ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಾಟೇರ ಸಿನಿಮಾದ ಖುಷಿಯಲ್ಲಿದ್ದಾರೆ. ಇತ್ತೀಚೆಗಷ್ಟೇ ಚಿತ್ರರಂಗಕ್ಕೆ ಎಂಟ್ರಿಕೊಟ್ಟು 25 ವರ್ಷ ಪೂರೈಸಿರೋ ದರ್ಶನ್ ಇದೀಗ ಕಾಟೇರ ಸಕ್ಸಸ್ ಸಂಭ್ರಮದಲ್ಲಿದ್ದಾರೆ. ‘ಕಾಟೇರ’ ಚಿತ್ರ 50 ದಿನಗಳನ್ನು ಪೂರೈಸಿದ ಸಕ್ಸಸ್ ಸಂಭ್ರಮದಲ್ಲಿ ದರ್ಶನ್ ನಿರ್ಮಾಪಕ ಉಮಾಪತಿಗೆ ಟಾಂಗ್ ನೀಡಿದ್ದಾರೆ.
ತರುಣ್ ಸುಧೀರ್ ನಿರ್ದೇಶನದ ‘ಕಾಟೇರ’ ಸಿನಿಮಾ 50 ದಿನಗಳನ್ನು ಪೂರೈಸಿ ಮುನ್ನುಗ್ಗುತ್ತಿದೆ. ಈ ವೇಳೆ, ಹಿರಿಯ ಶ್ರುತಿ, ನಾಯಕಿ ಆರಾಧನಾ ಸೇರಿದಂತೆ ತಂಡದ ಹಲವರಿಗೆ ಪ್ರಶಸ್ತಿ ನೀಡಿ ಚಿತ್ರತಂಡ ಗೌರವಿಸಿದೆ. ಈ ವೇಳೆ, ಕಾಟೇರ ಟೈಟಲ್ ಕೊಟ್ಟಿದ್ದು ನಾನೇ ಎಂದ ನಿರ್ಮಾಪಕ ಉಮಾಪತಿಗೆ ದರ್ಶನ್ ಟಾಂಗ್ ಕೊಟ್ಟಿದ್ದಾರೆ.
ಅಯ್ಯೋ ತಗಡೆ ಅಂದು ‘ರಾಬರ್ಟ್’ ಕತೆ ಕೊಟ್ಟಿದ್ದೆ ನಾವು. ಆದರೂ ಬುದ್ಧಿ ಕಲಿತ್ತಿಲ್ಲ ಅಂದರೆ ಏನು ಹೇಳೋಣ. ಕಾಟೇರ ಎಂತಹ ಒಳ್ಳೆಯ ಕಥೆಯ ಸಿನಿಮಾ ಯಾಕೆ ಬಿಟ್ಟೆ ಎಂದು ದರ್ಶನ್ ಪ್ರಶ್ನಿಸಿದ್ದಾರೆ. ಬಳಿಕ ‘ಕಾಟೇರ’ ಟೈಟಲ್ ಹೇಳಿದ್ದು ಕೂಡ ನಾನು ಎಂದು ದರ್ಶನ್ ಮಾತನಾಡಿದ್ದಾರೆ. ಅಂದು ಚಿತ್ರದ ಟೈಟಲ್ ರಿಜಿಸ್ಟರ್ ಮಾಡಿಸುವಂತೆ ತರುಣ್ ಸುಧೀರ್ಗೆ ಹೇಳಿದ್ದೆ ಎಂದರು,
ಯಾಕಪ್ಪ, ಯಾವಾಗಲೂ ಬಂದು ಬಂದು ನಮ್ಮ ಕೈಯಲ್ಲೇ ಗುಮ್ಮಿಸಿಕೊಳ್ತಿಯಾ? ಗುಮ್ಮಿಸಿಕೊಳ್ಳಬೇಡ. ಎಲ್ಲೋ ಇದ್ಯಾ ಚೆನ್ನಾಗಿ ಇರು. ತಪ್ಪು ಇದು ಅಂತ ದರ್ಶನ್ ಹೇಳಿದರು.