ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸ್ಯಾಂಡಲ್ ವುಡ್ ನಟ ದರ್ಶನ್, ನಟಿ ಪವಿತ್ರಾ ಗೌಡ ಸೇರಿ ಒಟ್ಟು 13ಮಂದಿಯನ್ನು ಬಂಧಿಸಲಾಗಿದೆ. ಘಟನೆಯ ಕುರಿತು ಸಾಕಷ್ಟು ಮಂದಿ ಪ್ರತಿಕ್ರಿಯೆ ನೀಡಿದ್ದಾರೆ.ಇದೀಗ ಮಗನನ್ನು ಕಳೆದುಕೊಂಡ ತಾಯಿ ರತ್ನಪ್ರಭ ರೋಧನೆ ಮುಗಿಲು ಮುಟ್ಟಿದ್ದು ದರ್ಶನ್ನನ್ನು ಸಿನಿಮಾ ಇಂಡಸ್ಟ್ರಿಯಿಂದಲೇ ಬ್ಯಾನ್ ಮಾಡಬೇಕು, ದರ್ಶನ್ ನಟನೆಯ ಯಾವುದೇ ಸಿನಿಮಾಗಳನ್ನ ರಿಲೀಸ್ ಮಾಡಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಡಿಬಾಸ್ ಎಂದು ಖ್ಯಾತಿ ಪಡೆದ ದರ್ಶನ್ ಖಳನಟ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ದೊಡ್ಡ ಮನುಷ್ಯನ ಗುಣ ದರ್ಶನಗಿಲ್ಲ, ಅವನು ಕಳ್ಳ. ಸಿನಿಮಾ ಇಂಡಸ್ಟ್ರಿಯಿಂದಲೇ ದರ್ಶನ್ ಬ್ಯಾನ್ ಮಾಡಬೇಕು. ದರ್ಶನ್ ಯಾವುದೇ ಸಿನಿಮಾಗಳನ್ನ ರಿಲೀಸ್ ಮಾಡಬಾರದು. ಡಿ ಬಾಸ್ ಎನ್ನುವ ಅಭಿಮಾನಿಗಳ ಇವನ ಹೇಯ ಕೃತ್ಯವನ್ನು ನೋಡಿ ಕಲಿಯಲಿ. ನನ್ನ ಮಗನಿಗೆ ಆದ ಸ್ಥಿತಿಯೇ ದರ್ಶನ್ ಮಗನಿಗೆ ಆಗಬೇಕು. ಅವರ ಕುಟುಂಬವೇ ಸರ್ವನಾಶ ಆಗಬೇಕು ಎಂದು ದರ್ಶನ್ ವಿರುದ್ದ ರೇಣುಕಾಸ್ವಾಮಿ ತಾಯಿ ಹಿಡಿ ಶಾಪ ಹಾಕಿದರು.
ರೇಣುಕಾಸ್ವಾಮಿ ದರ್ಶನ್ ಅಭಿಮಾನಿ ಎಂದು ತೋರಿಸಿಕೊಂಡಿಲ್ಲ. ಮೆಸೇಜ್ ಮಾಡಿದ ಕಾರಣಕ್ಕೆ ಕಿಡ್ನಾಪ್ ಮಾಡಿ ಭೀಕರ ಕೊಲೆ ಮಾಡಿದ್ದಾರೆ. ಮುಖ, ಮರ್ಮಾಂಗಕ್ಕೆ ಭೀಕರ ಹಲ್ಲೆ ಮಾಡಿ ಹತ್ಯೆ ಮಾಡಿದ್ದಾರೆ. ಈ ಸಂಬಂಧ ಸರ್ಕಾರ ಸೂಕ್ತ ತನಿಖೆ ಮಾಡಿ ಕಠಿಣ ಕ್ರಮ ಕೈಗೊಳ್ಳಬೇಕು. ಸಿಬಿಐ ತನಿಖೆ ಮೂಲಕ ನಟ ದರ್ಶನ್ & ಗ್ಯಾಂಗ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ರತ್ನಪ್ರಭು ಹೇಳಿದ್ದಾರೆ.