ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಒಟ್ಟು 17 ಆರೋಪಿಗಳನ್ನು ಬಂಧಿಸಲಾಗಿತ್ತು. ಘಟನೆ ನಡೆದ ನಾಲ್ಕು ತಿಂಗಳ ಬಳಿಕ ಮೂವರು ಆರೋಪಿಗಳನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.ಇದು ದರ್ಶನ್ಗೆ ಸ್ವಲ್ಪ ನಿರಾಳ ತಂದಿದೆ. ತನಗೂ ಜಾಮೀನು ಸಿಗಬಹುದು ಎಂಬ ನಿರೀಕ್ಷೆಯಲ್ಲಿ ದಾಸ ಇದ್ದಂತಿದೆ.
ದರ್ಶನ್ ಜಾಮೀನಿಗಾಗಿ ಪದೇ ಪದೇ ಅರ್ಜಿ ಸಲ್ಲಿಸುತ್ತಿದ್ದಾರೆ. ಆದ್ರೆ ಇದು ಹೈಪ್ರೋಫೈಲ್ ಆದ ಕಾರಣ ಪೊಲೀಸರು ಕೂಡ ಹೆಚ್ಚಿನ ಮುತುವರ್ಜಿ ವಹಿಸಿ ಮಾಹಿತಿ ಕಲೆ ಹಾಕುತ್ತಿದ್ದಾರೆ. ಇದೇ ಕಾರಣಕ್ಕೆ ಪದೇ ಪದೇ ದರ್ಶನ್ ಜಾಮೀನು ಅರ್ಜಿ ವಿಚಾರಣೆಯನ್ನು ಮುಂದೂಡಲಾಗುತ್ತಿದೆ.
ಇದೇ ತಿಂಗಳು 4 ನೇ ತಾರೀಖು ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮತ್ತೆ ನಡೆಯಲಿದ್ದು, ಜಾಮೀನು ಸಿಗವ ನಿರೀಕ್ಷೆಯಲ್ಲಿದ್ದಾರೆ. ಜಾಮೀನು ವಿಚಾರವಾಗಿ ಫೋನ್ನಲ್ಲಿ ಪತ್ನಿಯೊಂದಿಗೆ ಮಾತನಾಡಿರುವ ದರ್ಶನ್, ಏನು ಅಪ್ಡೇಟ್ ಇದೆ, ವಕೀಲರ ಕೆಲಸ ಹೇಗೆ ಮಾಡುತ್ತಿದ್ದಾರೆ? ಜಾಮೀನು ಸಿಗಬಹುದಾ ಅನ್ನೊ ಬಗ್ಗೆ ಮಾತನಾಡಿದ್ದಾರೆ. ಇದಕ್ಕೆ ಉತ್ತರ ನೀಡಿರುವ ವಿಜಯಲಕ್ಷ್ಮಿ ಖಂಡಿತ ನಾಲ್ಕನೇ ತಾರೀಖು ಜಾಮೀನು ಸಿಕ್ಕೆ ಸಿಗುತ್ತೆ, ತಾಯಿ ಚಾಮುಂಡೇಶ್ವರಿಯನ್ನ ನಂಬಿದ್ದೇನೆ. ನೀವು ಧೈರ್ಯವಾಗಿರಿ ಎಂದಿದ್ದಾರೆ. ಪತ್ನಿಯೊಂದಿಗೆ ಫೋನ್ನಲ್ಲಿ ಮಾತನಾಡಿದ ಬಳಿಕ ರಿಲ್ಯಾಕ್ಸ್ ಮೂಡಲ್ಲಿರುವ ದಾಸ, ಜೈಲಿನಲ್ಲಿ ಪುಸ್ತಕ ಓದುತ್ತಾ ಕುಳಿತುಕೊಂಡಿದ್ದಾರೆ.
ಜಾಮೀನು ಅರ್ಜಿ ವಿಚಾರಣೆ ನಡೆಯುವ ಬಗ್ಗೆ ಪತ್ನಿಯೊಂದಿಗೆ ಮಾತನಾಡಿದ ದರ್ಶನ್, ಮೂವರಿಗೆ ಜಾಮೀನು ಸಿಕ್ಕಿರುವ ಬಗ್ಗೆಯೂ ವಿಚಾರಿಸಿದ್ದಾರೆ. ಯಾರೆಲ್ಲ ಜಾಮೀನಿಗೆ ಅರ್ಜಿ ಹಾಕಿದ್ದಾರೆ. ಯಾವ ಹಂತದಲ್ಲಿ ಜಾಮೀನು ಅರ್ಜಿ ವಿಚಾರಣೆಗಳಿವೆ, ಈ ಎಲ್ಲದರ ಬಗ್ಗೆ ದರ್ಶನ್ ಮಾಹಿತಿ ಪಡೆದಿದ್ದಾರೆ. ಜೊತೆಗೆ ತನ್ನ ಜಾಮೀನು ವಿಚಾರ ಎಲ್ಲಿಗೆ ಬಂತು ಅನ್ನೊದರ ಬಗ್ಗೆಯು ತಿಳಿದುಕೊಂಡಿದ್ದಾರೆ.
ಇನ್ನು ಜಾಮೀನು ಸಿಗುವ ಭರವಸೆ ಬಗ್ಗೆ ಪತ್ನಿ ಮಾತನಾಡುತ್ತಿದ್ದಂತೆ ತನ್ನ ಸೆಲ್ಗೆ ಬಂದು ರಿಲ್ಯಾಕ್ಸ್ ಆಗಿದ್ದು, ಜೈಲು ಸಿಬ್ಬಂದಿಯೊಂದಿಗೆ ನಗು ಮುಖದಲ್ಲಿ ಮಾತನಾಡಿದ್ದಾರೆ. ಇನ್ನು ನಿತ್ಯವು ಅದು ಬೇಕು, ಇದು ಬೇಕು ಎನ್ನುತ್ತುದ್ದ ದರ್ಶನ್ ಇವತ್ತು ಏನು ಕೇಳದೆ ಸುಮ್ಮನೆ ಸೆಲ್ನಲ್ಲಿದ್ದಾರೆ. ದಿಂಬು, ಬೆಡ್ಗಾಗಿ ದಿನವು ಕಿರಿಕಿರಿ ಮಾಡುತ್ತಿದ್ದ ದರ್ಶನ್ ಇವತ್ತು ಸುಮ್ಮನೆ ಮಲಗಿದ್ದಾರೆ. ಜಾಮೀನು ಸಿಕ್ಕೆ ಸಿಗುತ್ತೆ ಅನ್ನೊ ಭರವಸೆಯಲ್ಲಿ ದರ್ಶನ್ ಇದ್ದಂತಿದೆ.ಜಾಮೀನು ಸಿಗುವ ನಿರೀಕ್ಷೆಯಲ್ಲಿ ನಿರಾಳರಾದ ದರ್ಶನ್: ದಾಸ ಹೊರಗೆ ಬರೋದು ಯಾವಾಗ?