ನನ್ನ ಮಗ ವಿಲವಿಲ ಒದ್ದಾಡಿ ಸತ್ತಂತೆ ದರ್ಶನ್ ಸಾಯಬೇಕು. ಪವಿತ್ರಾ ಗೌಡಳನ್ನು ಯಾವುದೇ ಕಾರಣಕ್ಕೂ ಬಿಡಬಾರದು ಎಂದು ಕೊಲೆಯಾದ ರೇಣುಕಾಸ್ವಾಮಿ ತಾಯಿ ರತ್ನಮ್ಮ ಮಾಧ್ಯಮಗಳ ಮುಂದೆ ಕಣ್ಣೀರು ಹಾಕಿದ್ದಾರೆ.
ದರ್ಶನ್ ಎಂಡ್ ಗ್ಯಾಂಗ್ ನಿಂದ ಕೊಲೆಯಾದ ರೇಣುಕಾಸ್ವಾಮಿ ಅಂತ್ಯಕ್ರಿಯೆ ಬಳಿಕ ರುದ್ರಭೂಮಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 15 ದಿನದೊಳಗೆ ದರ್ಶನ್ ಸಾಯಲಿ. ನಮ್ ವಂಶ ನಿರ್ವಂಶ ಮಾಡಿದ ದರ್ಶನ್ಗೆ ತಕ್ಕ ಶಾಸ್ತಿ ಆಗಲಿ. ನನ್ನ ಮಗನನ್ನು ಕೊಂದಂತೆ ಅವನನ್ನು ಸಾಯಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗಂಡ ಬರುತ್ತಾನೆ ಎಂದು ನನ್ನ ಸೊಸೆ ಕಾದು ಕುಳಿತಿದ್ದಳು. ಪಾಪಿಗಳಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ಪವಿತ್ರಾಗೌಡ ವಿರುದ್ಧ ರೇಣುಕಾಸ್ವಾಮಿ ತಾಯಿ ಹರಿಹಾಯ್ದಿದ್ದಾರೆ. ದರ್ಶನ್ ಎಂಡ್ ಗ್ಯಾಂಗ್ ನಿಂದ ಹತ್ಯೆಯಾದ ರೇಣುಕಾಸ್ವಾಮಿ ಮೃತದೇಹವನ್ನು ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ನೀಡಲಾಯಿತು. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ರೇಣುಕಾಸ್ವಾಮಿ ಮರಣೋತ್ತರ ಪರೀಕ್ಷೆ ನಡೆಸಿದ್ದು ರೇಣುಕಾಸ್ವಾಮಿ ಪೋಷಕರನ್ನು ಆಸ್ಪತ್ರೆಯ ಶವಗಾರಕ್ಕೆ ಕರೆತಂದಿದ್ದರು. ಈ ವೇಳೆ ಮಗನ ಮುಖ ಗುರುತು ಹಿಡಿಯುತ್ತಿದ್ದಂತೆ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ನನ್ನ ಮಗನ ಸಾವಿಗೆ ನ್ಯಾಯ ಕೊಡಿಸಿ, ದರ್ಶನ್ ಆಗಿರಲಿ ಯಾರೇ ಆಗಿರಲಿ. ನನ್ನ ಮಗ ಒದ್ದಾಡಿ ಸತ್ತಂತೆ ಆತನೂ ಸಾಯಬೇಕು ಎಂದು ತಂದೆ, ತಾಯಿ ಹಾಗೂ ಸಹೋದರಿ ಕಣ್ಣೀರಿಟ್ಟರು.