ಬೆಂಗಳೂರು: ವಾಲ್ಮೀಕಿ, ಮುಡಾ ಹಗರಣಗಳಿಂದ ಸಿಎಂ ಸಿದ್ದರಾಮಯ್ಯ ಕುರ್ಚಿಗೆ ಕಂಟಕ ಎದುರಾದಂತೆ ಕಾಣ್ತಿದೆ. ಹೈಕಮಾಂಡ್ ಬುಲಾವ್ ಹಿನ್ನೆಲೆ ನಾಳೆ ಸಿಎಂ,ಡಿಸಿಎಂ ದೆಹಲಿಗೆ ತೆರಳ್ತಿದ್ದಾರೆ.ನಾಯಕತ್ವ ಬದಲಾವಣೆಯ ಸದ್ದು ಸೈಲೆಂಟಾಗಿ ಶುರುವಾಗಿದೆ.ಹೀಗಾಗಿ, ಸಿಎಂ ಆಪ್ತರು ಆಲರ್ಟ್ ಆಗಿದ್ದಾರೆ.ಅಹಿಂದ ಹೋರಾಟ ರೂಪಿಸುವ ಮೂಲಕ ಸಿಎಂ ಬೆಂಬಲಕ್ಕೆನಿಂತಿದ್ದಾರೆ.
ಯೆಸ್,ವಾಲ್ಮೀಕಿ ಹಾಗೂ ಮುಡಾ ಹಗರಣಗಳ ಸುಳಿಯಲ್ಲಿ ಸರ್ಕಾರ ಹೊರಳಾಡ್ತಿದೆ.ರಾಜ್ಯಸಭೆ ಹಾಗೂ ಲೋಕಸಭೆ ಸದನದಲ್ಲಿ ವಿಷಯ ಪ್ರಸ್ತಾಪದಿಂದಾಗಿ ಹೈಕಮಾಂಡ್ ಗೂ ಮುಜುಗರ ಎದುರಾಗಿದೆ.ಇದ್ರಿಂದ ಸರ್ಕಾರ ಹಾಗೂ ಪಕ್ಷಕ್ಕಾಗಿರುವ ಡ್ಯಾಮೇಜ್ ಸರಿಪಡಿಸೋಕೆ ವರಿಷ್ಟರು ಮುಂದಾಗಿದ್ದಾರೆ.ರಾಜ್ಯ ನಾಯಕರಿಂದ ಮಾಹಿತಿ ಪಡೆಯಲು ದೆಹಲಿಗೆ ಬರುವಂತೆ ಬುಲಾವ್ ನೀಡಿದ್ದಾರೆ.ಹೀಗಾಗಿ ನಾಳೆ ಸಿಎಂ,ಡಿಸಿಎಂ ಕೆಲ ಹಿರಿಯ ಸಚಿವರು ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ.ಹೈಕಮಾಂಡ್ ಕರೆದಿರುವ ಸಭೆಯಲ್ಲಿಭಾಗವಹಿಸಲಿದ್ದಾರೆ..ಆನಂತರ ಖರ್ಗೆ,ರಾಹುಲ್,ಸೋನಿಯಾ ಭೇಟಿ ಮಾಡಲಿದ್ದು ಎರಡು ಹಗರಣಗಳಿಗೆ ಸಂಬಂಧಿಸಿದಂತೆ ದಾಖಲೆ ಸಮೇತ ವಿವರಣೆ ನೀಡಲಿದ್ದಾರೆ.
ಇನ್ನು ವಾಲ್ಮೀಕಿ,ಮೂಡಾ ಪ್ರಕರಣಗಳು ಸಿಎಂ ಬುಡಕ್ಕೆಬಂದಿರುವ ಹಿನ್ನೆಯಲ್ಲಿ ಹೈಕಮಾಂಡ್ ಎಂಟ್ರಿಯಾಗಿದೆ.ಸಿಎಂ,ಡಿಸಿಎಂ ಇಬ್ಬರಿಂದ ನಾಳೆ ಮಾಹಿತಿ ಪಡೆಯೋಕೆ ಹೊರಟಿದೆ.ಇದ್ರ ಬೆನ್ನಲ್ಲೇ ಸಿಎಂ ಕುರ್ಚಿಯ ಅಲುಗಾಟದ ಚರ್ಚೆಗಳೂ ನಡೆದಿವೆ.ಇತ್ತ ಬಿಜೆಪಿ,ಜೆಡಿಎಸ್ ನಾಯಕರು ಸಹ ಇದೇ ಪ್ರಕರಣಗಳ ವಿರುದ್ಧ ಹೋರಾಟಕ್ಕಿಳಿದಿವೆ.ಪಾದಯಾತ್ರೆಯ ಮೂಲಕ ಇನ್ನಷ್ಟು ಕಗ್ಗಂಟ್ಟು ಸೃಷ್ಟಿಸಲು ಹೊರಟಿವೆ.ಹೀಗಾಗಿ ಸಿಎಂ ರಕ್ಚಣೆಗೆ ಅವರ ಆಪ್ತರು ಗಮನಹರಿಸಿದ್ದಾರೆ.ಕಮಲತೆನೆ ಪಡೆಗೆ ಸೆಡ್ಡುಹೊಡೆಯೋಕೆ ಪ್ಲಾನ್ರೂಪಿಸಿದ್ದಾರೆ.ಅಹಿಂದ ನಾಯಕನೆಂಬ ಕಾರಣಕ್ಕೆ ಎರಡೂ ಪಕ್ಷಗಳು ಟಾರ್ಗೆಟ್ ಮಾಡ್ತಿವೆ ಅನ್ನೋದನ್ನೇ ದೊಡ್ಡದಾಗಿ ಬಿಂಬಿಸಿ ರಾಜ್ಯದ ಜನರ ಗಮನಸೆಳೆಯೋಕೆ ಹೊರಟಿದ್ದಾರೆ.ತುಮಕೂರಿನಲ್ಲಿ ಬೃಹತ್ ಅಹಿಂದ ಹೋರಾಟವನ್ನ ಮಾಡೋಕೆ ವೇದಿಕೆ ಸಜ್ಜಾಗ್ತಿದೆ. ಬೃಹತ್ ಸಮಾವೇಶದ ಮೂಲಕ ರಾಷ್ಟ್ರೀಯ ಮಟ್ಟದಲ್ಲೂಅಹಿಂದ ವರ್ಗಗಳಿಗೆ ಸ್ಪಷ್ಟ ಸಂದೇಶ ರವಾನಿಸಲು ಹೊರಟಿದ್ದಾರೆ.ಬಿಜೆಪಿ – ಜೆಡಿಎಸ್ ಅಹಿಂದ ಸಮುದಾಯ ನಾಯಕನ ವಿರುದ್ಧ ಪಾದಯಾತ್ರೆ ಮಾಡುತ್ತಿದ್ದಾರೆಂದು ಸಹಕಾರ ಸಚಿವ ಕೆ ಎನ್ ರಾಜಣ್ಣ ಹೇಳಿದ್ದಾರೆ.
ಇನ್ನು ಸಿಎಂ ಕುರ್ಚಿ ಮೇಲೆ ಟವೆಲ್ ಹಾಕಿದವರಿಂದಲೇ ಮುಡಾ ಹಗರಣ ಬಯಲಾಗಿದೆ ಅನ್ನೋಮಾತುಗಳು ಕಾಂಗ್ರೆಸ್ ವಲಯದಲ್ಲಿ ಹರಿದಾಡ್ತಿವೆ.ಪರೋಕ್ಷವಾಗಿ ಮೂಡಾ ಹಗರಣ ಹೊರಬರಲು ಡಿಕೆಶಿಯೇ ಕಾರಣ ಅನ್ನೋಚರ್ಚೆಗಳು ಶುರು ವಾಗಿವೆ.ಇದ್ರಿಂದ ಬೇಸರಗೊಂಡಿರುವ ಸಿದ್ದರಾಮಯ್ಯ ಆಪ್ತರು ಡಿಕೆಶಿ ವಿರುದ್ಧ ತಿರುಗಿಬಿದ್ದಿದ್ದಾರೆ.ಅಹಿಂದ ಸಮಾವೇಶದ ಮೂಲಕವೇ ತಿರುಗೇಟು ನೀಡೋಕೆ ಹೊರಟಿದ್ದಾರೆ.ತುಮಕೂರಿನಲ್ಲಿ ಅಹಿಂದ ಸಮಾವೇಶ ಮಾಡೋಕೆ ಹೊರಟಿದ್ದಾರೆ.ಇನ್ನು ಸಿದ್ದರಾಮೋತ್ಸವದ ಹೆಸರಿನಲ್ಲಿ ಹುಬ್ಬಳ್ಳಿಯಲ್ಲೂ ಸಮಾವೇಶಕ್ಕೆ ತಯಾರಿ ನಡೆಸಿದ್ದಾರೆ.
ಒಟ್ನಲ್ಲಿ ವಾಲ್ಮೀಕಿ ಹಾಗೂ ಮೂಡಾ ಹಗರಣದ ಸದ್ದು ರಾಷ್ಟ್ರೀಯ ಮಟ್ಟದಲ್ಲೂ ಚರ್ಚೆಯಾಗ್ತಿದೆ.ಇದು ಎಐಸಿಸಿ ನಾಯಕರಿಗೂ ಮುಜುಗರ ತಂದಿಟ್ಟಿದೆ.ಈ ನಿಟ್ಟಿನಲ್ಲೇ ಸಿಎಂ,ಡಿಸಿಎಂ ಇಬ್ಬರನ್ನೂ ದೆಹಲಿಗೆ ಕರೆದಿದ್ದಾರೆ.ಇದ್ರ ನಡುವೆ ನಾನಾ ಚರ್ಚೆಗಳು ಶುರುವಾಗಿವೆ.ನಾಯಕತ್ವದ ಚರ್ಚೆಗಳು ನಡೆದಿವೆ.ಈಕಾರಣದಿಂದ ಸಿಎಂ ರಕ್ಷಣೆಗೆ ಅವರ ಆಪ್ತ ಬಳಗ ಮುಂದಾಗಿದ್ದು,ಅಹಿಂದ ಸಮಾವೇಶಕ್ಕೆ ಪ್ಲಾನ್ರೂಪಿಸಿದೆ.