ಜೈಲಿನಲ್ಲಿ ಪದೇ ಪದೇ ಕಿರಿಕ್ ಮಾಡಿಕೊಳ್ತಿದ್ದ ನಟ ದರ್ಶನ್ ಗೆ ವಕೀಲರು ಪತ್ರ ಬರೆದಿದ್ದು ಸಮಸ್ಯೆ ಎದುರು ಹಾಕಿಕೊಳ್ಳದಂತೆ ಎಚ್ಚರಿಕೆ ನೀಡಿದ್ದರು. ಪದೇ ಪದೇ ಕಿರಿಕ್ ಮಾಡಿಕೊಳ್ತಿದ್ರೆ ಮುಂದೆ ಜಾಮೀನಿಗೆ ಸಮಸ್ಯೆಯಾಗುತ್ತದೆ ಎಂದು ತಿಳಿಸಿದ್ದರು. ಇದೀಗ ವಕೀಲರ ಎಚ್ಚಿಕೆಯ ಬಳಿಕ ನಟ ದರ್ಶನ್ ಎಚ್ಚೆತ್ತುಕೊಂಡಂತೆ ಕಾಣುತ್ತಿದೆ.
ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿರುವ ಕೊಲೆ ಆರೋಪಿ ದರ್ಶನ್ ಪದೇ ಪದೇ ದುರ್ನಡತೆ ತೋರುತ್ತಿದ್ದ ಕಾರಣ ವರ್ತನೆ ಬದಲಾಯಿಸುವ ಕುರಿತು ವಕೀಲರು ಪತ್ರ ಬರೆದಿದ್ದರು. ಇದೀಗ ಆರೋಪಿ ದರ್ಶನ್ ವರ್ತನೆಯಲ್ಲಿ ಸಾಕಷ್ಟು ಬದಲಾವಣೆ ಕಾಣಿಸಿದೆ ಎಂದು ಜೈಲಿನ ಮೂಲಗಳು ತಿಳಿಸಿವೆ.
ವಕೀಲರು ದರ್ಶನ್ಗೆ ಬರೆದ ಪತ್ರದಲ್ಲಿ ಅನಗತ್ಯ ಕಿರಿಕ್ ಮಾಡಿಕೊಳ್ಳಬೇಡಿ. ಮಾಧ್ಯಮಗಳ ಮೇಲೆ ದುರ್ನಡತೆ ತೋರುವ ಕುರಿತು, ಜೈಲಿನಲ್ಲಿ ಕಿರಿ ಕಿರಿ ಮಾಡಬೇಡಿ. ವರ್ತನೆ ಬದಲಿಸಿಕೊಳ್ಳದಿದ್ದರೇ ಜಾಮೀನು ಅರ್ಜಿ ಹಾಕಿದಾಗ ಸಮಸ್ಯೆ ಆಗುತ್ತದೆ ಎಂದು ಉಲ್ಲೇಖಿಸಿದ್ದರು.
ವಕೀಲರು ದರ್ಶನ್ಗೆ ಬರೆದ ಪತ್ರದಲ್ಲಿ ಅನಗತ್ಯ ಕಿರಿಕ್ ಮಾಡಿಕೊಳ್ಳಬೇಡಿ. ಮಾಧ್ಯಮಗಳ ಮೇಲೆ ದುರ್ನಡತೆ ತೋರುವ ಕುರಿತು, ಜೈಲಿನಲ್ಲಿ ಕಿರಿ ಕಿರಿ ಮಾಡಬೇಡಿ. ವರ್ತನೆ ಬದಲಿಸಿಕೊಳ್ಳದಿದ್ದರೇ ಜಾಮೀನು ಅರ್ಜಿ ಹಾಕಿದಾಗ ಸಮಸ್ಯೆ ಆಗುತ್ತದೆ ಎಂದು ಉಲ್ಲೇಖಿಸಿದ್ದರು.
ಇದೇ ಕಾರಣಕ್ಕೆ ನಿನ್ನೆ (ಸೆ.17) ಪತ್ನಿ ವಿಜಯಲಕ್ಷ್ಮಿ ಹಾಗೂ ಆಪ್ತರು ಜೈಲಿಗೆ ಭೇಟಿ ನೀಡಿದ್ದರು. ಅವರ ಭೇಟಿಗೆ ಆರೋಪಿ ದರ್ಶನ್ ನಗು ನಗುತ್ತಾ ಸೆಲ್ನಿಂದ ಹೊರ ಬಂದಿದ್ದರು. ಪತ್ನಿ ಹಾಗೂ ಆಪ್ತರ ಭೇಟಿ ಬಳಿಕವೂ ನಗುತ್ತಲೇ ಸೆಲ್ಗೆ ಹೋಗಿದ್ದರು. ವಕೀಲರ ಪತ್ರ ತಲುಪಿದ ಬಳಿಕ ಕೊನೆಗೂ ಎಚ್ಚೆತ್ತುಕೊಂಡ ದರ್ಶನ್ ಜೈಲಿನಲ್ಲಿ ತಮ್ಮ ವರ್ತನೆ ಬದಲಾಯಿಸಿಕೊಂಡಿದ್ದಾರೆ.
ಇನ್ನೊಂದು ಕಡೆ ದರ್ಶನ್ಗೆ ಜಾಮೀನು ಚಿಂತೆಯಾಗಿದ್ದು, ಪತ್ನಿ ವಿಜಯಲಕ್ಷ್ಮಿಯವರು ಭೇಟಿಗೆ ಬಂದಾಗಲೂ ಜಾಮೀನು ವಿಚಾರವಾಗಿ ಚರ್ಚೆ ಮಾಡಿದ್ದು, ಜಾಮೀನಿಗೆ ಅರ್ಜಿ ಸಲ್ಲಿಸುವುದು ಯಾವಾಗ? ಎಂದು ಪ್ರಶ್ನಿಸಿದ್ದಾರೆ.
ದರ್ಶನ್ ವಿರುದ್ಧ ಸಿಕ್ಕಿರುವ ಪ್ರಬಲ ಸಾಕ್ಷಿಗಳ ಬಗ್ಗೆ ದರ್ಶನ್ ಗಮನಕ್ಕೆ ತಂದಿದ್ದ ವಿಜಯಲಕ್ಷ್ಮಿ, ಏನೇ ಸಾಕ್ಷಿ ಸಿಕ್ಕಿದ್ದರೂ ನಮ್ಮ ವಕೀಲರು ಸ್ಟ್ರಾಂಗ್ ಆಗಿ ವಾದ ಮಾಡುತ್ತಿದ್ದಾರೆ. ಆದಷ್ಟು ಬೇಗ ಜಾಮೀನಿಗೆ ಅರ್ಜಿ ಹಾಕೋಣ. ಅದರ ಬಗ್ಗೆಯೇ ನಾನು ವಕೀಲರ ಜೊತೆ ನಿತ್ಯ ಸಂಪರ್ಕದಲ್ಲಿದ್ದೇನೆ. ಯಾವುದಕ್ಕೂ ಆತಂಕ ಪಡಬೇಡಿ, ಆದಷ್ಟು ಬೇಗ ಜಾಮೀನಿಗೆ ಅರ್ಜಿ ಹಾಕಿ ಹೊರಗೆ ಕರೆತರುತ್ತೇವೆ ಎಂದು ಭರವಸೆ ನೀಡಿದ್ದಾರೆ.