ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಮೂರು ತಿಂಗಳ ಕಾಲ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ದರ್ಶನ್ ರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿದೆ. ಆದರೆ ಬಳ್ಳಾರಿ ಜೈಲಿಗೆ ಶಿಫ್ಟ್ ಆದ 15 ದಿನಕ್ಕೆ ದರ್ಶನ್ ಸಂಪೂರ್ಣವಾಗಿ ಸೊರಗಿ ಹೋಗಿದ್ದಾರೆ.
ಹೊರಗಿದ್ದ ವೇಳೆ ನಿತ್ಯ ಪಾರ್ಟಿ, ಪಬ್ಬು, ನಾನ್ ವೆಜ್ ಎಂದು ತಿಂದು ತೇಗುತ್ತಿದ್ದ ದರ್ಶನ್ ಗೆ ಜೈಲು ವಾಸ ನುಂಗಲಾರದ ಬಿಸಿ ತುಪ್ಪವಾಗಿದೆ. ಬೆಂಗಳೂರಿನ ಸೆಂಟ್ರಲ್ ಜೈಲಿನಲ್ಲಿ ರಾಜಾತಿಥ್ಯ ಪಡೆದ ದರ್ಶನ್, ಬಳ್ಳಾರಿ ಜೈಲೂಟಕ್ಕೆ ಸಂಪೂರ್ಣ ಸೊರಗಿ ಹೋಗಿದ್ದಾರೆ. ಜೈಲು ಸೇರಿದ ಹದಿನೈದೇ ದಿನಕ್ಕೆ ದರ್ಶನ್ ಸಂಪೂರ್ಣವಾಗಿ ಸಣ್ಣಗಾಗಿದ್ದಾರೆ. ಕಟ್ಟು ಮಸ್ತಾದ ದೇಹ ಹೊಂದಿದ್ದ ದರ್ಶನ್ ಇದೀಗ ಸಣಕಲು ಕಡ್ಡಿಯಂತೆ ಕಾಣುತ್ತಿದ್ದಾರೆ.
ಅಂದ ಹಾಗೆ ಸಾಕಷ್ಟು ಮಂದಿ ಸಣ್ಣಗಾಗಲು ಹರ ಸಾಹಸ ಪಡುತ್ತಾರೆ. ಅದಕ್ಕಾಗಿ ಸಾಕಷ್ಟು ಔಷದಿಗಳ ಮೊರೆ ಹೋಗುತ್ತಾರೆ. ಆದರೆ ದಿಡೀರ್ ಸಣ್ಣಗಾಗುವುದು ತಪ್ಪು. ಇದರಿಂದ ದೇಹಕ್ಕೆ ಅಪಾಯ ಎಂದು ಸಾಕಷ್ಟು ಭಾರಿ ವೈದ್ಯರು ಹೇಳಿರುತ್ತಾರೆ. ದಿಡೀರ್ ಸಣ್ಣಗಾಗಲು ಹೋಗಿ ಸಾಕಷ್ಟು ಮಂದಿ ಜೀವ ಕಳೆದುಕೊಂಡಿದ್ದು ಇದೆ. ಇದ್ದಕ್ಕಿದ್ದಂತೆ ತೂಕ ಇಳಿಕೆ ಆಗಿದೆ ಎಂದಾದರೆ ಕೆಲವು ಆಹಾರಗಳ ಸೇವನೆ ನಿಲ್ಲಿಸಿದ್ದೇವೆ ಎಂದರ್ಥ. ದೀರ್ಘಕಾಲದವರೆಗೆ ಕೆಲವು ಆಹಾರಗಳನ್ನು ಬಿಡುವುದು ತೂಕ ಇಳಿಕೆಗೆ ಪ್ರಮುಖ ಕಾರಣವಾಗಿರುತ್ತದೆ. ಆದರೆ ಅಂತಹ ಆಹಾರಗಳನ್ನು ಮರಳಿ ಸೇವಿಸಲು ಆರಂಭಿಸಿದರೆ ಕೂಡಲೇ ತೂಕ ಏರಿಕೆ ಆಗುತ್ತದೆ.
ಖಿನ್ನತೆ: ಕೆಲವರಲ್ಲಿ ಅತಿಯಾದ ದುಃಖ, ಹತಾಶೆಯ ಭಾವನೆಗಳು, ಖಿನ್ನತೆಯ ಸಮಸ್ಯೆಯಿಂದಾಗಿ ಉದ್ದೇಶಪೂರ್ವಕವಲ್ಲದ ತೂಕ ನಷ್ಟಕ್ಕೆ ಕಾರಣವಾಗಿರುತ್ತದೆ. ದರ್ಶನ್ ಏಕಾಏಕಿ ಸಣ್ಣಗಾಗಿರೋದು ಅವರ ಅಭಿಮಾನಿಗಳಿಗೆ, ಸಿನಿಮಾ ನಿರ್ಮಾಪಕರಿಗೆ ಸಾಕಷ್ಟು ಆತಂಕ ಮೂಡಿಸಿದೆ.