ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಾಟೇರ ಸಿನಿಮಾದ ಸಕ್ಸಸ್ ಖುಷಿಯಲ್ಲಿದ್ದಾರೆ. ಈ ಮಧ್ಯೆ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಅವರಿಗೆ ಹೇಳಿದ ಮಾತು ವಿವಾದಕ್ಕೆ ಕಾರಣವಾಗಿದೆ.
ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಅವರಿಗೆ ದರ್ಶನ್ ತಗಡು ಎಂಬ ಪದ ಬಳಸಿದ್ದು ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ. ಈ ಕುರಿತು ದರ್ಶನ್ ವಿರುದ್ಧ ದೂರು ದಾಖಲಾಗಿದೆ.
ಆದರೆ ಇದ್ಯಾವುದರ ಬಗ್ಗೆ ತಲೆಕೆಡಿಸಿಕೊಳ್ಳದ ನಟ ದರ್ಶನ್ ಆರಾಮವಾಗಿ ಪತ್ನಿ ಹಾಗೂ ಆಪ್ತ ಸ್ನೇಹಿತರೊಂದಿಗೆ ಪಾರ್ಟಿ ಎಂಜಾಯ್ ಮಾಡಿದ್ದಾರೆ.
ಪತ್ನಿ ವಿಜಯಲಕ್ಷ್ಮಿ ಜೊತೆಗೆ ಡ್ಯಾನ್ಸ್ ಫ್ಲೋರ್ ನಲ್ಲಿ ದರ್ಶನ್ ಸಖತ್ ಆಗಿ ಹೆಜ್ಜೆ ಹಾಕಿದ್ದಾರೆ. ವಿಜಯಲಕ್ಷ್ಮಿ ಸಹ ಪತಿಯೊಟ್ಟಿಗೆ ಖುಷಿಯಿಂದ ಡ್ಯಾನ್ಸ್ ಮಾಡಿದ್ದಾರೆ.
ದರ್ಶನ್ರ ಹಲವು ಗೆಳೆಯರು ಸಹ ಪಾರ್ಟಿಯಲ್ಲಿ ಭಾಗಿಯಾಗಿದ್ದರು.
ದರ್ಶನ್ ವಿರುದ್ಧ ಮಹಿಳಾಪರ ಸಂಘಟನೆ ಹಾಗೂ ಇತರೆ ಕೆಲವು ಸಂಘಟನೆಗಳು ದೂರುಗಳನ್ನು ದಾಖಲಿಸಿವೆ. ಆದರೆ ಅದ್ಯಾವುದನ್ನೂ ಗಮನಕ್ಕೆ ತೆಗೆದುಕೊಳ್ಳದೆ ಆರಾಮವಾಗಿ ಪಾರ್ಟಿ ಮಾಡಿದ್ದಾರೆ.
ಪತ್ನಿಯೊಂದಿಗೆ ಪಾರ್ಟಿ ಮಾಡುವ ಮೂಲಕ ಕೆಲವು ದಿನಗಳ ಹಿಂದೆ ಪವಿತ್ರಾ ಗೌಡ ಹಾಗೂ ವಿಜಯಲಕ್ಷ್ಮಿ ನಡುವೆ ಎದ್ದಿದ್ದ ವಿವಾದಕ್ಕೂ ಪರೋಕ್ಷ ಉತ್ತರವನ್ನು ದರ್ಶನ್ ನೀಡಿದ್ದಾರೆ.
ದರ್ಶನ್ ಪ್ರಸ್ತುತ ‘ಕಾಟೇರ’ ಸಿನಿಮಾದ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ‘ಕಾಟೇರ’ ಇತ್ತೀಚೆಗಷ್ಟೆ 50 ದಿನ ಪೂರೈಸಿದೆ. ಇದೀಗ ‘ಡೆವಿಲ್’ ಸಿನಿಮಾದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ.