ರೇಣುಕಾ ಸ್ವಾಮಿ ಕೊಲೆ ಕೇಸ್ನಲ್ಲಿ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ 17 ಆರೋಪಿಗಳ ವಿರುದ್ಧ ಚಾರ್ಜ್ಶೀಟ್ ಸಲ್ಲಿಕೆ ಆಗಿದೆ. ಈಗಾಗಲೇ ಚಾರ್ಜ್ಶೀಟ್ ಸಲ್ಲಿಕೆಗೂ ಮೊದಲು ಪವಿತ್ರಾ ಗೌಡ ಹಾಗೂ ಇತರರು ಜಾಮೀನಿಗೆ ಅರ್ಜಿ ಸಲ್ಲಿಕೆ ಮಾಡಿದ್ದರು. ಆದರೆ ಜಾಮೀನು ಅರ್ಜಿ ರಿಜೆಕ್ಟ್ ಮಾಡಲಾಗಿತ್ತು. ಇದೀಗ ದೋಷಾರೋಪ ಪಟ್ಟಿ ಸಲ್ಲಿಕೆ ಬೆನ್ನಲ್ಲೇ ದರ್ಶನ್ ಅವರು ಜಾಮೀನು ಅರ್ಜಿ ಸಲ್ಲಿಕೆ ಮಾಡಲು ರೆಡಿ ಆಗಿದ್ದಾರೆ. ವಿಜಯಲಕ್ಷ್ಮೀ ಸೆಪ್ಟೆಂಬರ್ 5ರಂದು ಜೈಲಿಗೆ ಬಂದು ದರ್ಶನ್ ಅವರನ್ನು ಭೇಟಿ ಮಾಡಿದ್ದು ಈ ವೇಳೆ ಅವರು ಬೇಲ್ ವಿಚಾರವಾಗಿ ಮಾತುಕತೆ ನಡೆಸಿದ್ದಾರೆ.
ನಿನ್ನೆ (ಸೆಪ್ಟೆಂಬರ್ 5) ವಿಜಯಲಕ್ಷ್ಮೀ ಹಾಗೂ ದರ್ಶನ್ ಸಹೋದರ ದಿನಕರ್ ಬಳ್ಳಾರಿ ಸೆಂಟ್ರಲ್ ಜೈಲಿಗೆ ಭೇಟಿ ಮಾಡಿದ್ದರು. ಈ ವೇಳೆ ಮಹತ್ವದ ಚರ್ಚೆ ನಡೆಸಿದ್ದಾರೆ. ಮಾತುಕತೆ ವೇಳೆ ಜಾರ್ಜ್ ಶೀಟ್ನಲ್ಲಿರುವ ಅಂಶಗಳ ಬಗ್ಗೆ ದರ್ಶನ್ಗೆ ಮಾಹಿತಿ ನೀಡಿದ್ದು ಇದಕ್ಕೂ ಮೊದಲು ದರ್ಶನ್ ಅವರು ದೂರವಾಣಿ ಮೂಲಕ ವಕೀಲರ ಜೊತೆ ಮಾತನಾಡಿದ್ದರು. ಈ ವೇಳೆ ಜಾಮೀನಿನ ವಿಚಾರವಾಗಿ ಚರ್ಚೆ ನಡೆಸಿದ್ದಾರೆ.
ವಿಜಯಲಕ್ಷ್ಮೀ ಜೊತೆ ವಕೀಲರು ಬೇಲ್ ಅರ್ಜಿ ಕಳುಹಿಸಿದ್ದರು. ವಕೀಲರ ಜೊತೆ ಮಾತುಕತೆ ಬಳಿಕ ಬೇಲ್ ದರ್ಶನ್ ಅರ್ಜಿಗೆ ಸಹಿಹಾಕಿದ್ದರು. ವಿಜಯಲಕ್ಷ್ಮೀ ಹಾಗೂ ದಿನಕರ್ ಸಹಿ ಪಡೆದು ಹೋದ ಬಳಿಕ ಜೈಲಿಗೆ ನೋಟರಿ ಬಂದಿದೆ. ಸರ್ಕಾರಿ ನೋಟರಿಯವರು ಜೈಲು ಅಧಿಕಾರಿಗಳ ಸಮ್ಮುಖದಲ್ಲಿ ಜಾಮೀನು ಅರ್ಜಿ ಹಾಗೂ ಅಫಿಡವಿಟ್ ರೆಡಿ ಮಾಡಿದ್ದಾರೆ.