ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಕಳೆದ ಮೂರು ತಿಂಗಳಿನಿಂದ ಬೆಂಗಳೂರು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ದರ್ಶನ್ ರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿದೆ. ಇಷ್ಟು ದಿನಗಳ ಕಾಲ ಬೆಂಗಳೂರು ಜೈಲಿನಲ್ಲಿ ಅರಾಮಾಗಿದ್ದ ದರ್ಶನ್ ಸಿಗರೇಟ್ ಸೇದುತ್ತಿದ್ದ ಫೋಟೋ ವೈರಲ್ ಆಗುತ್ತಿದ್ದಂತೆ ಅವರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಲಡಲಾಗದೆ. ಬಳ್ಳಾರಿ ಜೈಲಿನಲ್ಲೂ ದರ್ಶನ್ ಗೆ ಸಾಕಷ್ಟು ಸವಲತ್ತು ಸಿಗಲಿದೆ ಎಂಬ ಆರೋಪ ಕೇಳಿ ಬಂದಿದೆ. ಆದರೆ, ಕಾರಾಗೃಹ ನಿಯಮಾನುಸಾರ ಅಗತ್ಯ ಕ್ರಮ ಕೈಗೊಳ್ಳಲು ಉತ್ತರ ಡಿಐಜಿ ವಿಶೇಷ ಆದೇಶ ನೀಡಿದ್ದಾರೆ ಎನ್ನಲಾಗುತ್ತಿದೆ.
ಆ.29ರ ಮುಂಜಾನೆಯೇ ಪರಪ್ಪನ ಅಗ್ರಹಾರ ಜೈಲಿನಿಂದ ದರ್ಶನ್ ರನ್ನು ಕರೆದುಕೊಂಡು ಹೊರಟ ಪೊಲೀಸ್ ಸಿಬ್ಬಂದಿ ಬೆಳಗ್ಗೆ 10 ಗಂಟೆಗೆ ಬಳ್ಳಾರಿ ಸೆಂಟ್ರಲ್ ಜೈಲಿಗೆ ತೆರಳಿದ್ದಾರೆ. ಹೈ ಸೆಕ್ಯೂರಿಟಿ ಸೆಲ್ ಕಂಡು ನಟ ದರ್ಶನ್ ಶಾಕ್ ಆಗಿದ್ದಾರೆ ಎನ್ನಲಾಗಿದೆ. ಮೊದಲ ಗೇಟ್ಗೆ ಎಂಟ್ರಿಯಾಗುತ್ತಿದ್ದಂತೆ ಅವರು ತಲೆ ಚಚ್ಚಿಕೊಂಡಿದ್ದಾರೆ. ಸದ್ಯ ಬಳ್ಳಾರಿ ಜೈಲಿನ ಹೈಸೆಕ್ಯೂರಿಟಿಯ 15ನೇ ಸೆಲ್ನಲ್ಲಿ ದರ್ಶನ್ ಇದ್ದಾರೆ. ಇದರ ಜೊತೆಗೆ ಕಟ್ಟಿನಿಟ್ಟಿನ ಕ್ರಮಕ್ಕೂ ಆದೇಶಿಸಲಾಗಿದೆ.
ದರ್ಶನ್ ಇರುವ ಸೆಲ್ ಸುತ್ತ ಮುತ್ತ ಸೂಕ್ತ ನಿಗಾ ವಹಿಸಲು 24 ಗಂಟೆಯೂ ಸಿಸಿಟಿವಿ ಕಣ್ಗಾವಲು ಹಾಕಲಾಗಿದೆ. ದರ್ಶನ್ ಪತ್ನಿ, ರಕ್ತ ಸಂಬಂಧಿಗಳು ಮತ್ತು ಪ್ರಕರಣದ ವಕಾಲತ್ತು ವಹಿಸಿದ ವಕೀಲರಿಗೆ ಮಾತ್ರ ಕಾರಾಗೃಹದ ನಿಯಮಾನುಸಾರ ಸಂದರ್ಶನ ನೀಡಲು ಅವಕಾಶ ಇದೆ.
ದರ್ಶನ್ ಬೇಟಿಗೆ ಚಿತ್ರರಂಗದ ಕಲಾವಿದರು, ಅಭಿಮಾನಿ ಬಳಗದವರು ಮತ್ತು ಪ್ರಭಾವಿ/ರಾಜಕೀಯ ವ್ಯಕ್ತಿಗಳು ಆಗಮಿಸಬಾರದು. ದರ್ಶನ್ ಅವರನ್ನು ಇತರ ಬಂಧಿಯಂತೆ ಪರಿಗಣಿಸಿ ಸಾಮಾನ್ಯ ಬಂಧಿಗೆ ಕಲ್ಪಿಸತಕ್ಕಂತಹ ಸೌಲಭ್ಯಗಳನ್ನು ಮಾತ್ರ ಕೊಡಬೇಕು. ಯಾವುದೇ ವಿಶೇಷ ಆತಿಥ್ಯ ನೀಡುವಂತಿಲ್ಲ.
ಸಿಸಿಟಿವಿ ದೃಶ್ಯಾವಳಿಗಳನ್ನು ಪ್ರತಿನಿತ್ಯ ಮುಂಜಾಗ್ರತಾ ಕ್ರಮವಾಗಿ ಶೇಖರಣೆ ಮಾಡಿ ಪ್ರತ್ಯೇಕವಾಗಿ ಇಟ್ಟುಕೊಳ್ಳಲು ನಿರ್ಧರಿಸಲಾಗಿದೆ. ಕರ್ತವ್ಯಕ್ಕೆ ಮುಖ್ಯ ವೀಕ್ಷಕ ಮತ್ತು ಅದಕ್ಕಿಂತ ಮೇಲ್ಪಟ್ಟ ಹಿರಿಯ ಅನುಭವವುಳ್ಳ ಸಿಬ್ಬಂದಿ ವರ್ಗದವರನ್ನು ನಿಯೋಜಿಸಲಾಗುತ್ತದೆ.
ಜೈಲರ್ ಮತ್ತು ಹಿರಿಯ ಅಧಿಕಾರಿ ವರ್ಗದವರು ಪ್ರತಿನಿತ್ಯ ಭೇಟಿ ನೀಡಿ ಮೇಲ್ವಿಚಾರಣೆ ಮಾಡಬೇಕು. ನಿಷೇಧಿತ ವಸ್ತುಗಳು ಇಲ್ಲದಂತೆ ನೋಡಿಕೊಳ್ಳುವುದು. ಪಹರೆ ಕರ್ತವ್ಯ ನಿರ್ವಹಿಸುವ ಸಿಬ್ಬಂದಿ ವರ್ಗದವರು ಕಡ್ಡಾಯವಾಗಿ ಬಾಡಿವೋರ್ನ ಕ್ಯಾಮರಾಗಳನ್ನು ಧರಿಸಬೇಕು. ಪ್ರತಿ ನಿತ್ಯದ ಕಾರ್ಯ ಚಟುವಟಿಕೆಗಳನ್ನು ಕ್ಯಾಮರಾದಲ್ಲಿ ಸೆರೆಹಿಡಿದಿಟ್ಟುಕೊಂಡು ಆ ದೃಶ್ಯಾವಳಿಗಳನ್ನು ಪ್ರತಿನಿತ್ಯ ಕಾರಾಗೃಹದ ಹಿರಿಯ ಅಧಿಕಾರಿಗಳು ಪರಿಶೀಲಿಸಿ ಸಂಗ್ರಹಿಸಿಡುವುದು.
ಉಪಹಾರ ಗೃಹ, ಮನರಂಜನೆ ಸೌಲಭ್ಯಗಳನ್ನು ಕಾರಾಗೃಹದ ನಿಯಮಾವಳಿಗಳಂತೆ ಮಾತ್ರ ಒದಗಿಸುವುದು. ಯಾವುದೇ ನಿಯಮಗಳ ಉಲ್ಲಂಘನೆಗೆ ಆಸ್ಪದ ನೀಡುವಂತಿಲ್ಲ. ದರ್ಶನ್ ಹಿರಿಯ ಅಧಿಕಾರಿಯವರ ಅನುಮತಿ ರಹಿತವಾಗಿ ತಮ್ಮ ವಿಭಾಗದಿಂದ ನಿರ್ಗಮಿಸದಂತೆ ಮತ್ತು ಬೇರೆ ಬಂಧಿಗಳ ಜೊತೆಗೆ ಬೆರೆಯದಂತೆ ನಿಗಾವಹಿಸ ಬೇಕು. ಯಾವುದೇ ನಿಷೇಧಿತ/ ಕಾನೂನುಬಾಹಿರ ವಸ್ತುಗಳು ಜೈಲಿನ ಒಳಗೆ ಎಂಟ್ರಿಕೊಡದಂತೆ ನೋಡಬೇಕೊಳ್ಳಬೇಕು. ಬಂಧಿಯ ಸಂದರ್ಶನಕ್ಕೆ ಆಗಮಿಸುವ ಅರ್ಹ ವ್ಯಕ್ತಿಗಳನ್ನು ಸಂಪೂರ್ಣವಾಗಿ ತಪಾಸಣೆಯನ್ನು ಮಾಡತಕ್ಕದ್ದು. ಯಾವುದೇ ತರಹದ ನಿಷೇಧಿತ/ ಕಾನೂನುಬಾಹಿರ ವಸ್ತುಗಳು ನುಸುಳದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಆದೇಶ ನೀಡಲಾಗಿದೆ. ಒಟ್ಟಾರೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಆರಾಮಾಗಿದ್ದ ದರ್ಶನ್ ಬಳ್ಳಾರಿ ಜೈಲಿನಲ್ಲಿ ಮೂಕ ರೋದನೆ ಅನುಭವಿಸುವಂತಾಗಿದೆ.