ರೇಣುಕಾಸ್ವಾಮಿ ಕೇಸ್ನಲ್ಲಿ ಬಳ್ಳಾರಿ ಜೈಲಿನಲ್ಲಿರುವ ದರ್ಶನ್ ಸೊರಗಿ ಹೋಗಿದ್ದಾರೆ. ಅಲ್ಲಿನ ವಾತವಾರಣ, ಆಹಾರಕ್ಕೆ ಹೊಂದಿಕೊಳ್ಳಲು ಸಾಧ್ಯವಾಗದೆ ದರ್ಶನ್ ಕಂಗಲಾಗಿದ್ದಾರೆ. ಈ ಮಧ್ಯೆ ದರ್ಶನ್ ರನ್ನು ಭೇಟಿಯಾಗಲು ಬಳ್ಳಾರಿ ಜೈಲಿಗೆ ಅವರ ಕುಟುಂಬಸ್ಥರು, ವಕೀಲರು ಆಗಮಿಸಿದ್ದರು. ಈ ವೇಳೆ ದಾಸ ಗಡ್ಡ ಬಿಟ್ಟು ಸೆಲ್ನಿಂದ ಹೊರಗೆ ಬಂದಿದ್ದು ಪತ್ನಿ ಹಾಗೂ ಸಹೋದರನನ್ನು ನೋಡಿ ದರ್ಶನ್ ಮುಖದಲ್ಲಿ ಮತ್ತೆ ಕಳೆ ಕಾಣಿಸಿಕೊಂಡಿದೆ.
ಜೈಲಿನಲ್ಲಿರುವ ದರ್ಶನ್ ಭೇಟಿಯಾಗಲು ಪತ್ನಿ ವಿಜಯಲಕ್ಷ್ಮೀ ಹಾಗೂ ಸಹೋದರ ದಿನಕರ್ ತೂಗುದೀಪ ಅವರು ತೆರಳಿದ್ದರು. ಈ ವೇಳೆ ಸಂದರ್ಶಕರ ಕೊಠಡಿಗೆ ತೆರಳಲು ದರ್ಶನ್ ಅವರನ್ನು ಸೆಲ್ನಿಂದ ಹೊರಗೆ ಕರೆ ತರಲಾಯಿತು.
ಹೈಸೆಕ್ಯೂರಿಟಿ ಸೆಲ್ನಿಂದ ಹೊರ ಬಂದ ದರ್ಶನ್ ಅವರನ್ನು ಬಿಗಿ ಭದ್ರತೆಯಲ್ಲಿ ಕರೆ ತರಲಾಯಿತು. ಸುಮಾರು 24 ನಿಮಿಷಗಳ ಕಾಲ ವಿಜಯಲಕ್ಷ್ಮಿ, ದಿನಕರ್ ಹಾಗೂ ವಕೀಲರ ಜೊತೆಗೆ ದರ್ಶನ್ ಚರ್ಚೆ ಮಾಡಿ ವಾಪಸ್ ಸೆಲ್ಗೆ ತೆರಳಿದರು. ಕುಟುಂಬಸ್ಥರು ಹಾಗೂ ವಕೀಲರನ್ನು ಭೇಟಿಯಾಗಿ ಹೋಗುವಾಗ ದರ್ಶನ್ ಮುಖದಲ್ಲಿ ಕೊಂಚ ರಿಲ್ಯಾಕ್ಸ್ ಕಾಣಿಸಿಕೊಂಡಿತ್ತು.
ದರ್ಶನ್ ಬಳ್ಳಾರಿ ಜೈಲಿಗೆ ಹೋಗಿ ಇಂದಿಗೆ 16 ದಿನ ಕಳೆದಿದೆ. ಈ 16 ದಿನಗಳಲ್ಲಿ ಪತ್ನಿ ವಿಜಯಲಕ್ಷ್ಮಿ ಅವರು 3ನೇ ಬಾರಿ ಇಂದು ಭೇಟಿಯಾಗಿದ್ದಾರೆ. ಸೆಲ್ನಿಂದ ಬಂದ ದರ್ಶನ್ ಅವರು ಎರಡು ಬ್ಯಾಗ್ ಹಿಡಿದು ಬಂದರು. ಕಳೆದ ವಾರ ಪತ್ನಿ ನೀಡಿದ್ದ ಎರಡು ಬ್ಯಾಗ್ ತಂದ ದರ್ಶನ್ ಅವರು ಮತ್ತೊಂದು ಬ್ಯಾಗ್ ಹಿಡಿದು ವಾಪಸ್ ಸೆಲ್ಗೆ ಹೋಗಿದ್ದಾರೆ.