ದೆಹಲಿ: ಇಲ್ಲಿಯವರೆಗೆ ಡೆಬಿಟ್ ಕಾರ್ಡ್ (Debit Card) ರೀತಿ ಯುಪಿಐ (UPI) ಕಾರ್ಯನಿರ್ವಹಿಸುತ್ತಿತ್ತು. ಆದರೆ ಇನ್ನು ಮುಂದೆ ಕ್ರೆಡಿಟ್ ಕಾರ್ಡ್ (Credit Card) ರೀತಿ ಯುಪಿಐ ಕಾರ್ಯನಿರ್ವಹಿಸಲಿದೆ.
ಹೌದು. ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಯುಪಿಐನಲ್ಲಿ ಕ್ರೆಡಿಟ್ ಕಾರ್ಡ್ ಫೀಚರ್ ಪರಿಚಯಿಸಲು ಸಿದ್ಧವಾಗಿದೆ.
ಈಗ ಯಪಿಐ ಬಳಸಿ ಯಾವುದಾದರು ವಸ್ತು ಖರೀದಿಸಿದರೆ ಕೂಡಲೇ ಬ್ಯಾಂಕ್ ಖಾತೆಯಿಂದ ಹಣ ಕಡಿತವಾಗುತ್ತದೆ. ಆದರೆ ಯುಪಿಐ ಕ್ರೆಡಿಡ್ ಕಾರ್ಡ್ನಲ್ಲಿ ತಕ್ಷಣ ಬ್ಯಾಂಕ್ ಖಾತೆಯಿಂದ ಹಣ ಕಡಿತವಾಗುವುದಿಲ್ಲ. ಹಣ ಬ್ಯಾಂಕ್ನಿಂದ ವರ್ಗಾವಣೆಯಾದರೂ ತಿಂಗಳ ಕೊನೆಯಲ್ಲಿ ಇತ್ಯರ್ಥವಾಗಲಿದೆ.
ಬ್ಯಾಂಕ್ಗಳು ಗ್ರಾಹಕನ ಖಾತೆಯಲ್ಲಿರುವ ಬ್ಯಾಲೆನ್ಸ್ ಪರಿಗಣಿಸಿ ಕ್ರೆಡಿಟ್ ಕಾರ್ಡ್ ಬಳಕೆಗೆ ಹಣವನ್ನು ನಿಗದಿಪಡಿಸುತ್ತದೆ. ನಂತರ ನಿಗದಿ ಪಡಿಸಿದ ಸಮಯದ ಒಳಗಡೆ ಆ ಹಣವನ್ನು ಬ್ಯಾಂಕಿಗೆ ಗ್ರಾಹಕ ಪಾವತಿಸಬೇಕಾಗುತ್ತದೆ
ಸದ್ಯ ಡೆಬಿಟ್ ಕಾರ್ಡ್ ಹೊಂದಿವರಿಗೆ ಆಫರ್/ ರಿಯಾಯಿತಿಗಳು ಸಿಗುವುದಿಲ್ಲ. ಆದರೆ ಕ್ರೆಡಿಟ್ ಕಾರ್ಡ್ ಹೊಂದಿವರಿಗೆ ಹಲವು ಆಕರ್ಷಕ ರಿಯಾಯಿತಿಗಳು ಲಭ್ಯ ಇರುತ್ತವೆ. ಯುಪಿಐ ಪೇಮೆಂಟ್ಸ್ನಲ್ಲಿ ವಿಶ್ವದಲ್ಲೇ ಭಾರತ ಮೊದಲ ಸ್ಥಾನದಲ್ಲಿದೆ. ಒಂದು ವೇಳೆ ಯುಪಿಐನಲ್ಲಿ ಕ್ರೆಡಿಟ್ ಕಾರ್ಡ್ ವಿಶೇಷತೆ ಸೇರಿಸಿದಂತೆ ಯುಪಿಐ ವ್ಯವಹಾರ ಭಾರೀ ಪ್ರಮಾಣದಲ್ಲಿ ಏರಿಕೆಯಾಗಲಿದೆ.