ಬಳ್ಳಾರಿ: ಇಂದು ದರ್ಶನ್ ನ್ಯಾಯಾಂಗ ಬಂಧನದ ಅವಧಿ ಮುಕ್ತಾಯವಾಗಿದೆ. ಬಳ್ಳಾರಿ ಜೈಲಿನಲ್ಲಿರುವ ಆರೋಪಿ ನಂಬರ್ 2 ದರ್ಶನ್ ವಿಡಿಯೋ ಕಾನ್ಫರೆನ್ಸ್ ಮೂಲಕ ಮತ್ತೆ ಕೋರ್ಟ್ಗೆ ಹಾಜರಾಗಲಿದ್ದಾರೆ. ಇದರ ಮಧ್ಯೆ ದರ್ಶನ್ಗೆ ಹಾಗೂ ಅವರ ಕುಟುಂಬಕ್ಕೆ ಬೇಲ್ ವಿಚಾರದಲ್ಲಿ ಹೊಸ ಟೆನ್ಶನ್ ಶುರುವಾಗಿದೆ. ಅತ್ತ ಪವಿತ್ರಾಗೌಡ ಸೇರಿದಂತೆ ಹಲವು ಆರೋಪಿಗಳು ಈಗಾಗಲೇ ಜಾಮೀನು ಅರ್ಜಿ ಸಲ್ಲಿಸಿದ್ದಾರೆ.
ಆದ್ರೆ ದರ್ಶನ್ ಮಾತ್ರ ಜೈಲಿನಲ್ಲಿದ್ದು ಇಷ್ಟು ದಿನಗಳಾದ್ರೂ ಕೂಡ ಜಾಮೀನು ಅರ್ಜಿ ಸಲ್ಲಿಸಿರಲಿಲ್ಲ. ಚಾರ್ಜ್ ಶೀಟ್ ಪ್ರತಿ ಸಿಕ್ಕ ನಂತರವಷ್ಟೇ ಜಾಮೀನು ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ. ಆರೋಪಿಗಳ ಪರ ವಕೀಲರಿಗೆ ಚಾರ್ಜ್ಶೀಟ್ ಪ್ರತಿ ಸಲ್ಲಿಕೆ ಆಗಲಿದೆ. ದೋಷಾರೋಪ ಪಟ್ಟಿ ಸಿಕ್ಕರೆ ಅನೇಕ ವಿಚಾರಗಳು ರಿವೀಲ್ ಆಗಲಿವೆ. ದರ್ಶನ್ ವಿರುದ್ಧ ಇರುವ ಆರೋಪಗಳು ಈಗಾಗಲೇ ಸಂಚಲನ ಸೃಷ್ಟಿ ಮಾಡಿವೆ. ಅದರ ಜೊತೆ ಮತ್ತೊಂದಿಷ್ಟು ವಿಚಾರಗಳು ಹೊರ ಬರುತ್ತವೆಯೇ ಎನ್ನುವುದನ್ನು ಕಾದು ನೋಡಬೇಕಿದೆ.
ಜೂನ್ 8ರಂದು ರೇಣುಕಾ ಸ್ವಾಮಿ ಹತ್ಯೆ ನಡೆಯಿತು. ಆ ಬಳಿಕ ಶವವನ್ನು ರಾಜ ಕಾಲುವೆಗೆ ಎಸೆಯಲಾಯಿತು. ದರ್ಶನ್ ಅವರು ಜೂನ್ 9ರಂದು ಮನೆಯಲ್ಲಿ ನಡೆದ ಪೂಜೆಯಲ್ಲಿ ಭಾಗವಹಿಸಿ, ನಂತರ ಮೈಸೂರಿಗೆ ತೆರಳಿದ್ದರು. ಜೂನ್ 10ರಂದು ‘ಡೆವಿಲ್’ ಸಿನಿಮಾ ಶೂಟ್ನಲ್ಲಿ ಭಾಗವಹಿಸಿದ್ದರು. ಜೂನ್ 11ರಂದು ದರ್ಶನ್ ಅರೆಸ್ಟ್ ಆದರು. ಈಗ ಸುಮಾರು ಮೂರು ತಿಂಗಳಿಂದ ದರ್ಶನ್ ಜೈಲಿನಲ್ಲಿ ಇದ್ದಾರೆ. ಜೈಲಿನ ಜೀವನ ಅವರಿಗೆ ಕಷ್ಟಕರವಾಗುತ್ತಿದೆ.