ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ವಿದೇಶದಲ್ಲಿ ಭಾರತವನ್ನು ಟೀಕಿಸುವ ಅಭ್ಯಾಸವಿದೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಟೀಕಿಸಿದ್ದು, ದೇಶದ ಆಂತರಿಕ ವಿಷಯಗಳನ್ನು ಹೊರ ಜಗತ್ತಿಗೆ ಕೊಂಡೊಯ್ಯುವುದು ದೇಶದ ಹಿತಾಸಕ್ತಿಗೆ ಒಳ್ಳೆಯದಲ್ಲ. 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಅಮೆರಿಕದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ರಾಹುಲ್ ಗಾಂಧಿಯವರ ಇತ್ತೀಚಿನ ಹೇಳಿಕೆಗಳನ್ನು ಉಲ್ಲೇಖಿಸಿದ ಸಚಿವರು, ‘ಜಗತ್ತು ನಮ್ಮನ್ನು ಗಮನಿಸುತ್ತಿದೆ’ ಎಂದು ಹೇಳಿದರು.
‘ರಾಹುಲ್ ಗಾಂಧಿ ಅವರು ದೇಶದಿಂದ ಹೊರಗೆ ಹೋದಾಗಲೆಲ್ಲ ದೇಶವನ್ನು ಟೀಕಿಸುವುದು ಮತ್ತು ನಮ್ಮ ರಾಜಕೀಯದ ಬಗ್ಗೆ ಕಾಮೆಂಟ್ ಮಾಡುವುದು ಅಭ್ಯಾಸವಾಗಿಬಿಟ್ಟಿದೆ. ಜಗತ್ತು ನಮ್ಮನ್ನು ನೋಡುತ್ತಿದೆ. ಚುನಾವಣೆಗಳು ನಡೆಯುತ್ತಲೇ ಇರುತ್ತವೆ, ಕೆಲವೊಮ್ಮೆ ಒಂದು ಪಕ್ಷ ಗೆದ್ದರೆ ಮತ್ತೆ ಕೆಲವು ಬಾರಿ ಇನ್ನೊಂದು ಪಕ್ಷ ಗೆಲ್ಲುತ್ತದೆ. ದೇಶದಲ್ಲಿ ಪ್ರಜಾಪ್ರಭುತ್ವ ಇಲ್ಲದಿದ್ದರೆ ಇಂತಹ ಬದಲಾವಣೆ ಬರುತ್ತಿರಲಿಲ್ಲ. ಎಲ್ಲಾ ಚುನಾವಣೆಯ ಫಲಿತಾಂಶಗಳು ಒಂದೇ ಆಗಿರುತ್ತಿತ್ತು. 2024 ರ ಫಲಿತಾಂಶ ತೋ ವಹೀ ಹೋಗಾ, ಹಮೇಂ ಪತಾ ಹೈ…’ ಎಂದು ಜೈಶಂಕರ್ ಹೇಳಿದರು.