ಬೆಂಗಳೂರು:- ಪರಪ್ಪನ ಅಗ್ರಹಾರ ಜೈಲಲ್ಲಿ ಒಟ್ಟಿಗಿದ್ದ ದರ್ಶನ್ ಗ್ಯಾಂಗ್ ಈಗ ದಿಕ್ಕಾಪಾಲಾಗುತ್ತಿದೆ. ನಟ ದರ್ಶನ್ರನ್ನು ಬಳ್ಳಾರಿ ಸೆಂಟ್ರಲ್ ಜೈಲ್ಗೆ ಶಿಫ್ಟ್ ಮಾಡಲು 24ನೇ ಎಸಿಎಂಎಂ ಕೋರ್ಟ್ ಆದೇಶ ನೀಡಿದೆ.
ಕೆಲಹೊತ್ತಲ್ಲೇ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ದರ್ಶನ್ ಶಿಫ್ಟ್ ಮಾಡಲಾಗುತ್ತೆ. ದರ್ಶನ್ ಶಿಫ್ಟ್ ಆಗಲಿರುವ ಬಳ್ಳಾರಿ ಜೈಲಿನಲ್ಲಿ ವಿಡಿಯೋ ಕಾನ್ಫರೆನ್ಸ್ ವ್ಯವಸ್ಥೆ ಇದೆ.
ಹೀಗಾಗಿ ಮುಂದೆ ನ್ಯಾಯಾಲಯದ ವಿಚಾರಣೆಗಳಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಒಳಪಡಿಸಲಾಗುತ್ತದೆ. ಕೊಲೆ ಕೇಸ್ನಲ್ಲಿ ಜೈಲುಪಾಲಾಗಿರುವ ನಟ ದರ್ಶನ್ ಅವರನ್ನು ಬಳ್ಳಾರಿ ಜೈಲ್ಗೆ ಶಿಫ್ಟ್ ಮಾಡಲಾಗ್ತಿದೆ. ಹದಿನಾರು ಎಕರೆ ವಿಸ್ತೀರ್ಣದಲ್ಲಿರುವ ಬಳ್ಳಾರಿ ಜೈಲಿನಲ್ಲಿ ಬಿಗಿ ಭದ್ರತೆ ಇದೆ. ಇನ್ನು ನಟ ದರ್ಶನ್ರನನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡ್ತಿರೋ ಬಗ್ಗೆ ಈಗಾಗಲೇ ಜೈಲಾಧಿಕಾರಿಗೆ ಮಾಹಿತಿ ನೀಡಲಾಗಿದೆ. ವಿಶೇಷ ಭದ್ರತಾ ವಿಭಾಗದ 15ನೇ ಸೆಲ್ನಲ್ಲಿ ದರ್ಶನ್ರನ್ನು ಇರಿಸಲು ನಿರ್ಧರಿಸಲಾಗಿದೆ.
ಈಗಾಗಲೇ ಮೂವರು ಸಿಬ್ಬಂದಿಯನ್ನು ದರ್ಶನ್ ಭಧ್ರತೆಗೆ ಅಂತ ನಿಯೋಜನೆ ಮಾಡಲಾಗಿದೆ. ದರ್ಶನ್ಗೆ 24 ಗಂಟೆಯೂ ಸಿಸಿಟಿವಿ ಹಾಗೂ ಬಾಡಿವೋರ್ನ್ ಕ್ಯಾಮರಾ ಕಣ್ಗಾವಲು ಇರಲಿದೆ. ದರ್ಶನ್ ಭದ್ರತೆಗೆ ನಿಯೋಜನೆಯಾಗಿರುವ ಸಿಬ್ಬಂದಿ ಬಾಡಿ ಕ್ಯಾಮೆರಾ ಅಳವಡಿಸಿಕೊಳ್ಳುವುದು ಕಡ್ಡಾಯ ಅಂತ ಆದೇಶ ಮಾಡಲಾಗಿದೆ. ಮತ್ತೊಂದೆಡೆ ಜೈಲಿನ ಸೂಪರಿಂಡೆಂಟ್ ಸೇರಿ 100 ಅಧಿಕಾರಿಗಳಿದ್ದು, ಈ ಜೈಲ್ನಲ್ಲಿ ಹಿಂದೂ ಕಾರ್ಯಕರ್ತ ಹರ್ಷ ಹಾಗೂ ಪ್ರವೀಣ್ ಪೂಜಾರಿ ಕೊಲೆ ಕೇಸ್ನ ಆರೋಪಿಗಳು ಸೇರಿ ಒಟ್ಟು 385 ಖೈದಿಗಳಿದ್ದಾರೆ.