ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಜೈಲು ಸೇರಿರುವ ನಟ ದರ್ಶನ್ ರನ್ನು ನೋಡಲು ಇಂದು ಪತ್ನಿ ವಿಜಯಲಕ್ಷ್ಮಿ ಹಾಗೂ ಸಹೋದರು ದೀನಾಕರ್ ತೂಗುದೀಪ್ ಆಗಮಿಸಿದ್ದರು. ಈ ಮಧ್ಯೆ ದರ್ಶನ್ ಗೆ ಅಮ್ಮನನ್ನು ನೋಡಲು ಮನ ಹಂಬಲಿಸಿದೆ.
ದರ್ಶನ್ ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿ ಜೈಲಿಗೆ ಶಿಫ್ಟ್ ಆಗಿ ಇಂದಿಗೆ 15 ದಿನ. ಪೊಲೀಸರು ಪ್ರಕರಣ ಸಂಬಂಧ ಚಾರ್ಜ್ಶೀಟ್ ಸಲ್ಲಿಕೆ ಮಾಡಿದ್ದಾರೆ. ಇದೇ ವಿಚಾರವಾಗಿ ದರ್ಶನ್ ಜೊತೆ ಮಾತುಕತೆ ನಡೆಸಲು ಅವರ ಕುಟುಂಬ ಬಳ್ಳಾರಿ ಜೈಲಿಗೆ ಆಗಮಿಸಿತ್ತು. ಈ ವೇಳೆ ವಿಜಯಲಕ್ಷ್ಮಿ, ಸಹೋದರ ದಿನಕರ ತೂಗುದೀಪ ಹಾಗೂ ವಕೀಲರ ಜೊತೆ ದರ್ಶನ್ ಮಾತುಕತೆ ನಡೆಸಿದ್ದಾರೆ. ಬರೋಬ್ಬರಿ 24 ನಿಮಿಷಗಳ ಕಾಲ ಮಾತುಕತೆ ನಡೆದಿದೆ ಎನ್ನಲಾಗಿದೆ.
ಸಹೋದರನ ಬಳಿ ಅಮ್ಮನ ಬಗ್ಗೆ ದರ್ಶನ್ ಕೇಳಿದ್ದಾರೆ. ಅಮ್ಮ ಬರಲಿಲ್ವಾ ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನು ನಿನ್ನೆಯೇ ತಾಯಿ ಮೀನಾ ತೂಗುದೀಪ ಜೈಲಿಗೆ ಬಂದು ಮಾತನಾಡಿಸಿಕೊಂಡು ಹೋಗಬೇಕಿತ್ತು. ಕಾರಣಾಂತರಗಳಿಂದ ನಿನ್ನೆಯ ಜೈಲು ಭೇಟಿ ಕ್ಯಾನ್ಸಲ್ ಆಗಿದೆ. ಇವತ್ತು ಪತ್ನಿ ಜೊತೆ ತಾಯಿ ಬರುವ ನಿರೀಕ್ಷೆ ಇತ್ತು. ಆದರೆ ತಾಯಿ ಮೀನಾ ತೂಗುದೀಪ ಬಾರದೆ ಇರೋದ್ರಿಂದ ದರ್ಶನ್ ಮುಖ ಮತ್ತಷ್ಟು ಸಪ್ಪೆಯಾಗಿದೆ ಎನ್ನಲಾಗಿದೆ. ಇನ್ನು ಬಳ್ಳಾರಿಯ ಜೈಲಿನ ವಾತಾವರಣಕ್ಕೆ ದರ್ಶನ್ ಮತ್ತಷ್ಟು ಸೊರಗಿದಂತೆ ಕಾಣುತ್ತಿದ್ದಾರೆ.