ಬೆಂಗಳೂರು: ಗೃಹಜ್ಯೋತಿ ಯೋಜನೆಯಲ್ಲಿ 200 ಯೂನಿಟ್ ಫ್ರೀ ಕರೆಂಟ್ ಸಿಗುತ್ತದೆ ಎಂದು ರಾಜ್ಯದ ಜನರು ಸಂತಸಪಟ್ಟರೆ ಕೆಲವೆಡೆ ವಿದ್ಯುತ್ ಬಿಲ್ ಅನ್ನು ದುಪ್ಪಟ್ಟು ಮಾಡಿ ಶಾಕ್ ನೀಡಲಾಗಿದೆ. ಕರೆಂಟ್ ಬಿಲ್ ದರ ಏರಿಕೆ ಬೆನ್ನಲ್ಲೇ ಅಬಕಾರಿ ಇಲಾಖೆಯಿಂದ (Excise Department) ಮದ್ಯ ಪ್ರಿಯರಿಗೆ ಮತ್ತೊಂದು ಶಾಕ್ ನೀಡಿದೆ.
ಅಬಕಾರಿ ಇಲಾಖೆ ಸದ್ದಿಲ್ಲದೆ ಮದ್ಯ (Alcohol) ಬೆಲೆ ಏರಿಕೆPrice Hike) ಮಾಡಿದೆ. ಸ್ಲಾಬ್ಗಳಲ್ಲಿ ಏರಿಕೆ ಮಾಡಲಾಗಿದ್ದು, ಬಿಯರ್ಗೆ 10 ರೂ. ಏರಿಕೆ ಮಾಡಲಾಗಿದೆ. ಹಾಗೂ ಹಾಟ್ ಡ್ರಿಂಕ್ಸ್ಗಳ ವಿವಿಧ ಬ್ರ್ಯಾಂಡ್ಗಳಿಗೆ ಬೇರೆ ಬೇರೆ ರೀತಿಯಾಗಿ ಬೆಲೆ ಏರಿಕೆ ಮಾಡಲಾಗಿದೆ.
ಹೌದು ಸರ್ಕಾರ ಮಾರ್ಗವನ್ನು ಕಂಡುಕೊಂಡಿದ್ದು, ಅದು ಅಬಕಾರಿ ಇಲಾಖೆಯಿಂದ (Excise Department) ಆದಾಯ ಕ್ರೋಡಿಕರಣಕ್ಕೆ ಚಿಂತನೆ ನಡೆಸಿದೆ. ಲಿಕ್ಕರ್ ಲೈಸೆನ್ಸ್ ಫೀಸ್ನ್ನು ಶೇಕಡಾ 25 ರಷ್ಟು ಹೆಚ್ಚಿಸಲು ಚಿಂತನೆ ನಡೆಸಿದೆ. ಇದರಿಂದ ವಾರ್ಷಿಕ 175 ಕೋಟಿ ರೂ. ಆದಾಯ ಬರುವ ನಿರೀಕ್ಷೆ ಇದೆ. 2016 ರಿಂದ ಲಿಕ್ಕರ್ ಲೈಸೆನ್ಸ್ ದರ ಹೆಚ್ಚಿಸಿಲ್ಲ. ಹೀಗಾಗಿ ಲಿಕ್ಕರ್ ಲೈಸೆನ್ಸ್ ಫೀಸ್ ಹೆಚ್ಚಳ ಮಾಡುವ ಸಾಧ್ಯತೆ ಇದೆ.
ಲಿಕ್ಕರ್ ಹಾರ್ಡ್ ಡ್ರಿಂಕ್ಸ್ ದರವನ್ನು ಶೇಕಡಾ 10 ರಿಂದ 15 ಪರ್ಸೆಂಟ್ ಹೆಚ್ಚಳ ಮಾಡಿದರೇ ಲಿಕ್ಕರ್ ಡ್ರಿಂಕ್ಸ್ನಿಂದ ಶೇಕಡಾ ಸುಮಾರು 3 ಸಾವಿರ ಕೋಟಿ ಆದಾಯ ಬರುವ ನಿರೀಕ್ಷೆ ಇದೆ. ಬಿಯರ್ ದರವನ್ನ ಶೇಕಡಾ 20 ಪರ್ಸೆಂಟ್ ಹೆಚ್ಚಳ ಮಾಡಿದರೇ, ಇದರಿಂದ ವಾರ್ಷಿಕ 500 ಕೋಟಿ ಆದಾಯ ಬರಬಹುದೆಂದು ಅಂದಾಜಿಸಲಾಗಿದೆ.
2022-23 ರ ವಾರ್ಷಿಕದಲ್ಲಿ ಸರ್ಕಾರ ಈಗಾಗಲೇ 35 ಸಾವಿರ ಕೋಟಿ ಆದಾಯದ ಟಾರ್ಗೆಟ್ ನೀಡಿತ್ತು. ಇದೀಗ 2023-24ರ ಸಾಲಿನಲ್ಲಿ ಸುಮಾರು 39 ಸಾವಿರ ಕೋಟಿ ಆದಾಯ ಸಂಗ್ರಹಿಸುವ ಗುರಿ ನೀಡುವ ಸಾಧ್ಯತೆ ಇದೆ ಎಂದು ಅಬಕಾರಿ ಇಲಾಖೆಯ ಅಧಿಕಾರಿಗಳು ಟಿವಿ9ಗೆ ಮಾಹಿತಿ ನೀಡಿದ್ದಾ