ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಇಷ್ಟು ದಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ನಟ ದರ್ಶನ್ ತಮ್ಮ ಪ್ರಭಾವ ಬಳಸಿಕೊಂಡು ಇಲ್ಲಿ ಬೇಕಾದೆಲ್ಲ ಪಡೆದುಕೊಂಡಿದ್ದರು. ಆದ್ರೆ ದರ್ಶನ್ ಫೋಟೋ ವೈರಲ್ ಆದ ಬೆನ್ನಲ್ಲೇ ಅವರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿದೆ. ಇದರಿಂದ ದರ್ಶನ್ ಕಂಗಲಾಗಿದ್ದು ಒಂಟಿ ತನದಿಂದ ಕುಗ್ಗಿ ಹೋಗಿದ್ದಾರೆ. ಇದೀಗ ಜೈಲು ಅಧಿಕಾರಿಗಳ ಮುಂದು ದರ್ಶನ್ ಹೊಸ ಬೇಡಿಕೆಯೊಂದನ್ನು ಇಟ್ಟಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣ ಅಂತಿಮ ಹಂತ ತಲುಪಿದ್ದು ಜಾರ್ಜಶೀಟ್ ಸಲ್ಲಿಸಲು ಪೊಲೀಸರು ಸಿದ್ಧತೆ ವಾಗಿದ್ದಾರೆ. ಈ ಮಧ್ಯೆ ಬಳ್ಳಾರಿ ಜೈಲಿನ ನಿಯಮಗಳು ದರ್ಶನ್ ರನ್ನು ಮತ್ತಷ್ಟು ಕುಗಿಸಿವೆ. ಅಕ್ಕ ಪಕ್ಕದ ಸೆಲ್ ನಲ್ಲಿ ಯಾರು ಇಲ್ಲದೆ ದರ್ಶನ್ ಒಂಟಿಯಾಗಿದ್ದಾರೆ. ಕೇವಲ ಜೈಲು ಸಿಬ್ಬಂದಿಯೊಂದಿಗಷ್ಟೇ ಮಾತನಾಡಿ ಹೊರ ಜಗತ್ತಿನ ಮಾಹಿತಿ ಪಡೆಯುತ್ತಿದ್ದಾರೆ.
ಇಷ್ಟು ದಿನ ಪುಸ್ತಕ ಯೋಗ ಧ್ಯಾನ ಅಂತ ಕಾಲ ಕಳೆಯುತ್ತಿದ್ದ ದರ್ಶನ್ ಈಗ ಜೈಲು ಅಧಿಕಾರಿಗಳಿಗೆ ಟಿವಿ ಬೇಕು ಎಂದು ಬೇಡಿಕೆಯಿಟ್ಟಿದ್ದಾರಂತೆ. ಒಂಟಿತನ, ಹತಾಶೆ, ಕುಟುಂಬದಿಂದ, ಸ್ನೇಹಿತರಿಂದ ದೂರಾಗಿರುವ ದರ್ಶನ್ ಬಳ್ಳಾರಿ ಜೈಲಿನ ವಾತಾವರಣಕ್ಕೆ ಒಗ್ಗಿಕೊಳ್ಳಲು ಆಗದೇ ಪರದಾಡುತ್ತಿದ್ದಾರಂತೆ. ಹೀಗಾಗಿ ಒಂದು ಟಿವಿ ಬೇಕು ಎಂದು ಮನವಿ ಮಾಡಿದ್ದಾರೆ.
ಇದರ ಜೊತೆಗೆ ಮಗನನ್ನು ಭೇಟಿ ಮಾಡಬೇಕು ಎಂದು ಜೈಲು ಅಧಿಕಾರಗಳ ಎದುರು ಬೇಡಿಕೆ ಇಟ್ಟಿದ್ದಾರೆ. ದರ್ಶನ್ ಬಳ್ಳಾರಿ ಜೈಲಿಗೆ ಶಿಫ್ಟ್ ಆದ ಬಳಿಕ ಪತ್ನಿ ವಿಜಯಲಕ್ಷ್ಮಿ ಮಾತ್ರವೇ ಬಂದು ಹೋಗಿದ್ದಾರೆ. ಹೀಗಾಗಿ ಮಗ ವಿನೀಶ್ ನನ್ನು ನೋಡಲು ದರ್ಶನ್ ಮನ ಚಡಪಡಿಸುತ್ತಿದೆ. ಅಭಿಮಾನಿಗಳನ್ನು ಜೈಲಿನತ್ತ ಬರದಂತೆ ನೋಡಿಕೊಳ್ಳಿ ಎಂದು ಹೇಳಿರುವ ದರ್ಶನ್, ಮಗನನ್ನು ಕರೆದುಕೊಂಡು ಬನ್ನಿ ಎಂದು ಜೈಲಾಧಿಕಾರಿಗಳ ಬಳಿ ಮನವಿ ಮಾಡಿದ್ದಾರಂತೆ.