಾದಿಯನ್ನ ಮೆಲುಕು ಹಾಕಿದ್ದಾರೆ.
ಕ್ರೇಜಿ ಸ್ಟಾರ್ ರವಿಚಂದ್ರನ್ ತಮ್ಮ ಲೈಫ್ನಲ್ಲಿ ಸೋಲು-ಗೆಲುವು, ಅವಮಾನ-ಸನ್ಮಾನ ಎಲ್ಲವನ್ನೂ ನೋಡಿ ಪರಿಪಕ್ವತೆ ಕಂಡಿರುವ ವ್ಯಕ್ತಿ ಮತ್ತು ವ್ಯಕ್ತಿತ್ವ. ಈ ಕನಸುಗಾರನ ಜೊತೆ ದೊಡ್ಮನೆ ಸರದಾರ ಸೇರಿ ಬಿಟ್ರೆ ಆ ದಿನ ಆ ಕ್ಷಣ ಮರೆಯಲಾಗದ ಅದೆಷ್ಟೋ ವಿಷ್ಯಗಳನ್ನ ಹಂಚಿ ಬಿಡ್ತಾರೆ. ಶಿವರಾಜ್ ಕುಮಾರ್ ಅಂದ್ರೆ ಏನು? ಸಿಂಪಲ್ಲಾಗಿ ಬದುಕೋದು ಎಷ್ಟು ಕಷ್ಟ? ವರನಟ ಡಾಕ್ಟರ್ ರಾಜ್ ಕುಮಾರ್ ಪುತ್ರನಾದ್ರು ಇಷ್ಟು ಸಿಂಪಲಾಗಿ ಶಿವಣ್ಣ (Shivarajukumar) ಇರೋದ್ರ ಬಗ್ಗೆ ರವಿಚಂದ್ರನ್ (Ravichandran) ಹೇಳಿದ ಬೆಂಕಿ ಮಾತುಗಳು ಇನ್ನೂ ಕನ್ನಡಿಗರ ಮನದಲ್ಲಿ ಹಸಿರಾಗಿದೆ.
ಈ ಮಾತುಗಳು ಸತ್ಯ ಸತ್ಯ. ಜನ ಮೆಚ್ಚಿಕೊಂಡು ಒಪ್ಪಿಕೊಳ್ಳುವ ಹೊತ್ತಿಗೆ ಮತ್ತೊಮ್ಮೆ ಈ ಸ್ಟಾರ್ಗಳು ಒಟ್ಟಿಗೆ ಒಂದೇ ಕಡೆ ಕಾಣಿಸಿಕೊಂಡಿದ್ದಾರೆ. ವಿಕೇಂಡ್ನಲ್ಲಿ ಕನ್ನಡಿಗರ ದಿನವನ್ನ ಇನ್ನಷ್ಟು ಸ್ಪೆಷಲ್ ಮಾಡಲು ವಾಹಿನಿ ಮತ್ತೆ ಇಬ್ಬರು ಆಪ್ತಮಿತ್ರರನ್ನ ಒಟ್ಟಿಗೆ ಒಂದೇ ವೇದಿಕೆಗೆ ಕರೆಸಿದೆ. ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟ ಬೇಕು ಹಾಡಿಗೆ ಇವರಿಬ್ಬರೂ ಕೈ ಕೈ ಹಿಡಿದು ಎಂಟ್ರಿ ಕೊಡೋದನ್ನ ನೋಡೋದೆ ಒಂದು ಹಬ್ಬದ ಫಿಲ್. ಅಪ್ಪಾಜೀ ಹಾಡು ಜೊತೆಗೆ ಜೀವದ ಗೆಳೆಯರು ಸೂಪರ್ ಬಿಡ್ರಿ
ಸೂರಜ್ನ ಸೂರ್ಯ ನಮಸ್ಕಾರಕ್ಕೆ ಸೆಂಚುರಿ ಸ್ಟಾರ್ ನಾನ್ಸ್ಟಾಪ್ ಸ್ಮೇಲ್ ಕೊಟ್ರು. ದರ್ಶನ್ ಹಾಗೂ ಪ್ರೀತಿ, ಜಗಪ್ಪ ಮತ್ತು ಲಾಸ್ಯ ತುಂಟ ತುಂಟ ಅಂತ ಎಂಟರ್ಟೈನ್ ಮಾಡಿದ್ರು. ಜಗಪ್ಪನ ಜಗಮಗಿಸುವ ಡ್ಯಾನ್ಸ್ ನೋಡಿ ಕಂಪ್ಲೀಟ್ ಮಹಾಸಂಗಮ ಟೀಮ್ ಶಾಕ್ ಆಗಿತ್ತು. ಸಖತ್ ಡ್ಯಾನ್ಸ್ ಮಾಡ್ದೆ ಜಗಪ್ಪ ಅಂತ ಚಪ್ಪಾಳೆಗಳ ಸುರಿಮಳೆ ಸುರಿಸಲಾಯ್ತು. ಜಗಪ್ಪನ ಜೊತೆ ಶಿವಣ್ಣ ಹೆಜ್ಜೆ ಹಾಕಿದ್ದು ಮತ್ತಷ್ಟು ಕಳೆ ಕೊಟ್ಟಿತ್ತು