ಉತ್ತರ ಅಮೆರಿಕಾ ಮೂಲದ ಸಂಸ್ಥೆಯೊಂದು ಭಾರತೀಯ ಮೂಲಕ ಕೋಫೋರ್ಜ್ ಹೆಸರಿನ ಐಟಿ ಕಂಪನಿಗೆ ಭಾರೀ ಪ್ರಮಾಣದ ದಂಡದ ನೋಟಿಸ್ ಜಾರಿ ಮಾಡಿದೆ. ಹ್ಯಾಕಿಂಗ್ ಆರೋಪ ಮಾಡಿರುವ ಅಮೆರಿಕಾ ಮೂಲಕ ಕಂಪೆನಿಯು 11 ಮಿಲಿಯನ್ ಅಮೆರಿಕನ್ ಡಾಲರ್ಗೂ ಹೆಚ್ಚು (ಸುಮಾರು 92 ಕೋಟಿ ರೂ.) ದಂಡ ಪಾವತಿಸಬೇಕೆಂದು ನೋಟಿಸ್ ನೀಡಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಐಟಿ ಕಂಪನಿ ಕೋಫೋರ್ಜ್, ಅಮೆರಿಕ ಮೂಲದ ಸಂಸ್ಥೆ ನಷ್ಟ ಪರಿಹಾರದ ರೂಪದಲ್ಲಿ 7,597,780 ಅಮೆರಿಕನ್ ಡಾಲರ್ ಹಣವನ್ನು ಭರಿಸಬೇಕೆಂದು ನೋಟಿಸ್ ನೀಡಿರೋದಾಗಿ ಷೇರು ಮಾರುಕಟ್ಟೆಗೆ ಮಾಹಿತಿ ನೀಡಿದೆ.
ಕೋಫೋರ್ಜ್ ಸಂಸ್ಥೆಯು ಸಂಭಾವ್ಯ ನಷ್ಟ ಪರಿಹಾರ ರೂಪದಲ್ಲಿ 4,276,800 ಅಮೆರಿಕನ್ ಡಾಲರ್ ನೀಡೋದಾಗಿ ಪೂರಕ ನೋಟಿಸ್ ನೀಡಿದ್ದು ಈ ವಿಚಾರವಾಗಿ ಅಮೆರಿಕದ ಕಂಪನಿ ಜೊತೆ ಮಾತುಕತೆ ನಡೆಯುತ್ತಿದೆ, ಆದರೆ ಯಾವುದೇ ಅಂತಿಮ ನಿರ್ಧಾರಕ್ಕೆ ಬಂದಿಲ್ಲ ಎಂದು ರಾಷ್ಟ್ರೀಯ ಷೇರು ವಿನಿಮಯ (ಎನ್ಎಸ್ಇ)ಗೆ ವಿವರಣೆ ನೀಡಿದೆ.
ಷೇರು ಮಾರುಕಟ್ಟೆಯಲ್ಲಿ ತನ್ನ ಷೇರುಗಳ ವಿನಿಯಮ ಮಾಡುತ್ತಿರುವ ಹಿನ್ನೆಲೆಯಲ್ಲಿ ಎನ್ಎಸ್ಇ ನಿಯಮ 30ರ ಅನ್ವಯ ಕೋಫೋರ್ಜ್ ಸಂಸ್ಥೆ ಮಾಹಿತಿ ಬಹಿರಂಗ ಮಾಡಿದ್ದು, ತನಗೆ ಅಮೆರಿಕದ ಸಂಸ್ಥೆಯಿಂದ ನೋಟಿಸ್ ಬಂದಿರೋದಾಗಿ ಹೇಳಿದೆ. ನಷ್ಟ ಪರಿಹಾರ ಭರಿಸುವಂತೆ ತನ್ನ ಅಂಗ ಸಂಸ್ಥೆಯಾದ ಕೋಫೋರ್ಜ್ ಇಂಕ್ಗೆ ಅಮೆರಿಕ ಸಂಸ್ಥೆ ನೋಟಿಸ್ ಕೊಟ್ಟಿದೆ ಎಂದು ಹೇಳಿದೆ. ನೋಟಿಸ್ ಕೊಟ್ಟಿರುವ ಸಂಸ್ಥೆ ಉತ್ತರ ಅಮೆರಿಕದಲ್ಲಿ ಇದೆ. ಈ ಕುರಿತಾವು ತಾವು ಪೂರಕ ನೋಟಿಸ್ ಕೂಡಾ ನೀಡಿದ್ದು, ಈ ನೋಟಿಸ್ಗೆ ಅಮೆರಿಕ ಕಂಪನಿ ಇನ್ನೂ ಯಾವುದೇ ಉತ್ತರ ನೀಡಿಲ್ಲ ಎಂದು ಹೇಳಿದೆ.