ಬಳ್ಳಾರಿ:- ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಗೆ ಸಂಕಷ್ಟ ಮಾತ್ರ ತಪ್ಪುತ್ತಿಲ್ಲ. ಪರಪ್ಪನ ಅಗ್ರಹಾರದಲ್ಲಿ ರಾಜಾತಿಥ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ ರನ್ನು ಬಳ್ಳಾರಿಗೆ ಶಿಫ್ಟ್ ಮಾಡಲಾಗಿದೆ. ಇಲ್ಲೂ ಕೂಡ ದರ್ಶನ್ ಗೆ ಸಂಕಷ್ಟ ತಪ್ಪುತ್ತಿಲ್ಲ.
ದರ್ಶನ ವಿಚಾರಣೆಗೆ ಬೆಂಗಳೂರು ಪೊಲೀಸರು ಬಳ್ಳಾರಿಗೆ ಬರಲಿದ್ದಾರೆ. ಈಗಾಗಲೇ ಕೋರ್ಟ್ನಿಂದ 25 ದಿನಗಳ ಅನುಮತಿಯನ್ನು ಪಡೆದುಕೊಂಡಿದ್ದಾರೆ. ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿ ದರ್ಶನ್ನನ್ನು ಪೊಲೀಸರು ವಿಚಾರಣೆ ಮಾಡಲಿದ್ದಾರೆ. ಅಂತೆಯೇ ಇಂದು ಬೆಂಗಳೂರಿನ ಪೊಲೀಸರು ಬಳ್ಳಾರಿಗೆ ಬರಲಿದ್ದಾರೆ.
ವಿಡಿಯೋ ಕಾಲ್, ಟೀ ಪಾರ್ಟಿ ಫೋಟೋ ವೈರಲ್ ಸಂಬಂಧ ದರ್ಶನ್ ಮೇಲೆ ಕೇಸ್ ದಾಖಲಾಗಿದೆ. ಫೋಟೋ, ವಿಡಿಯೋ ವೈರಲ್ ಕೇಸ್ಗಲ್ಲಿ ದರ್ಶನ ಮುಖ್ಯ ಆರೋಪಿ ಆಗಿದ್ದಾರೆ. ದರ್ಶನ್, ಕುಳ್ಳ ಸೀನ, ವಿಲ್ಸನ್ ಗಾರ್ಡನ್ ನಾಗ ಹಾಗೂ ನಾಗರಾಜ್ ಮೇಕೂ ಕೇಸ್ ದಾಖಲಾಗಿದೆ. ದರ್ಶನ ಹೇಳಿಕೆ ದಾಖಲಿಸಿಕೊಂಡು ನಾಗನ ವಿಚಾರಣೆ ಸಾಧ್ಯತೆ ಇದೆ. ದರ್ಶನ ವಿಚಾರಣೆಗಾಗಿ ಪೊಲೀಸರು ಬಳ್ಳಾರಿಗೆ ಬರಲಿದ್ದಾರೆ.