ಅಲೋವೆರಾದಿಂದ ಕೂದಲಿನ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು.ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸಿ ಉದ್ದವಾದ ಕೂದಲನ್ನು ಪಡೆಯಲು ಒಂದು ಕೊ್ ಅಲೋವೆರಾ ಜೆಲ್ ಗೆ 2ಚಮಚ ಹರಳೆಣ್ಣೆಯನ್ನು ಮಿಕ್ಸ್ ಮಾಡಿ ಕೂದಲಿನ ಬುಡಕ್ಕೆ ಹಚ್ಚಿ ರಾತ್ರಿಯಿಡಿ ಹಾಗೆ ಬಿಟ್ಟು ಮರುದಿನ ವಾಶ್ ಮಾಡಿ.ಇದನ್ನು ವಾರದಲ್ಲಿ ಒಮ್ಮೆ ಮಾಡಿ.
ಕೂದಲಿನ ಹೊಳಪನ್ನ ಹೆಚ್ಚಿಸಲು ಅಲೋವೆರಾಗೆ ಆಯಿಲ್ ಮತ್ತು ಮೊಟ್ಟೆಯ ಹಳದಿ ಭಾಗವನ್ನು ಸೇರಿಸಿ ಪೇಸ್ಟ್ ತಯಾರಿಸಿ ನೆತ್ತಿಗೆ ಹಚ್ಚಿ 25 ನಿಮಿಷ ಬಿಟ್ಟು ಶಾಂಪು ಬಳಸಿ ವಾಶ್ ಮಾಡಿ.ಕೂದಲುದುರುವ ಮತ್ತು ತಲೆ ಹೊಟ್ಟು ಸಮಸ್ಯೆ ನಿವಾರಿಸಲು 1 ಕಪ್ ಮೆಂತ್ಯ ಕಾಳಿನ ಪೇಸ್ಟ್ ಗೆ 2 ಚಮಚ ಅಲೋವೆರಾ ಜೆಲ್ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಕೂದಲಿಗೆ ಹಚ್ಚಿ 1 ಗಂಟೆ ಬಿಟ್ಟು ವಾಶ ಮಾಡಿ.ಕೂದಲು ಉದ್ದವಾಗಿಯೂ ಬೆಳೆಯುತ್ತದೆ.
ಕೂದಲಿಗೆ ನಿತ್ಯವೂ ಮಾಯಿಶ್ಚರೈಸ್ ಆರೈಕೆಯನ್ನು ನೀಡಬೇಕು ಎನ್ನುವ ಬಯಕೆ ನಿಮ್ಮದಾಗಿದ್ದರೆ ಈ ಕ್ರಮವನ್ನು ಅನುಸರಿಸಬಹುದು.
ಬೇಕಾಗುವ ಸಾಮಾಗ್ರಿಗಳು
*ಒಂದು ಕಪ್ ನೀರು
*1/2 ಕಪ್ ಅಲೋವೆರಾ ರಸ
*ಒಂದು ಸ್ಪ್ರೇ ಬಾಟಲ್
ಬಳಸುವ ವಿಧಾನ
*ಸ್ಪ್ರೇ ಬಾಟಲ್ ಅಲ್ಲಿ ಒಂದು ಕಪ್ ನೀರು ಮತ್ತು ಅರ್ಧ ಕಪ್ ಅಲೋವೆರಾ ರಸವನ್ನು ಸೇರಿಸಿ, ಚೆನ್ನಾಗಿ ಮಿಶ್ರಗೊಳಿಸಿ.
*ಕೇಶ ರಾಶಿಯನ್ನು ತೊಳೆದ ನಂತರ ಅಲೋವೆರಾ ಮಿಶ್ರಿತ ನೀರನ್ನು ಕೇಶರಾಶಿಗೆ ಸಿಂಪಡಿಸಿ.
ಬಳಿಕ ಹಾಗೆಯೇ ಒಣಗಲು ಬಿಡಿ.
*ಅಲೋವೆರಾ ನೀರನ್ನು ಸಿಂಪಡಿಸಿದ ನಂತರ ಪುನಃ ಕೇಶರಾಶಿಯನ್ನು ತೊಳೆಯುವ ಅಗತ್ಯ ಇರುವುದಿಲ್ಲ. ಹಾಗೆಯೇ ಇರಬಹುದು.
*ಆದಷ್ಟು ಮನೆಯಲ್ಲಿಯೇ ತಯಾರಿಸಿಕೊಂಡ ಅಲೋವೆರಾ ರಸವನ್ನು ಬಳಸಿ.
*ಅಂಗಡಿಯಿಂದ ತಂದ ಅಲೋವೆರಾ ರಸವಾಗಿದ್ದರೆ ಅದರ ಬಳಕೆಯ ಅವಧಿಯನ್ನು ಹಾಗೂ ತಯಾರಿಸಿದ ದಿನಾಂಕವನ್ನು ಪರಿಶೀಲಿಸಿ ಬಳಸಿ.