ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ದರ್ಶನ್ ರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿದೆ. ಆದರೆ ಬಳ್ಳಾರಿ ಜೈಲಿನಲ್ಲೂ ದರ್ಶನ್ ಕಿರಿಕ್ ಮಾಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ದರ್ಶನ್ ಗೆ ಪತ್ರ ಬರೆದ ದರ್ಶನ್ ಪರ ವಕೀಲರು ಕಿವಿ ಮಾತು ಹೇಳಿದ್ದಾರೆ.
ಬಳ್ಳಾರಿ ಜೈಲಿನಲ್ಲಿ ದರ್ಶನ್ ಈ ಮೊದಲು ಟಿವಿಗಾಗಿ ಕಿರಿಕ್ ಮಾಡಿಕೊಂಡಿದ್ದರು. ಕೊಟ್ಟ ಟಿವಿ ಸರಿ ಇಲ್ಲ, ನನಗೆ ಸರಿಯಾದ ಟಿವಿ ಬೇಕು ಎಂದಿದ್ದರು. ಆ ಬಳಿಕ ಮಾಧ್ಯಮಗಳಿಗೆ ಅಸಭ್ಯ ಸನ್ನೆ ಮಾಡಿ ವಿವಾದ ಸೃಷ್ಟಿಸಿದ್ದರು. ಈ ಎಲ್ಲವು ದರ್ಶನ್ ಜಾಮೀನು ಅರ್ಜಿ ಸಲ್ಲಿಕೆ ಸಮಯದಲ್ಲಿ ಸಮಸ್ಯೆಗಳು ತಂದೊಡ್ಡುತವೆ ಎಂಬ ಕಾರಣಕ್ಕೆ ವಕೀಲರು ಪತ್ರ ಬರೆದಿದ್ದಾರೆ.
ರೇಣುಕಾ ಸ್ವಾಮಿ ಕೊಲೆ ಕೇಸ್ನಲ್ಲಿ ದರ್ಶನ್ ಸೇರಿದಂತೆ 17 ಆರೋಪಿಗಳ ವಿರುದ್ಧ ಚಾರ್ಜ್ಶೀಟ್ ಸಲ್ಲಿಕೆ ಆಗಿದೆ. ಈ ಚಾರ್ಜ್ಶೀಟ್ನಲ್ಲಿ ಹಲವು ವಿಚಾರಗಳು ಉಲ್ಲೇಖ ಆಗಿವೆ. ಈವರೆಗೆ ದರ್ಶನ್ ಪರ ವಕೀಲರು ಜಾಮೀನು ಸಲ್ಲಿಕೆ ಮಾಡಿಲ್ಲ. ಮುಂದಿನ ದಿನಗಳಲ್ಲಿ ಜಾಮೀನು ಅರ್ಜಿ ಸಲ್ಲಿಕೆ ಮಾಡಿದಾಗ ಈ ಎಲ್ಲಾ ಘಟನೆಗಳು ಹೈಲೈಟ್ ಆಗುವ ಸಾಧ್ಯತೆ ಇರುತ್ತದೆ. ಅದುವೇ ದರ್ಶನ್ ಜಾಮೀನಿಗೆ ತೊಂದರೆ ಮಾಡಬಹುದು. ಈ ಕಾರಣಕ್ಕೆ ಅವರ ಪರ ವಕೀಲರು ದರ್ಶನ್ಗೆ ಕಿವಿಮಾತು ಹೇಳಿದ್ದಾರೆ.
‘ಜೈಲಿನಲ್ಲಿ ವಿವಾದ ಮಾಡಿಕೊಳ್ಳಬೇಡಿ. ಪದೇಪದೆ ಕಿರಿಕ್ ಮಾಡಿಕೊಂಡರೆ ಜಾಮೀನಿಗೆ ಸಮಸ್ಯೆ ಆಗುತ್ತದೆ. ಕಾನೂನು ಹೋರಾಟಕ್ಕೆ ತೊಡಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದ್ದಾರೆ.