ಬೆಂಗಳೂರು: ಇಂದು ಕ್ರೇಜಿಸ್ಟಾರ್ ರವಿಚಂದ್ರನ್ ಗೆ 62 ನೇ ಹುಟ್ಟು ಹಬ್ಬದ ಸಂಭ್ರಮ. ಅಭಿಮಾನಿಗಳು ತಮ್ಮ ಪ್ರೀತಿಯ ನಟನಿಗೆ ಶುಭಾಶಯಗಳ ಸುರಿಮಳೆಯನ್ನೇ ಸುರಿಸುತ್ತಿದ್ದಾರೆ. ಇನ್ನೂ ಈ ವರ್ಷ ಹುಟ್ಟು ಹಬ್ಬ ಆಚರಣೆಯಿಂದ ರವಿಮಾಮ ದೂರ ಉಳಿದಿದ್ದು, ರವಿಚಂದ್ರನ್ ಬರ್ತ್ಡೇ ಆಚರಣೆ ಮಾಡದಿದ್ರು, ಅಭಿಮಾನಿಗಳು ಮಾತ್ರ ಮನೆ ಬಳಿ ಬಂದು ಕಾದು ಕುಳಿತಿರುವ ದೃಶ್ಯ ಸೆರೆಯಾಗಿದೆ. ಜಡ್ಜ್ ಮೆಂಟ್ ಶೂಟಿಂಗ್ ನಲ್ಲಿ ರವಿಚಂದ್ರನ್ ಬ್ಯುಸಿಯಿದ್ದು, ಹುಟ್ಟು ಹಬ್ಬದ ಪ್ರಯುಕ್ತ ಫ್ಯಾಮಿಲಿ ಜೊತೆ ಕಾಲ ಕಳೆಯುತ್ತಿದ್ದಾರೆ.
ಇನ್ನೂ ರವಿಚಂದ್ರನ್ ಬರ್ತ್ ಡೇ ಆಚರಣೆ ಮಾಡದಿದಕ್ಕೆ ಅಭಿಮಾನಿಗಳು, ಅಸಮಧಾನ ವ್ಯಕ್ತ ಪಡಸ್ತಿದ್ದಾರೆ. ನಾವು ದೂರದ ಊರುಗಳಿಂದ ಬಂದಿದ್ದೀವಿ. ಅವರು ಯಾಕೆ ಬರ್ತ್ ಡೇ ಆಚರಿಸಲ್ಲ.
ಇಷ್ಟು ಜನರನ್ನು ಸಂಪಾದನೆ ಮಾಡಿ ಈಗ ಹುಟ್ಟು ಹಬ್ಬ ಯಾಕೇ ಆಚರಿಸ್ತಿಲ್ಲ. ಅವರು ಬರುವ ತನಕ ನಾವು ಹೋಗಲ್ಲ ಎಂದು ಅಭಿಮಾನಿಗಳು ಪಟ್ಟು ಹಿಡಿದಿದ್ದಾರೆ. ಇನ್ನೂ ಮನೆ ಬಳಿ ಕಾಯ್ತಿದ್ದ ಅಭಿಮಾನಿಗಳಿಗಾಗಿ ರವಿಚಂದ್ರನ್ ಪುತ್ರ ಮನುರವಿಚಂದ್ರನ್ ಅವರು ರಾಜಾಜಿನಗರ ನಿವಾಸಕ್ಕೆ ಆಗಮಿಸಿದ್ದು, ಅಪ್ಪನ ಕಾಯ್ತಿದ್ದ ಅಭಿಮಾನಿಗಳ ಭೇಟಿ ಮಾಡಿದ್ದಾರೆ. ಅಪ್ಪ ಮನೆಯಲ್ಲಿ ಇಲ್ಲ ಬೇರೆ ದಿನ ಸಿಗ್ತಾರೆ ಎಂದು ಅಭಿಮಾನಿಗಳನ್ನು ಸಂತೈಸಿದ್ದಾರೆ. ಈ ವೇಳೆ ಅಭಿಮಾನಿಗಳ ಜೊತೆ ಪೋಟೋಗೆ ಪೋಸ್ ಕೊಟ್ಟ ಮನು ಅವರು, ಆಟೋಗ್ರಾಫ್ ಹಾಕಿದ್ದಾರೆ.