ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಬಳ್ಳಾರಿ ಜೈಲಿನಲ್ಲಿ ನರಳುತ್ತಿದ್ದಾರೆ. ತೀವ್ರ ಬೆನ್ನು ನೋವಿನಿಂದ ಬಳಲುತ್ತಿರುವ ದರ್ಶನ್ ಗೆ ಎಂಆರ್ಐ ಸ್ಕಾನಿಂಗ್ ಮಾಡಿಸಲು ಸೂಚಿಸಿದ್ದಾರೆ. ಆದರೆ ಇದಕ್ಕೆ ಒಪ್ಪದ ದರ್ಶನ್ ಬೆಂಗಳೂರಿಗೆ ತೆರಳಿದ ಬಳಿಕವೇ ಮಾಡಿಸುವುದಾಗಿ ಹಠ ಹಿಡಿದಿದ್ದರು. ಇದೀನ ನೋವು ಹೆಚ್ಚಾದ ಹಿನ್ನೆಲೆಯಲ್ಲಿ ವೈದ್ಯರ ಸೂಚನೆಯ ಮೇರೆಗೆ ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ಎಂಆರ್ಐ ಸ್ಕಾನಿಂಗ್ ಮಾಡಿಸಲು ನಿರ್ಧರಿಸಿದ್ದಾರೆ.
ದರ್ಶನ್ ಬೆನ್ನುನೋವು ಸಮಸ್ಯೆ ಹೆಚ್ಚಾಗಿದ್ದು ಈಗಾಗಲೇ ಫಿಸಿಯೋಥೆರಪಿ ಮಾಡಿಸಲಾಗಿದೆ. ಆದರೆ ನೋವು ಮಾತ್ರ ಕಡಿಮೆಯಾಗಿಲ್ಲ. ಹೀಗಾಗಿ ದರ್ಶನ್ ಜೊತೆ ಜೈಲಿನ ಅಧಿಕಾರಿಗಳು ಮಾತನಾಡಿದ್ದು, ಸ್ಕ್ಯಾನಿಂಗ್ ಮಾಡಿಸಲೇಬೇಕು ಎಂದಿದ್ದಾರೆ. ಜೈಲಾಧಿಕಾರಿಗಳ ಮಾತಿಗೆ ದರ್ಶನ್ ಒಪ್ಪಿಗೆ ಸೂಚಿಸಿದ್ದು ನಾಳೆ ಕುಟುಂಬಸ್ಥರು ಜೈಲಿಗೆ ಭೇಟಿ ನೀಡಲಿದ್ದಾರೆ. ಕುಟುಂಬಸ್ಥರೊಂದಿಗೆ ಮಾತನಾಡಿ ಸ್ಕಾನಿಂಗ್ ಮಾಡಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ.
ಮಾಧ್ಯದಮವರು ಮುತ್ತಿಕೊಳ್ಳುತ್ತಾರೆ ಹಾಗೂ ಭದ್ರತೆಯ ಸಮಸ್ಯೆ ಆಗುತ್ತದೆ ಎಂದು ದರ್ಶನ್ ಅವರು ಸ್ಕಾನಿಂಗ್ ಬೇಡ ಎನ್ನುತ್ತಿದ್ದರು. ಈಗ ಬೆನ್ನುನೋವು ಕೈಮೀರಿರುವುದರಿಂದ ದರ್ಶನ್ ಒಪ್ಪಿಗೆ ಕೊಡಲೇಬೇಕಾದ ಅನಿವಾರ್ಯತೆ ಎದುರಾಗಿದೆ.
ಈಗಾಗಲೇ ಬಳ್ಳಾರಿಯ ವಿಮ್ಸ್ ನಿರ್ದೇಶಕರ ಜೊತೆ ಮೇಲಾಧಿಕಾರಿಗಳು ಮಾತನಾಡಿದ್ದಾರೆ. ಅಕ್ಟೋಬರ್ 22ರಂದು ಎಂಆರ್ಐ ಸ್ಕಾನಿಂಗ್ ಬಗ್ಗೆ ದಿನಾಂಕ ನಿಗದಿ ಮಾಡಲಾಗಿದ್ದು, ವಿಮ್ಸ್ ಆಸ್ಪತ್ರೆಲ್ಲಿ ನಲ್ಲಿ ಸೆಕ್ಯುರಿಟಿ ಕೊಡುವ ಬಗ್ಗೆ, ಸ್ಕಾನಿಂಗ್ ಬಗ್ಗೆ ಅಧಿಕಾರಿಗಳು ಚರ್ಚೆ ನಡೆಸಲಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಜೈಲು ಸೇರಿ 130 ದಿನಗಳ ಮೇಲಾಗಿದೆ. ದರ್ಶನ್ ಅವರು ಜಾಮೀನಿಗಾಗಿ ಅರ್ಜಿ ಸಲ್ಲಿಕೆ ಮಾಡಿದ್ದು, ಕೆಳ ಹಂತದ ಕೋರ್ಟ್ನಲ್ಲಿ ಇದು ರಿಜೆಕ್ಟ್ ಆಗಿದೆ. ಹೈಕೋರ್ಟ್ನಲ್ಲಿ ದರ್ಶನ್ ಪರವಾಗಿ ಅರ್ಜಿ ಸಲ್ಲಿಸಲಾಗಿದೆ.