ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ವಿಜಯಲಕ್ಷ್ಮಿ ಮೇ19ರಂದು ದುಬೈನಲ್ಲಿ ಅದ್ದೂರಿಯಾಗಿ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ. ಈ ಮಧ್ಯೆ ನಟಿ ಪವಿತ್ರಾ ಗೌಡ ಅವರು ನಿಗೂಡಾರ್ಥದಲ್ಲಿ ಪೋಸ್ಟ್ ಒಂದನ್ನು ಮಾಡಿದ್ದು ಚರ್ಚೆಗೆ ಕಾರಣವಾಗಿದೆ.
ದರ್ಶನ್ ಪತ್ನಿ ವಿಜಯಲಕ್ಷ್ಮಿ ಹಾಗೂ ಪವಿತ್ರಾ ಗೌಡ ನಡುವೆ ಇರುವ ಮನಸ್ಥಾಪ ಗುಟ್ಟಾಗಿ ಉಳಿದಿಲ್ಲ. ಕೆಲವು ದಿನಗಳಿಂದ ಮಗಳ ಜೊತೆ ಕಾಶ್ಮೀರದಲ್ಲಿ ಇರುವ ಪವಿತ್ರಾ ಗೌಡ ಇದ್ದಕ್ಕಿದ್ದಂತೆ ದರ್ಶನ್ ಹಳೆ ವಿಡಿಯೋ ಒಂದು ಶೇರ್ ಮಾಡಿಕೊಂಡಿದ್ದಾರೆ. ‘ಕರ್ಮ ಅನ್ನೋದು ಬ್ಯಾಗೇಜ್ ರೀತಿ. ನಾವು ಏನು ಮಾಡುತ್ತೀವಿ ಅದು ನಮಗೆ ರಿಟರ್ನ್ ಆಗುತ್ತದೆ ಅಂತ. ನಾವು ಸಣ್ಣವರು ಇದ್ದಾಗ ಅಜ್ಜಿ ತಾತ ಹೇಳುತ್ತಿದ್ದರು ಈಗ ನೀನು ಮಾಡುತ್ತಿರುವೆ ಮುಂದಿನ ಜನ್ಮದಲ್ಲಿ ಇರುತ್ತೆ ನಿನಗೆ ಅಂತ ಆದರೆ ಈಗ ಹಾಗಲ್ಲ…ಅಲ್ಲೇ ಡ್ರಾ ಅಲ್ಲೇ ಬಹುದುಮಾನ’ ಎಂದು ದರ್ಶನ್ ವಿಡಿಯೋದಲ್ಲಿ ಹೇಳಿದ್ದಾರೆ.
ಕೆಲವು ತಿಂಗಳ ಹಿಂದೆ ವಿಜಯಲಕ್ಷ್ಮಿ ಮತ್ತು ಪವಿತ್ರಾ ಗೌಡ ಸೋಷಿಯಲ್ ಮೀಡಿಯಾ ವಾರ್ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿತ್ತು. ಆದರೆ ದರ್ಶನ್ ಅಭಿಮಾನಿಗಳು ಮಾತ್ರ ನಾವು ಅತ್ತಿಗೆಗೆ ಸಪೋರ್ಟ್ ಮಾಡುವುದು ಎಂದು ಬಿಟ್ಟರು. ಈ ವಿಚಾರವಾಗಿ ಶ್ರೀರಂಗಪಟ್ಟಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಇಂದು ಇವಳಿರ್ತಾಳೆ ನಾಳೆ ಅವಳಿರ್ತಾಳೆ ಎನ್ನುವ ಹೇಳಿಕೆ ಕೊಟ್ಟು ಸುಮ್ಮನಾಗಿಬಿಟ್ಟರು. ವಿಚಾರ ಅಲ್ಲಿಗೆ ನಿಂತಿತ್ತು ಕೂಡ ಆದರೆ ಈಗ ಇವರಿಬ್ಬರ ಅನಿವರ್ಸರಿ ದಿನ ಪೋಸ್ಟ್ ಮಾಡಿದ್ದು ತಪ್ಪು ಎಂದು ಪವಿತ್ರಾ ವಿರುದ್ಧ ಅಭಿಮಾನಿಗಳು ಗರಂ ಆಗಿದ್ದಾರೆ.