ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ನಟ ದರ್ಶನ್ ಜೈಲು ಸೇರಿ ಮೂರು ತಿಂಗಳು ಕಳೆದಿದೆ. ಪರಪ್ಪನ ಅಗ್ರಹಾರ ಹೈಲಿನಲ್ಲಿ ರಾಜಾತಿಥ್ಯ ಪಡೆದ ಹಿನ್ನೆಲೆ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿದೆ. ಬಳ್ಳಾರಿಯಲ್ಲಿ ಹೈ ಸೆಕ್ಯೂರಿಟಿ ಸೆಲ್ ನಲ್ಲಿ ನಟ ದರ್ಶನ್ ಅವರನ್ನು ಇರಿಸಲಾಗಿದ್ದು, ದರ್ಶನ್ ಬಳ್ಳಾರಿ ಸೆಂಟ್ರಲ್ ಜೈಲು ಸೇರಿ 19 ದಿನಗಳೇ ಕಳೆದು ಹೋಗಿದೆ. ಈ ಮಧ್ಯೆ ದರ್ಶನ್ ಮನ ಅಮ್ಮನನ್ನು ಕಾಣಲು ಹಂಬಲಿಸುತ್ತಿದೆ. ದರ್ಶನ್ ಬಳ್ಳಾರಿ ಜೈಲು ಸೇರಿ ಇಷ್ಟು ದಿನ ಕಳೆದಿದ್ರು ಒಮ್ಮೆಯೂ ಮಗನನ್ನು ನೋಡಲು ದರ್ಶನ್ ತಾಯಿ ಮೀನಾ ತೂಗುದೀಪ ಬಂದಿಲ್ಲ.
ಬಳ್ಳಾರಿ ಜೈಲು ಸೇರಿ 19 ದಿನ ಆದ್ರೂ ನಟ ದರ್ಶನ್ ತಾಯಿ ಮೀನಾ ತೂಗುದೀಪ ಮಗನನ್ನು ನೋಡಲು ಈ ಜೈಲಿಗೆ ಬಂದಿಲ್ಲ. ಅಮ್ಮನನ್ನು ನೋಡಬೇಕು ಎಂದು ದರ್ಶನ ಹಂಬಲಿಸುತ್ತಿದ್ದಾರಂತೆ. ಅಮ್ಮನ ಕನವರಿಕೆಯಲ್ಲೇ ದಿನದೂಡುತ್ತಿದ್ದಾರೆ ಎನ್ನಲಾಗ್ತಿದೆ. ದರ್ಶನ್ ಪತ್ನಿ ವಿಜಯಲಕ್ಷ್ಮಿ 3 ಬಾರಿ ಬಳ್ಳಾರಿ ಜೈಲಿಗೆ ಬಂದು ದರ್ಶನ್ ಭೇಟಿಯಾದ್ರು. ಸಹೋದರ ದಿನಕರ್ ತೂಗುದೀಪ್ ಕೂಡ 2 ಬಾರಿ ಬಳ್ಳಾರಿ ಜೈಲಿಗೆ ಬಂದಿದ್ರು. ಆದ್ರೆ ದರ್ಶನ್ ತಾಯಿ ಮೀನಾ ತೂಗುದೀಪ್ ಅವರು ಬಳ್ಳಾರಿ ಜೈಲಿಗೆ ಬಂದಿಲ್ಲ. ಪತ್ನಿ ಹಾಗೂ ಸಹೋದರನ ಬಳಿ ತಾಯಿಯ ಬಗ್ಗೆ ದರ್ಶನ್ ವಿಚಾರಿಸಿದ್ದಾರೆ.
ಕಳೆದ ಬಾರಿ ಮೀನಾ ತೂಗುದೀಪ ಬಳ್ಳಾರಿ ಜೈಲಿಗೆ ಮಗನನ್ನು ನೋಡಲು ಬರಬೇಕಿತ್ತು. ಆದರೆ ಕೊನೆ ಕ್ಷಣದಲ್ಲಿ ಬರಲು ಸಾಧ್ಯವಾಗಲಿಲ್ಲ. ಇದೀಗ ಅಮ್ಮನನ್ನು ಕಾಣುವ ದರ್ಶನ್ ಬಯಕೆ ಮತ್ತಷ್ಟು ಹೆಚ್ಚಾಗಿದೆ. ಮುಂದಿನ ಬಾರಿಗೆ ಬರುವಾಗ ಅಮ್ಮನನ್ನು ಕೂಡ ಕರೆದುಕೊಂಡು ಬರುವಂತೆ ಪತ್ನಿ ವಿಜಯಲಕ್ಷ್ಮಿ, ನಟ ದರ್ಶನ್ ಸೂಚಿಸಿದ್ದಾರೆ ಎನ್ನಲಾಗ್ತಿದೆ. ತಾಯಿಯ ನೆನಪಲ್ಲಿ ಕಳೆದೆರಡು ದಿನಗಳಿಂದ ದರ್ಶನ್ ಸಂಪೂರ್ಣವಾಗಿ ಮಂಕಾಗಿದ್ದಾರೆ ಎನ್ನಲಾಗ್ತಿದೆ.