ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಜೈಲು ಸೇರಿರುವ ನಟ ದರ್ಶನ್ಗೆ ರಾಜಾತಿಥ್ಯ ನೀಡುತ್ತಿರುವ ಫೋಟೋವೊಂದು ವೈರಲ್ ಆಗಿದೆ. ದರ್ಶನ್ ಒಂದು ಕೈಯಲ್ಲಿ ಕಾಫಿ ಮಗ್, ಮತ್ತೊಂದು ಕೈಯಲ್ಲಿ ಸಿಗರೇಟ್ ಹಿಡಿದು ಕಾಲು ಮೇಲೆ ಕಾಲು ಹಾಕಿ ರೌಡಿಗಳ ಜೊತೆ ಹರಟೆ ಹೊಡೆಯುತ್ತಿದ್ದಾರೆ. ಇದರ ಜೊತೆಗೆ ಹೊರಗಿರುವ ರೌಡಿಗಳ ಜೊತೆಯೂ ವಿಡಿಯೋ ಕಾಲ್ ನಲ್ಲಿ ಮಾತನಾಡಿದ್ದಾರೆ. ಇದರಿಂದ ದರ್ಶನ್ ಗೆ ಮತ್ತಷ್ಟು ಸಂಕಷ್ಟು ಎದುರಾಗಿದೆ. ದರ್ಶನ್ ಜೊತೆಗೆ ನಟಿ ರಚಿತಾ ರಾಮ್ ಗೂ ಸಮಸ್ಯೆ ಎಂದೊಡ್ಡಿದೆ.
ಈ ಫೋಟೋ ತೆಗೆದ ದಿನವೇ ನಟಿ ರಚಿತಾ ರಾಮ್ ಕೂಡ ಜೈಲಿಗೆ ಭೇಟಿ ನೀಡಿದ್ದು, ಈ ಪಾರ್ಟಿ ನಡೆದಿರುವುದು ಕನ್ಫರ್ಮ್ ಆಗಿದೆ. ರಚಿತಾ ರಾಮ್ ಆಗಸ್ಟ್ 22ನೇ ತಾರೀಕು ಎಂದರೆ 4 ದಿನಗಳ ಹಿಂದೆ ಭೇಟಿ ನೀಡಿದ್ದರು. ಅಂದು ಸಂಜೆಯೇ ನಟ ದರ್ಶನ್ ವಿಲ್ಸನ್ ಗಾರ್ಡನ್ ನಾಗನ ಜೊತೆ ಪಾರ್ಟಿ ಮಾಡಿದ್ದಾರೆ. ಹಾಗಾಗಿ ದರ್ಶನ್ ಬಿಂದಾಸ್ ಲೈಫ್ ಬಗ್ಗೆ ರಚಿತಾ ರಾಮ್ಗೆ ಗೊತ್ತಿತ್ತು. ಅದರಲ್ಲೂ ರಚಿತಾ ರಾಮ್ ದರ್ಶನ್ ಬಾಸ್ ಎಲ್ಲಿದ್ರೂ ಬಾಸ್ ಎಂದಿದ್ದರು. ಈ ಬಗ್ಗೆ ಸ್ವತಃ ಬಂಧಿಖಾನೆ ಅಧಿಕಾರಿ ಮಾಲಿನಿ ಕೃಷ್ಣ ಮೂರ್ತಿ ಹೇಳಿಕೆ ನೀಡಿದ್ದು, ರಚಿತಾ ರಾಮ್ ಅವರಿಗೆ ಸಂಕಷ್ಟ ಎದುರಾಗಿದೆ. ಮುಂದಿನ ದಿನಗಳಲ್ಲಿ ರಚಿತಾ ರಾಮ್ ಅವರನ್ನು ಕರೆದು ವಿಚಾರಣೆ ನಡೆಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಜೈಲಲ್ಲಿ ದರ್ಶನ್ಗೆ ವಿಶೇಷ ಸೌಲಭ್ಯ ನೀಡುತ್ತಿರುವ ಆರೋಪ ಪ್ರಕರಣ ಸಂಬಂಧ 7 ಜನ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಅಮಾನತು ಮಾಡಿದ್ದೇವೆ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ತಿಳಿಸಿದ್ದಾರೆ. ಜೈಲರ್ ಶರಣಬಸವ ಅಮಿನ್ಘಡ್, ಪ್ರಭು ಎಸ್. ಖಂಡೇಲ್ ವಾಲ್, ಅಸಿಸ್ಟೆಂಟ್ ಜೈಲರ್ಸ್ ಶ್ರೀಕಾಂತ್ ತಳವಾರ್, ಎಲ್. ಎಸ್ ತಿಪ್ಪೇಸ್ವಾಮಿ, ಹೆಡ್ ವಾರ್ಡರ್ಸ್ ವೆಂಕಪ್ಪ, ಸಂಪತ್ ಕುಮಾರ್ ತಡಪಟ್ಟಿ, ವಾರ್ಡರ್ ಬಸ್ಸಪ್ಪ ತೇಲಿ ಅವರನ್ನು ಅಮಾನತು ಗೊಳಿಸಲಾಗಿದೆ.