ಬಿಗ್ ಬಾಸ್ ರಿಯಾಲಿಟಿ ಶೋಗೆ ಹೋಗಿ ಬಂದ ಬಳಿಕ ಸಾಕಷ್ಟು ಜನರ ಜೀವನ ಬದಲಾಗಿದೆ. ಹಲವರಿಗೆ ಖ್ಯಾತಿ ಹೆಚ್ಚಾಗಿದ್ರೆ ಮತ್ತೊಂದಷ್ಟು ಮಂದಿ ಹಾಗೆಯೇ ಉಳಿದುಬಿಟ್ಟಿದ್ದಾರೆ. ಸದ್ಯ ಬಿಗ್ ಬಾಸ್ ಗೆ ಹೋಗಿ ಬಂದಿರೋ ಡ್ಯಾನ್ಸರ್ ಕಿಶನ್ ಬಿಳಗಲಿ ಸ್ಮಾಲ್ ಸ್ಕ್ರೀನ್ ನಲ್ಲಿ ಸಖತ್ ಬ್ಯುಸಿಯಾಗಿದ್ದಾರೆ.
ಡ್ಯಾನ್ಸರ್ ಕಿಶನ್ ಬಿಗ್ ಬಾಸ್ ನಿಂದ ಹೊರ ಬಂದ ಬಳಿಕ ಆಕ್ಟಿಂಗ್ ನಲ್ಲಿ ತೊಡಗಿಕೊಂಡಿದ್ದಾರೆ. ’ನಿನಗಾಗಿ’ ಧಾರವಾಹಿಯಲ್ಲಿ ವಿಭಿನ್ನ ಕ್ಯಾರೆಕ್ಟರ್ ಮಾಡ್ತಿದ್ದಾರೆ. ತಮ್ಮ ಪಾತ್ರದ ಮೂಲಕ ಜನರಿಗೆ ಹತ್ತಿರವಾಗಿರೋ ಕಿಶನ್ ಇದೀಗ ಡಿಫರೆಂಟ್ ಲುಕ್ ನಲ್ಲಿ ಭರ್ಜರಿ ಫೋಟೋ ಶೂಟ್ ಮಾಡಿಸಿದ್ದಾರೆ.
‘ನಿನಗಾಗಿ’ ಧಾರವಾಹಿಯಲ್ಲಿ ವಿಲನ್ ರೋಲ್ ಮಾಡ್ತಿರುವ ಕಿಶನ್ ಬಿಳಗಲಿ ಫೋಟೋ ಶೂಟ್ ನಲ್ಲಿ ಡಾನ್ ರೀತಿ ಫೋಸ್ ನೀಡಿದ್ದಾರೆ. ಈ ಲುಕ್ ಯಾವ ಸೀರಿಯಲ್ಗೆ ಅನ್ನೋದು ಗೊತ್ತಿಲ್ಲ. ಆದರೆ, ಇದು ಸೂಪರ್ ಆಗಿದ್ದು, ರೆಟ್ರೋ ಫೀಲ್ ನೀಡುತ್ತಿದೆ.
ಹಾಗೆ ಈ ಲುಕ್ ನೋಡಿದವ್ರು ಇದು ನಿನಗಾಗಿ ಸೀರಿಯಲ್ ಲುಕ್ಕಾ ಅನ್ನೋ ಪ್ರಶ್ನೆ ಕೇಳಿದಂತೇನೂ ಇದೆ. ಯಾಕೆಂದ್ರೆ, ನಿಮ್ಮ ಜಾಕೆಟ್ ಚೆನ್ನಾಗಿದೆ. ಅದರಲ್ಲೂ ವಿಶೇಷವಾಗಿ ಇಡೀ ಸೀರಿಯಲ್ನಲ್ಲಿ ನಿಮ್ಮ ಜಾಕೆಟ್ ಕಲೆಕ್ಷನ್ ಸೂಪರ್ ಅಂತಲೂ ಕಾಂಪ್ಲಿಮೆಂಟ್ಸ್ ಕೊಟ್ಟಿದ್ದಾರೆ.
ಡಾರ್ಕ್ ಬ್ಲೂ ಹ್ಯಾಟ್ ಧರಿಸಿರುವ ಕಿಶನ್, ಕಣ್ಣಿಗೆ ಸೂಪರ್ ಗ್ಲಾಸ್ ಹಾಕೊಂಡಿದ್ದಾರೆ. ಇದೆಲ್ಲದರ ಜೊತೆಗೆ ಇಸ್ಪೀಟ್ ಎಲೆಗಳೂ ಇವೆ. ಒಂದು ರೀತಿ ಡಾನ್ ಒಬ್ಬ ಕ್ಲಬ್ನಲ್ಲಿ ಕಾಣಿಸಿಕೊಂಡಂತೆನೂ ಇದು ಕಾಣಿಸುತ್ತಿದೆ. ಇದನ್ನ ನೋಡಿದ್ರೆ ಇದು ಒಂದು ಸಿನಿಮಾ ಗೆಟಪ್ ಇಲ್ವೇ ಸೀರಿಯಲ್ ಗೆಟಪ್ ಇರಬಹುದು ಅನಿಸುತ್ತದೆ.
ಕಿಶನ್ ಬಿಳಗಲಿ ಸಿನಿಮಾದಲ್ಲೂ ಅಭಿನಯಿಸಿದ್ದಾರೆ. ಮಾಲಾಶ್ರೀ ಅಭಿನಯದ ಚಿತ್ರದಲ್ಲಿ ವಿಶೇಷ ರೋಲ್ ಮಾಡಿದ್ದಾರೆ. ಇತ್ತೀಚಿಗೆ ಈ ಚಿತ್ರದ ಮೇಕಿಂಗ್ ವಿಡಿಯೋ ಕೂಡ ಹೊರ ಬಂದಿದೆ. ಈ ಚಿತ್ರದ ಮೂಲಕ ಕಿಶನ್ ಸ್ಯಾಂಡಲ್ ವುಡ್ ಗೂ ಎಂಟ್ರಿಕೊಟ್ಟಿದ್ದಾರೆ.