ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಸಿಲಿಂಡರ್ ಸ್ಫೋಟಗೊಂಡು ಓರ್ವ ಯುವಕನಿಗೆ ಗಂಭೀರ ಗಾಯವಾಗಿರುವ ಘಟನೆ ನಡೆದಿದೆ. ಎಸ್ ಜಿ ಪಾಳ್ಯ ಠಾಣಾ ವ್ಯಾಪ್ತಿಯಲ್ಲಿ ಬೆಳಗ್ಗೆ ವಾಸವಿದ್ದ ರೂಂ ನಲ್ಲಿ ಟೀ ಮಾಡಲು ಮುಂದಾಗಿದ್ದಾಗ ದುರಂತ ಸಂಭವಿಸಿದೆ. ಪವನ್ ಗಾಯಗೊಂಡಿರುವ ಯುವಕ ಎನ್ನಲಾಗಿದೆ.
ಹೊಟೇಲ್ ಒಂದರಲ್ಲಿ ಪವನ್ ಕೆಲಸ ಮಾಡುತ್ತಿದ್ದ. ಬೆಳಗ್ಗೆ ವಾಸವಿದ್ದ ರೂಂ ನಲ್ಲಿ ಟೀ ಮಾಡಲು ಮುಂದಾಗಿದ್ದಾಗ ಸಿಲಿಂಡರ್ ಸ್ಫೋಟವಾಗಿದೆ. ಗಾಯಾಳು ಪವನ ವಿಕ್ಡೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಘಟನೆ ಸಂಬಂದ ಎಸ್ ಜಿಪಾಳ್ಯ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.