ಮಂಡ್ಯ : ಮಂಡ್ಯದಲ್ಲಿ ಮೈತ್ರಿ ಪಾದಯಾತ್ರೆ ಬಗ್ಗೆ ಮಾತಾನಾಡಿದ ಶಾಸಕ ಗಣಿಗ ರವಿಕುಮಾರ್ ರಾಜಭವನವನ್ನ ಬಿಜೆಪಿ ಕಚೇರಿ ಮಾಡಿಕೊಂಡಿದ್ದಾರೆ. ಸರ್ಕಾರಕ್ಕೆ ರಾಜ್ಯಪಾಲರು ಪತ್ರ ಬರೆಯುತ್ತಿಲ್ಲ. ಬದಲಿಗೆ ಬಿಜೆಪಿ ಮಾಸ್ಟರ್ ಮೈಂಡ್ ಗಳ ಪತ್ರಕ್ಕೆ ರಾಜ್ಯಪಾಲರು ಸಹಿ ಹಾಕುತ್ತಿದ್ದಾರೆ ಎಂದು
ರಾಜಭವನ ಹಾಗೂ ರಾಜ್ಯಪಾಲರ ವಿರುದ್ದ ಮಂಡ್ಯ ಕೈ ಶಾಸಕ ಗಂಭೀರ ಆರೋಪ ಮಾಡಿದ್ದಾರೆ.
ಬಿಜೆಪಿಯೇತರ ಸರ್ಕಾರವಿರುವ ರಾಜ್ಯಗಳ ರಾಜಭವನಗಳು ಬಿಜೆಪಿ ಕಚೇರಿಗಳಾಗಿವೆ. ಪ್ರತಿನಿತ್ಯ ಸರ್ಕಾರ VS ರಾಜಭವನ ಎಂಬಂತಾಗಿದೆ. ಸಿಎಂ ಸಿದ್ದರಾಮಯ್ಯರನ್ನ ಅಧಿಕಾರದಿಂದ ಕೆಳಗಿಳಿಸಲು ಹುನ್ನಾರ ಮಾಡುತ್ತಿದ್ದಾರೆ . ಅದಕ್ಕಾಗಿ ದೊಂಬಾರಾಟ ಮಾಡಿಕೊಂಡು ನಡೆದುಕೊಂಡು ಬರ್ತಿದ್ದಾರೆ. ಆ ಪಾದಯಾತ್ರೆಯಲ್ಲೂ ಬಿಜೆಪಿ-ಜೆಡಿಎಸ್ ಕಿರಿಕ್ ಮಾಡಿಕೊಂಡಿದ್ದಾರೆ. ಕುಮಾರಸ್ವಾಮಿ ಹಾಗೂ ಜೆಡಿಎಸ್ ನಾಯಕರಿಗೆ ಯಾವುದೇ ನಿಲುವಿಲ್ಲ ಎಣದು ವಾಗ್ದಳಿ ನಡೆಸಿದರು.
ಅಧಿಕಾರದ ಅಪಹಪಿಯ ಗೊಂದಲದಲ್ಲಿದ್ದಾರೆ.ಕುಮಾರಸ್ವಾಮಿ ಪಾದಯಾತ್ರೆಗೆ ಬೆಂಬಲ ಇಲ್ಲವೆಂದಿದ್ರು. ಆದರೆ ರಾತ್ರೋರಾತ್ರಿ ಅವರನ್ನ ಬಿಜೆಪಿಯವರು ಸರಿಯಾಗಿ ನಡೆಸಿಕೊಂಡ್ರಾ ಎಂದು ವ್ಯಂಗ್ಯ ಮಾಡಿದರು.
ನಾಯಕತ್ವ ಪಡೆಯೋದಕ್ಕೆ ಬಿಜೆಪಿ-ಜೆಡಿಎಸ್ ನವರು ಪಾದಯಾತ್ರೆ ಮಾಡ್ತಿದ್ದಾರೆ.ವಿಜಯೇಂದ್ರ ತನ್ನ ನೇತೃತ್ವದಲ್ಲಿ ಪಾದಯಾತ್ರೆ ಆಗ್ಬೇಕು ಅನ್ಕೊಂಡಿದ್ದಾರೆ. ಬಿಜೆಪಿಯವರು ಬೆಳೆದುಬಿಡ್ತಾರೆ ಅಂತಾ ಜೆಡಿಎಸ್ ನವರು ಡ್ರಾಮಾ ಮಾಡ್ತಿದ್ದಾರೆ ಎಂದು ಕೈ ಶಾಸಕ ಕಿಡಿ ಕಾರಿದರು.