ಬೆಂಗಳೂರು ;- ಕಬ್ಬನ್ ಉದ್ಯಾನದ ಜಾಗದಲ್ಲಿ ಕ್ಲಬ್ ಸೆಂಚುರಿ ಕ್ಲಬ್ ಅನ್ನು ನಿರ್ಮಿಸಿರುವುದೇ ಅಕ್ಷಮ್ಯ. ಇದನ್ನು ಕಬ್ಬನ್ ಉದ್ಯಾನದಿಂದ ಬೇರ್ಪಡಿಸಬೇಕು ಎಂಬ ಸದಸ್ಯೆ ತೇಜಸ್ವಿನಿಗೌಡ ಅವರ ವಿಚಾರವನ್ನು ಖಂಡಿಸುತ್ತೇವೆ. ಕಬ್ಬನ್ ಉದ್ಯಾನದ ಉಳಿವಿಗಾಗಿ ಸಾಕಷ್ಟು ಹೋರಾಟ ಕೈಗೊಂಡು, ಕ್ಲಬ್ ಹಾಗೂ ಇತರೆ ವಾಣಿಜ್ಯ ಕಟ್ಟಡಗಳನ್ನು ತೆರವುಗೊಳಿಸಬೇಕು ಎಂಬ ನ್ಯಾಯಾಲಯದಲ್ಲಿ ದೂರು ದಾಖಲಿಸಿ ನಿರಂತರವಾಗಿ ಹೋರಾಡುತ್ತಿದ್ದೇವೆ.
ಹೀಗಿರುವಾಗಿ ಉದ್ಯಾನ ವ್ಯಾಪ್ತಿಯಿಂದ ಸೆಂಚುರಿ ಕ್ಲಬ್ ಅನ್ನು ಹೊರಗಿಡಬೇಕು ಎಂಬುದಕ್ಕೆ ಯಾವುದೇ ಅರ್ಥವಿಲ್ಲ. ಕಟ್ಟಡವನ್ನು ತೆರವುಗೊಳಿಸಲಿ ಎಂದು ಕಬ್ಬನ್ಪಾರ್ಕ್ ನಡಿಗೆದಾರರ ಸಂಘದ ಅಧ್ಯಕ್ಷ ಎಸ್. ಉಮೇಶ್ ಒತ್ತಾಯಿಸಿದ್ದಾರೆ.
ಇನ್ನೂ ಕಬ್ಬನ್ ಉದ್ಯಾನ ದಲ್ಲಿ ಕ್ಲಬ್ಗಳ ಅಭಿವೃದ್ಧಿ ಕೆಲಸಗಳಿಗೆ ಅವಕಾಶ ಕೊಡದೆ, ಉದ್ಯಾನವನ್ನು ರಕ್ಷಿಸಬೇಕು ಎಂದು ಕಬ್ಬನ್ಪಾರ್ಕ್ ನಡಿಗೆದಾರರ ಸಂಘ ಸಿಎಂ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದೆ.
![Demo](https://prajatvkannada.com/wp-content/uploads/2023/08/new-Aston-Band.jpeg)